ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಪಾಕಿಸ್ತಾನಕ್ಕೆ ಭಾರಿ ಆರ್ಥಿಕ ಹೊಡೆತ ನೀಡಿದ್ದು, ದೇಶದೊಳಗಿನ ತನ್ನ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಸುಮಾರು 25 ವರ್ಷಗಳ ಹಿಂದೆ ಪಾಕಿಸ್ತಾನದ ಮಣ್ಣಿನಲ್ಲಿ ತನ್ನ ಪಾದಾರ್ಪಣೆ ಮಾಡಿದ ಬಿಲ್ ಗೇಟ್ಸ್ ಅವರ ಈ ಸಂಸ್ಥೆ, ಈಗ ಅದರ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚುತ್ತಿದೆ.
ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ನ ಕಾರ್ಯಾಚರಣೆಗಳು ಶಿಕ್ಷಣ, ಸಾಫ್ಟ್‌ವೇರ್ ಅಭಿವೃದ್ಧಿ, ಮತ್ತು ಉದ್ಯಮಶೀಲತೆಯ ಬೆಳವಣಿಗೆಗೆ ಸಹಾಯ ಮಾಡಿದ್ದವು. ಈ ಹಿನ್ನೆಲೆಯಲ್ಲಿ, ಸಂಸ್ಥೆಯ ನಿರ್ಧಾರವು ಆರ್ಥಿಕವಾಗಿ ಪಾಕಿಸ್ತಾನಕ್ಕೆ ದೊಡ್ಡ ನಷ್ಟವನ್ನುಂಟುಮಾಡಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್ ಪಾಕಿಸ್ತಾನದ ಮುಖ್ಯಸ್ಥ ಜಾವೇದ್ ರೆಹಮಾನ್, ಇದು ಕೇವಲ ಕಂಪನಿಯ ನಿರ್ಧಾರವಲ್ಲ, ಇದು ಒಂದು ಯುಗದ ಅಂತ್ಯ. ನಾವು ಈ ದೇಶದಲ್ಲಿ ಮಾಡಿದ ಕೆಲಸ ಮತ್ತು ಕೊಡುಗೆಗಳು ಮರೆಯಲಾಗದವು ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಪಾಕಿಸ್ತಾನ ಈಗಾಗಲೇ ಆರ್ಥಿಕ ಕುಸಿತ, ಡಾಲರ್ ಕೊರತೆ ಮಧ್ಯೆ ಹೋರಾಡುತ್ತಿರುವಾಗ, ಅಂತಾರಾಷ್ಟ್ರೀಯ ಸಂಸ್ಥೆಗಳು ದೇಶದಿಂದ ತಮ್ಮ ಬಂಡವಾಳ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಇಡೀ ಆರ್ಥಿಕ ವ್ಯವಸ್ಥೆಗೆ ತೀವ್ರ ಪರಿಣಾಮ ಬೀರುತ್ತಿದೆ.
ಈಗ ಮೈಕ್ರೋಸಾಫ್ಟ್‌ನ ನಿರ್ಧಾರ ಕೂಡ ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಶಾಕ್ ತರಬಹುದಾದ ಘಟನೆಯಾಗಿ ಪರಿಣಮಿಸಿದೆ.








