ಚಾಂಪಿಯನ್ ನೀರಜ್ ಚೋಪ್ರಾ ಹೆಸರಿಗೆ 2025ರ ಎನ್ಸಿ ಕ್ಲಾಸಿಕ್ ಚಿನ್ನದ ಪದಕ ಸೇರಿಕೊಂಡಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಎನ್ ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮಿಂಚು ಹರಿಸಿದ್ರು.
ತವರು ಅಭಿಮಾನಿಗಳು ಹಾಗೂ ತನ್ನ ಕುಟುಂಬಸ್ಥರ ಎದುರು ಸ್ಪರ್ಧೆಗಿಳಿದಿದ್ದ ನೀರಜ್ ಚೋಪ್ರಾ, ತನ್ನ ಮೂರನೇ ಎಸೆತದಲ್ಲಿ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡ್ರು. ಬಹು ನಿರೀಕ್ಷಿತ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 86.18 ಮೀಟರ್ ದೂರ ಎಸೆದು ಚಿನ್ನದ ನಗೆ ಬೀರಿದ್ರು. ಈ ಮೂಲಕ ನೀರಜ್ ಚೋಪ್ರಾ ಸತತ ಮೂರನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ರು. ಈ ಹಿಂದೆ ನೀರಜ್ ಚೋಪ್ರಾ, ಪ್ಯಾರಿಸ್ ಡೈಮಂಡ್ ಹಾಗೂ ಪೊಲಂಡ್ನ ಗೋಲ್ಡನ್ ಸ್ಪೈಕ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಕೀನ್ಯಾದ ಚಾಂಪಿಯನ್ ಎಸೆತಗಾರ ಜುಲಿಯಸ್ ಯೆಗೋ 84.51 ಮೀಟರ್ ಹಾಗೂ ಶ್ರೀಲಂಕಾದ ರುಮೇಶ್ ಪತಿರಗೆ 84.34 ಮೀಟರ್ ದೂರ ಎಸೆದು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡ್ರು.








