ಮಳೆಗಾಲದ ಸೊಗಸಿಗೆ ಸದಾ ಸಾಕ್ಷಿಯಾಗುವ ನಮ್ಮ ಮಲೆನಾಡು, ಕರಾವಳಿಯಲ್ಲಿ ಮುಂಗಾರು ಮಳೆ ಹನಿಗಳ ನೀನಾದ ಕೇಳುವುದು ಎಂಥವರ ಮನಸ್ಸಿಗೂ ಆಹ್ಲಾದಕರ ಭಾವ ಉಂಟುಮಾಡುವ ಅನುಭೂತಿ.
ನೀವು ಗಮನಿಸಿ ನೋಡಿ ಧೋ ಎಂದು ಸುರಿವ ಮಳೆಯ ಅಬ್ಬರ ಹೇಗೆ ಇರುತ್ತೆ ಎಂಬುದನ್ನು ಪ್ರಾರಂಭದ ಚಿಟಪಟ ಮಳೆ ಹನಿಗಳ ಶಬ್ದ ಮಾತ್ರದಿಂದಲೇ ಅರಿತುಬಿಡಬಹುದು. ನಿಮ್ಮ ಮನೆ ತೋಟಗಳ ಮಧ್ಯೆ ಅಥವಾ ಅರಣ್ಯದ ಪ್ರದೇಶದ ಅಂಚಿನಲ್ಲಿದ್ರೆ ಮಳೆ ಹನಿಗಳುÀ ಆವರಿಸಿಕೊಂಡ ವಾತಾವರಣ ಅದೊಂದು ಭಗೆಯ ಔರಾ ಸೃಷ್ಟಿಸಿಕೊಂಡಿರುತ್ತದೆ. ಸಮೃದ್ಧವಾಗಿ ಮಳೆಯಾಗುವ ಮಲೆನಾಡು ಮತ್ತು ಕರಾವಳಿ ವಾಸಿಗಳಿಗೆ ಈ ಮಳೆಗಾಲದ ವಾತಾವರಣದ ಪ್ರಭಾವಳಿಯ (ಎಕೋಸ್) ಅನುಭವ ಇರುತ್ತದೆ.
saakshatv.com
ಹೀಗೆ ಇದು ಪದಗಳಲ್ಲಿ ವಿವರಿಸಲಾಗದ ಕೇವಲ ಅನುಭವಕ್ಕೆ ಮಾತ್ರ ನಿಲುಕುವ ಮಾಯೆಯಿದು.
ಅಂದ ಹಾಗೇ, ಇದ್ಯಾಕೆ ನೆನಪಾಯ್ತು ಅಂದ್ರೆ…!
ಸದ್ಯದ ಟೀಮ್ ಇಂಡಿಯಾದ ಯುವ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ ವೈಖರಿಯನ್ನು ನೋಡಿದಾಗ ಮುಂಗಾರು ಮಳೆಗಾಲದ ಶೀತಲ ವಾತಾವರಣ ಮತ್ತು ಮಳೆಯಬ್ಬರ, ಅದು ಸೃóóóಷ್ಠಿಸುವ ಔರಾ ಹಾಗೇ ಸುಮ್ಮನೆ ನೆನಪಾಯ್ತು..!
ಯಾಕಂದ್ರೆ ಶುಭ್ಮನ್ ಗಿಲ್ ಬ್ಯಾಟಿಂಗ್ ಶೈಲಿಯನ್ನು ಯಾರೊಂದಿಗೂ ಹೋಲಿಕೆ ಮಾಡೋಕೆ ಆಗಲ್ಲ. ಸಚಿನ್ ತೆಂಡುಲ್ಕರ್ ರೀತಿ ಕ್ಲಾಸ್ & ಮಾಸ್ ಅಲ್ಲ. ದ್ರಾವಿಡ್, ಲಕ್ಷ್ಮಣ್ ಥರಾ ಕ್ರಿಕೆಟ್ ಗ್ರಾಮರೂ ಅಲ್ಲ.. ವಿರಾಟ್ ಕೊಹ್ಲಿಯಂತೆ ಆಕ್ರಮಣಕಾರಿ ಪ್ರವೃತ್ತಿಯೂ ಅಲ್ಲ.. ಸ್ವಲ್ಪ ಮಟ್ಟಿಗೆ ಅಜರುದ್ದೀನ್ ಮಾದರಿಯಂತೆ ಅನ್ಸುತ್ತೆ. ಆದ್ರೂ ಶುಭ್ಮನ್ ಗಿಲ್ ಅಂದ್ರೆ ಶುಭ್ಮನ್ ಗಿಲ್…
ಪ್ರಿನ್ಸ್ ಗಿಲ್ ಬ್ಯಾಟಿಂಗ್ ಶೈಲಿಯನ್ನು ಯಾರೊಂದಿಗೂ ಹೋಲಿಕೆ ಮಾಡೋದು ಬೇಡ. ನಾನು ನಾನೇ ಎಂಬಂತೆ ಶುಭ್ಮನ್ ಗಿಲ್ ಅಂದ್ರೆ ಶುಭ್ಮನ್ ಗಿಲ್… ಅಷ್ಟೇ.. ಇಷ್ಟು ದಿನ ಬೇರೆಯವರ ಹವಾ.. ನಾನು ಬಂದ ಮೇಲೆ ನನ್ನದೇ ಹವಾ ಎಂಬಂತೆ ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
saakshatv.com
ತಾಳ್ಮೆ, ಏಕಾಗ್ರತೆ, ಅಬ್ಬರ ಎಲ್ಲವೂ ಗಿಲ್ ಬ್ಯಾಟಿಂಗ್‍ನಲ್ಲಿದೆ. ಎದುರಾಳಿ ಬೌಲರ್‍ಗಳನ್ನು ಫುಲ್ ಕನ್‍ಫ್ಯೂಸ್ ಮಾಡಿಕೊಂಡು ಬ್ಯಾಟಿಂಗ್ ಮಾಡೋ ಗಿಲ್ ಶೈಲಿ ತುಂಬಾನೇ ಇಷ್ಟವಾಗುತ್ತದೆ. ಮುಂಗಾರು ಮಳೆಯಂತೆ ಧೋ ಎಂದು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸೋದು ಗೊತ್ತು.. ಅಷ್ಟೇ ಸಂಯಮದಿಂದ ಎದುರಾಳಿ ಬೌಲರ್‍ಗಳ ಸಾಮಥ್ರ್ಯಕ್ಕೆ ತಕ್ಕ ಗೌರವ ನೀಡೋದು ಗೊತ್ತು.. ಒಟ್ಟಿನಲ್ಲಿ ಯಾರು ಊಹೆ ಕೂಡ ಮಾಡದ ರೀತಿಯಲ್ಲಿ ರನ್ ಗಳಿಸುವ ತಾಕತ್ತು ಗಿಲ್ ಬ್ಯಾಟಿಂಗ್‍ನಲ್ಲಿದೆ.
ಹಾಗೇ ನೋಡಿದ್ರೆ, ನನಗೆ ಅನ್ನಿಸಿದ್ದು ಶುಭ್ಮನ್ ಗಿಲ್ ಸ್ಟೈಲೀಸ್ ಆಟಗಾರನಲ್ಲ..ಕ್ಲಾಸ್ ಆಂಡ್ ಮಾಸ್ ಬ್ಯಾಟರ್ ಅಂತ ನಿಖರವಾಗಿ ಹೇಳೋಕೆ ಕೂಡ ಆಗಲ್ಲ. ಚಿಕ್ಕ ಬಾಲಕನಂತೆ ಎಂಜಾಯ್ ಮಾಡ್ಕೊಂಡು ಆಡುವ ರೀತಿಯನ್ನು ಗಿಲ್ ಮೈಗೂಡಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ.. ಗಿಲ್ ನೋಡೋಕೆ ಸೈಲೆಂಟ್.. ಆದ್ರೆ ಬ್ಯಾಟ್ ಹಿಡಿದು ಕ್ರೀಸ್‍ಗಿಳಿದ್ರೆ ಅಷ್ಟೇ ವೈಲೆಂಟ್ ಕೂಡ ಹೌದು. ಎಡ್ಜ್ ಬಾಸ್ಟನ್ ಟೆಸ್ಟ್ ಪಂದ್ಯಕ್ಕೆ ಮುನ್ನವೇ ಈ ಪಂದ್ಯವನ್ನು ಗೆದ್ದೇ ಗೆಲ್ತೀವಿ ಅಂತ ಹೇಳೋಕೆ ಕೂಡ ಗಟ್ಸ್ ಇರಬೇಕು. ಯಾಕಂದ್ರೆ ಎಡ್ಜ್ ಬಾಸ್ಟನ್ ಅಂಗಣದಲ್ಲಿ ಭಾರತ ಆಡಿರುವ ಏಳು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಅಂತಹುದರಲ್ಲಿ ಗಿಲ್ ಈ ಪಂದ್ಯವನ್ನು ಗೆದ್ದೇ ಗೆಲ್ತೀವಿ ಅಂತ ಆತ್ಮವಿಶ್ವಾಸದಿಂದಲೇ ಹೇಳಿರುವುದು ಗಿಲ್ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹುಡುಗಾಟದ ಹುಡುಗ ಹುಡುಗಾಟದ ಹುಡುಗರನ್ನು ನಂಬಿಕೊಂಡು ಗೆದ್ದೇ ಗೆಲ್ತೀವಿ ಅಂತ ಹೇಳುವುದು ಸುಲಭ. ಆದ್ರೆ ಅದನ್ನು ಕಾರ್ಯರೂಪಕ್ಕೆ ತರೋದಕ್ಕೆ ಎಂಟೆದೆ ಬೇಕು. ಜೈಸ್ವಾಲ್, ರಾಹುಲ್, ಪಂತ್, ರವೀಂದ್ರ ಜಡೇಜಾ ಅತ್ಯುತ್ತಮವಾಗಿ ಆಡಿದ್ರೂ ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಆಡಿದ ಗಿಲ್ ಆಟಕ್ಕೆ ಎಂಥವರು ಕೂಡ ಮನಸೋಲಲೇಬೇಕು.
saakshatv.com
ಒಂದು ಹಂತದಲ್ಲಿ ಗಿಲ್ ಯಾಕೆ ಇನಿಂಗ್ಸ್ ಡಿಕ್ಲೇರ್ ಮಾಡಿಲ್ಲ ಎಂಬ ಪ್ರಶ್ನೆ ಮೂಡಿದ್ರೂ ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಸವಾಲು ಒಡ್ಡಿದಾಗ ಒತ್ತಡಕ್ಕೆ ಸಿಲುಕಿಸಬಹುದು ಎಂಬ ಗೇಮ್ ಪ್ಲ್ಯಾನ್ ಮಾಡಿರೋದು ಗಿಲ್ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಮೊದಲ ಇನಿಂಗ್ಸ್‍ನಲ್ಲಿ ದ್ವಿಶತಕ, ಎರಡನೇ ಇನಿಂಗ್ಸ್‍ನಲ್ಲಿ 150 ಪ್ಲಸ್ ರನ್ ಹೊಡೆದ ರೀತಿ ಕೂಡ ಅದ್ಭುತವಾಗಿತ್ತು. ಮುಂಗಾರು ಮಳೆಯಂತೆ ಆಗಾಗ ಅಬ್ಬರದ ಬ್ಯಾಟಿಂಗ್ ಹಾಗೂ ಮಳೆ ನಿಂತು ಹೋದ ಮೇ¯ ತುಂತುರು ಹನಿಗಳಂತೆ ನಿಧಾನಗತಿಯಯಲ್ಲಿ ಆಡಿದ ಗಿಲ್ ಬ್ಯಾಟಿಂಗ್ ವೈಖರಿ ಮುಂದೆ ಟೆಸ್ಟ್ ಕ್ರಿಕೆಟ್‍ನ ಅಪರೂಪದ ದಾಖಲೆಗಳು ಸದ್ದಿಲ್ಲದೆ ಅವರ ಹೆಸರಿಗೆ ಅಂಟಿಕೊಂಡಿವೆ.
ಸುಮಾರು 150 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಡಬಲ್ ಸೆಂಚೂರಿ ಹಾಗೂ 150 ಪ್ಲಸ್ ರನ್ ಹೊಡೆದ ದಾಖಲೆಯೂ ಗಿಲ್ ಹೆಸರಿಗೆ ಸೇರಿಕೊಂಡಿದೆ. ಅಷ್ಟೇ ಅಲ್ಲ, ಒಂದೇ ಟೆಸ್ಟ್ ಪಂದ್ಯದಲ್ಲಿ 430 ರನ್ ಸಿಡಿಸಿದ ದಾಖಲೆಯನ್ನು ಗಿಲ್ ಬರೆದಿದ್ದಾರೆ. ಜೊತೆಗೆ ಡಾನ್ ಬ್ರಾಡ್ಮನ್, ಸುನೀಲ್ ಗಾವಸ್ಕರ್ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಸಚಿನ್, ದ್ರಾವಿಡ್, ಕೊಹ್ಲಿ ಮಾಡಿರದ ದಾಖಲೆಯನ್ನು ಗಿಲ್ ತನ್ನ ಹೆಸರಿಗೆ ಅಧಿಕಾರಯುತವಾಗಿ ಬರೆಸಿಕೊಂಡಿದ್ದಾರೆ. ಇದಕ್ಕಾಗಿಯೇ ವಿರಾಟ್ ಕೊಹ್ಲಿ ಗಿಲ್ ಅವರಿಗೆ ಸ್ಟಾರ್ ಬಾಯ್ ಎಂಬ ಬಿರುದನ್ನು ನೀಡಿರೋದು ಅಂತ ಅನ್ಸುತ್ತೆ. ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ಶುಭ್ಮನ್ ಗಿಲ್.. ಶುಬ್ಬಿಯದ್ದೇ ಹವಾ…! ಇದು ಇದೇ ರೀತಿ ಮುಂದುವರಿದ್ರೆ ವಿಶ್ವ ಕ್ರಿಕೆಟ್‍ನಲ್ಲಿ ಕ್ರಿಕೆಟ್ ದೇವ್ರು, ವಿಶ್ವ ಕ್ರಿಕೆಟ್‍ನ ಕಿಂಗ್.. ವಿಶ್ವ ಕ್ರಿಕೆಟ್‍ನ ಪ್ರಿನ್ಸ್ ಎಂಬ ಹೆಗ್ಗಳಿಕೆ, ಗೌರವ ಎಲ್ಲವೂ ಟೀಮ್ ಇಂಡಿಯಾ ಆಟಗಾರನಿಗೆ ಸಿಗುತ್ತೆ.
saakshatv.com
ಒಟ್ಟಾರೆ, ಟೀಮ್ ಇಂಡಿಯಾಗೆ ಯಾರು ಅನಿವಾರ್ಯ ಅಲ್ಲ.. ಒಬ್ರೂ ತೆರೆಮರೆಗೆ ಸರಿದ್ರೆ ಇನ್ನೊಬ್ಬರ ಉದಯವಾಗುತ್ತದೆ.. ಕಳೆದ ಮೂರು ನಾಲ್ಕು ದಶಕಗಳಲ್ಲಿ ಇದೇ ರೀತಿ ವಿಶ್ವ ಕ್ರಿಕೆಟ್‍ಗೆ ಭಾರತೀಯ ಕ್ರಿಕೆಟ್ ಕೊಡುಗೆಯಾಗಿ ನೀಡುತ್ತಿದೆ. ಗವಾಸ್ಕರ್ ನಂತ್ರ ಸಚಿನ್, ಸಚಿನ್ ನಂತ್ರ ಕೊಹ್ಲಿ.. ಕೊಹ್ಲಿ ನಂತ್ರ ಗಿಲ್/ ಪಂತ್.. ಮುಂದೊಂದು ದಿನ ವೈಭವ್ ಸೂರ್ಯವಂಶಿ… ನೆನಪಿಟ್ಟುಕೊಳ್ಳಿ..ಭಾರತೀಯ ಕ್ರಿಕೆಟ್ ನಿಂತ ನೀರಲ್ಲ.. ದಶಕಕ್ಕೊಬ್ಬ ಹೀರೋ ಉದಯಿಸುತ್ತನೇ ಇರುತ್ತಾನೆ.. ಆತ ವಿಶ್ವ ಕ್ರಿಕೆmನ್ನು ರೂಲ್ ಮಾಡ್ತಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಸನತ್ ರೈ








