ಮೈಸೂರು : ಕೋವಿಡ್ ಕಿಟ್ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ಮಾಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್, ಪ್ರತಿಕ್ರಿಯೆ ನೀಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ನು ಬುದ್ದಿಕಲಿತಿಲ್ಲ ಅನ್ಸುತ್ತೆ, ವಿರೋಧ ಪಕ್ಷದ ನಾಯಕರು ಅಂದಾಕ್ಷಣ ಎಲ್ಲವನ್ನು ವಿರೋಧ ಮಾಡೋದಲ್ಲ. ಕಾಂಗ್ರೆಸ್ ಪಕ್ಷ ವಾಶ್ ಔಟ್ ಮಾಡಿ ಆಯ್ತು, ಈಗಲೂ ಹಂಗೆ ಮಾತನಾಡ್ತಾರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ನೀವು ಲೆಕ್ಕ ಕೇಳಿ, ಅದು ಬಿಟ್ಟು ಈಗ ಲೆಕ್ಕ ಕೇಳುತ್ತ ಭ್ರಷ್ಟಾಚಾರ ಆಗಿದೆ ಅಂದ್ರೆ ಏನರ್ಥ..? ಯಾವುದರಲ್ಲಿ ಭ್ರಷ್ಟಾಚಾರ ಆಗಿದೆ ಹೇಗೆ..? ಎಂದು ಸಿದ್ದರಾಮಯ್ಯ ಅವರನ್ನು ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದರು. ಸಿಎಂ ಬನ್ನಿ ಲೆಕ್ಕ ಕೊಡ್ತಿನಿ ಅಂದಿದ್ದಾರೆ ಅಲ್ವಾ..? ಹೋಗಿ ಲೆಕ್ಕ ಪರಿಶೀಲನೆ ಮಾಡಿ, ಅದು ಬಿಟ್ಟು ವಿರೋಧ ಪಕ್ಷ ಅಂತ ಸುಮ್ಮನೆ ವಿರೋಧ ಮಾಡೋದಲ್ಲ ಎಂದು ಗುಡುಗಿದರು.








