ADVERTISEMENT
Friday, April 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೆರಿಕಾ ಜೊತೆ ಸೇರಿದ ಚೀನಿ ವಿಜ್ಞಾನಿಗಳು ಚೀನಾ ಕುತಂತ್ರವನ್ನು ಬಯಲು ಮಾಡಿದ್ರಾ …!

admin by admin
July 13, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಅಮೆರಿಕಾ ಜೊತೆ ಸೇರಿದ ಚೀನಿ ವಿಜ್ಞಾನಿಗಳು ಚೀನಾ ಕುತಂತ್ರವನ್ನು ಬಯಲು ಮಾಡಿದ್ರಾ …!

ವಾಷಿಂಗ್ಟನ್, ಜುಲೈ 13: ಜಾಗತಿಕವಾಗಿ ಕೋವಿಡ್-19 ವೈರಸ್ ನ ಜನ್ಮ ಸ್ಥಾನ ವುಹಾನ್ ಎಂಬುವುದು ಎಲ್ಲರಿಗೂ ವಿಧಿತವಾಗಿರುವ ಸತ್ಯ. ಆದರೆ ತನ್ನ ಕುತಂತ್ರ ಬುದ್ಧಿ ಬಿಡದ ಚೀನಾ ಈ ವೈರಸ್ ನನ್ನ ದೇಶದಲ್ಲಿ ಹುಟ್ಟಿದಲ್ಲ ಎಂದು ವಾದಿಸುತ್ತಲೇ ಇದೆ. ಹೇಗಾದರೂ ಸರಿಯೇ ಚೀನಾವನ್ನು ಜಗತ್ತಿನ ಮುಂದೆ ತಪ್ಪಿತಸ್ಥನೆಂದು ಜಾಹೀರು ಮಾಡಬೇಕು ಎಂದು ಪಣತೊಟ್ಟಿರುವ ಅಮೆರಿಕ ಇದೀಗ ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದೆ. ‌

Related posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

April 24, 2026
150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

April 24, 2026


ವುಹಾನ್​ನ ವೈರಾಣು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವೈರಾಣು ತಜ್ಞರು ಜೀವ ಭಯದಿಂದ ರಾತ್ರೋರಾತ್ರಿ ಚೀನಾದಿಂದ ತಲೆಮರೆಸಿಕೊಂಡು ಅಮೆರಿಕಾ ಸೇರಿದ್ದು, ಚೀನಾದ ಪಾತ್ರ ಕುರಿತು ಇಂಚಿಂಚು ಮಾಹಿತಿಯನ್ನು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮಾಜಿ ಮುಖ್ಯ ತಂತ್ರಗಾರಿಕಾ ಅಧಿಕಾರಿ ಸ್ಟೀವ್​ ಬನ್ನಾನ್​ ಅವರು ತಿಳಿಸಿದ್ದು ವುಹಾನ್​ ಎಂಬುದು ವಿಶ್ವದ ವೈರಾಣುಗಳ ಚೆರ್ನೋಬಿಲ್​ ಎಂದು ವರ್ಣಿಸಿದ್ದಾರೆ.

ವುಹಾನ್​ನಲ್ಲಿ ಸಾರ್ಸ್​ ರೀತಿಯ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂದು ಮೆಸೆಜಿಂಗ್​ ಆ್ಯಪ್ ​ ಮೂಲಕ ಇತರ ವೈದ್ಯರಿಗೆ ಮಾಹಿತಿಯನ್ನು ನೀಡಿ ಚೀನಾ ‌ಸರ್ಕಾರದಿಂದ ಪ್ರಾಣಭಯಕ್ಕೆ ಸಿಲುಕಿ, ರಾತ್ರೋರಾತ್ರಿ ಚೀನಾದಿಂದ ತಲೆಮರೆಸಿಕೊಂಡು ಅಮೆರಿಕಾ ಸೇರಿದ ವಿಜ್ಞಾನಿ ಡಾ. ಲಿ-ಮೆಂಗ್ ಯಾನ್ ಅವರ ಜೊತೆ ಸುದ್ದಿ ವಾಹಿನಿ ನಡೆಸಿದ ಸಂದರ್ಶನದ ಸಂಕ್ಷಿಪ್ತ ವರದಿ ಇಲ್ಲಿದೆ.

ಹಾಂಗ್ ಕಾಂಗ್ ವಿಜ್ಞಾನಿ ಡಾ. ಲಿ-ಮೆಂಗ್ ಯಾನ್ ಅವರು ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಾ, ಚೀನಾದ ಸರ್ಕಾರಕ್ಕೆ ಕೋವಿಡ್-19 ಸೋಂಕಿನ ಬಗ್ಗೆ ಮೊದಲೇ ತಿಳಿದಿತ್ತು ಮತ್ತು ಆಕೆಯ ಲ್ಯಾಬ್ ಮೇಲ್ವಿಚಾರಕರು ವೈರಸ್ ಕುರಿತಾದ ಆರಂಭಿಕ ಸಂಶೋಧನೆಯನ್ನು ನಿರ್ಲಕ್ಷಿಸಿದರು ಎಂದು ಹೇಳಿದ್ದಾರೆ. ನಾನು ಎಲ್ಲಿ ಸತ್ಯವನ್ನು ಬಾಯಿಬಿಡುತ್ತೇನೆ ಎಂಬ ಕಾರಣಕ್ಕೆ ಚೀನಾ ಸರ್ಕಾರದಿಂದ ಜೀವಭಯ ಎದುರಿಸುತ್ತಿದ್ದು, ಕೊರೋನವೈರಸ್ ಎಷ್ಟು ಅಪಾಯಕಾರಿ ಎಂಬ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಲು ಚೀನಾದಿಂದ ತಪ್ಪಿಸಿಕೊಂಡು ಯು.ಎಸ್.ಗೆ ಬಂದು ತಲುಪಿದ್ದೇನೆ‌ ಎಂದು ಅವರು ಹೇಳಿದ್ದಾರೆ.

ಅಮೆರಿಕಾದ ಅಜ್ಞಾತ ಸ್ಥಳದಿಂದ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಲೀ ಮೆಂಗ್ ಯಾನ್, ಹಾಂಕಾಂಗ್ ಸಾರ್ವಜನಿಕ ಆರೋಗ್ಯ ವಿವಿಯಲ್ಲಿ ನಾನು ವೈರಾಣು ಶಾಸ್ತ್ರಜ್ಞೆ ಆಗಿ ಕೆಲಸ ಮಾಡಿದ್ದು, ಕೊರೋನಾ ವೈರಸ್ ಬಗ್ಗೆ ಸಂಶೋಧನೆ ನಡೆಸಿದ ಮೊದಲ ವಿಜ್ಞಾನಿಗಳಲ್ಲಿ ನಾನು ಒಬ್ಬಳು.‌ 2019 ರ ಕೊನೆಯಲ್ಲಿ ಸಾರ್ಸ್ ತರಹದ ಪ್ರಕರಣಗಳನ್ನು ಪರಿಶೀಲಿಸಲು ನನ್ನನ್ನು ವುಹಾನ್​ನ ವೈರಾಣು ತಯಾರಿಕಾ ಘಟಕದಲ್ಲಿ ಮೇಲ್ವಿಚಾರಕರಾಗಿ ನೇಮಿಸಲಾಗಿತ್ತು ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಜನರಿಗೆ ಸೋಂಕು ಹರಡುವ ಮೊದಲೇ ಚೀನಾ ಸರ್ಕಾರಕ್ಕೆ ಈ ಬಗ್ಗೆ ವಿಜ್ಞಾನಿಗಳಾದ ನಾವು ಎಚ್ಚರಿಕೆ ಕೊಟ್ಟಿದ್ದೆವು. ಮನುಷ್ಯರಿಂದ ಮನುಷ್ಯರಿಗೆ ವೈರಸ್ ಹರಡುವ ಸಾಧ್ಯತೆ ಬಗ್ಗೆ ಹೇಳಿದರೂ ಚೀನಾ ಸರ್ಕಾರ ನಮ್ಮ ‌ಮಾತು ಕಿವಿಗೆ ‌ಹಾಕಿಕೊಳ್ಳಲಿಲ್ಲ.


ತನ್ನ ಆವಿಷ್ಕಾರಗಳನ್ನು ನಿರ್ಲಕ್ಷಿಸಿದ ಕಾರಣಕ್ಕೆ ನಾನು ಲ್ಯಾಬ್ ಮೇಲ್ವಿಚಾರಕರಿಗೆ ವರದಿ ಮಾಡಿದ್ದಾಗಿ ಅವರು ಹೇಳಿದ್ದು, ಚೀನಾ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಇದರಿಂದ ನೀವು ತೊಂದರೆಗೆ ಸಿಲುಕಬಹುದು. ಹಾಗಾಗಿ ಸುಮ್ಮನಿರಲು ಅವರು ಸೂಚಿಸಿದರು ಎಂದು ಯಾನ್ ಹೇಳಿದ್ದಾರೆ.
ಅಂತಿಮವಾಗಿ ನಾನು ವೈರಸ್ ಬಗ್ಗೆ ತಿಳಿದಿರುವ ಮಾಹಿತಿಯನ್ನು ‌ಬ್ಲಾಗ್ ನಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದೆ. ಸಾರ್ಸ್ ರೀತಿಯ ಹೊಸ ರೋಗ ಲಕ್ಷಣ ಹೊಂದಿರುವ ರೋಗಿಗಳನ್ನು ನಾನು ಗುರುತಿಸಿದ್ದೇನೆ. ಹಾಗಾಗಿ ಸುರಕ್ಷಾ ಸಾಧನಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡೆ.
ಇದರಿಂದಾಗಿ ನಾನು ಅಪಾಯಕ್ಕೆ ‌ಸಿಲುಕಿದೆ. ಪ್ರಾಣಭಯದಿಂದ ವಿವಿಯ ಕ್ಯಾಂಪಸ್, ಅಲ್ಲಿನ ಕ್ಯಾಮರಾ, ಜನರ ಕಣ್ತಪ್ಪಿಸಿ ಓಡಾಡುವ ಸ್ಥಿತಿ ಇತ್ತು. ಹೀಗಾಗಿ ರಾತ್ರೋರಾತ್ರಿ ಚೀನಾದಿಂದ ತಪ್ಪಿಸಿಕೊಂಡು ಅಮೆರಿಕ ತಲುಪಿದೆ ಎಂದು ಹೇಳಿಕೊಂಡಿದ್ದಾರೆ.
ನಾನು ಚೀನಾವನ್ನು ಬಿಟ್ಟು ಓಡಿಹೋದಾಗಿನಿಂದ, ಚೀನಾ ಸರ್ಕಾರವು ನನ್ನನ್ನು ಮೌನವಾಗಿಡಲು ಸೈಬರ್ ದಾಳಿಯನ್ನು ಪ್ರಾರಂಭಿಸಿತು. ಅಷ್ಟೇ ಅಲ್ಲ ನನ್ನನ್ನು ಹಿಂದೆ ಕರೆಯಿಸಿ ಕೊಳ್ಳಲು ತನ್ನ ಕುಟುಂಬ ವರ್ಗಕ್ಕೆ ಕಿರುಕುಳ ಕೊಡುತ್ತಿದೆ.


ನಾನು ಲಾಸ್ ಏಂಜಲೀಸ್‌ ನಲ್ಲಿ ಇಳಿಯುವಾಗ, ಯು.ಎಸ್. ಅಧಿಕಾರಿಗಳು ನನಗಾಗಿ ಕಾಯುತ್ತಿದ್ದರು ಮತ್ತು ನಾನು ಅವರಿಗೆ ಸತ್ಯವನ್ನು ಹೇಳಬೇಕಾಗಿತ್ತು.
ನಾನು ಸರಿಯಾದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಅವರಿಗೆ ಸತ್ಯವನ್ನು ಹೇಳಿದೆ. ನನ್ನನ್ನು ಚೀನಾಕ್ಕೆ ವಾಪಸು ಕಳುಹಿಸಬೇಡಿ. ಕೋವಿಡ್-19 ವೈರಸ್ ‌ನ ಸತ್ಯವನ್ನು ಹೇಳಲು ಬಂದವಳು ನಾನು ಮತ್ತು ದಯವಿಟ್ಟು ನನ್ನನ್ನು ರಕ್ಷಿಸಿ. ಇಲ್ಲದಿದ್ದರೆ, ಚೀನಾ ಸರ್ಕಾರ ನನ್ನನ್ನು ಕೊಲ್ಲುತ್ತದೆ ಎಂದು ಯಾನ್ ಹೇಳಿದರು. ‌
ಅವರು ಅನುಮೋದಿತ ರಜೆಯಲ್ಲಿದ್ದರೂ ಸಹ, ಅವರು ನನ್ನ ಇಮೇಲ್‌ಗಳು ಮತ್ತು ಫೈಲ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಯಾಂಗ್ ಹೇಳಿದ್ದಾರೆ.
ಯಾನ್ ಇನ್ನು ಮುಂದೆ ನಮ್ಮ ಉದ್ಯೋಗಿಯಲ್ಲ ಎಂದು ಯುನಿವರ್ಸಿಟಿ ವಕ್ತಾರರು ಸುದ್ದಿ ವಾಹಿನಿಗೆ ತಿಳಿಸಿದ್ದು, ಡಾ ಲಿ-ಮೆಂಗ್ ಯಾನ್ ಇನ್ನು ಮುಂದೆ ವಿಶ್ವವಿದ್ಯಾಲಯದ ಸಿಬ್ಬಂದಿ ಸದಸ್ಯರಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಮ್ಮ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಯ‌ ಮೇಲಿನ ಗೌರವದಿಂದ, ನಾವು ಅವರ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ‌ಯುನಿವರ್ಸಿಟಿ ವಕ್ತಾರರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ ನ ಚೀನೀ ರಾಯಭಾರ ಕಚೇರಿ ಸುದ್ದಿ ವಾಹಿನಿಗೆ ಯಾನ್ ಯಾರೆಂದು ತಿಳಿದಿಲ್ಲ ಮತ್ತು ಚೀನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಿದೆ ಎಂದು ಸಮರ್ಥಿಸಿಕೊಂಡಿದೆ.
ನಾವು ಆ ವ್ಯಕ್ತಿಯ ಬಗ್ಗೆ ಕೇಳಿಲ್ಲ ಎಂದು ಇಮೇಲ್ ನಲ್ಲಿ ಹೇಳಿಕೆ ನೀಡಿರುವ ರಾಯಭಾರಿ ಕಚೇರಿ ಚೀನಾ ಸರ್ಕಾರವು ಕೋವಿಡ್-19 ವೈರಸ್ ಗೆ ಏಕಾಏಕಿ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದೆ. ಅದರ ಎಲ್ಲಾ ಪ್ರಯತ್ನಗಳನ್ನು ಪೂರ್ಣ ಪಾರದರ್ಶಕತೆಯೊಂದಿಗೆ ‘ಫೈಟಿಂಗ್ ಕೋವಿಡ್ -19: ಚೀನಾ ಇನ್ ಆಕ್ಷನ್’ ಎಂಬ ಶ್ವೇತಪತ್ರದಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ ಮತ್ತು ಸತ್ಯಗಳನ್ನು ಎಲ್ಲರಿಗೂ ಹೇಳುತ್ತವೆ ಎಂದು ಹೇಳಿದೆ.

Tags: americaChinaChinese scientistscoronavirusCOVID-19ScientistsWuhan
ShareTweetSendShare
Join us on:

Related Posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

by Shwetha
April 24, 2026
0

ತುಮಕೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಅತಿ ಕಡಿಮೆ ಬೆಲೆಗೆ ನೀಡಲಾಗಿದೆ ಎಂಬ ಗಂಭೀರ ಆರೋಪದ...

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

by Shwetha
April 24, 2026
0

ಭಾರತ ಇಂದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಆದರೆ ಇದೇ 150 ಕೋಟಿ ಜನಸಂಖ್ಯೆಯ ಮೇಲೆ ಇಂದು ಮೈಕ್ರೋಪ್ಲಾಸ್ಟಿಕ್ ಎಂಬ ಸದ್ದಿಲ್ಲದ ಕೊಲೆಗಾರ ದಾಳಿ...

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

by Shwetha
April 24, 2026
0

ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತೆಗೆದುಕೊಂಡ ನಿರ್ಧಾರದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದ ಹಿನ್ನಡೆ ಅನುಭವಿಸುವಂತಾಗಿದೆ...

ಮುಸ್ಲಿಮರು ಮತ್ತು ನಾವು ಯಾವತ್ತೂ ಸಹೋದರರು: ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ಯಾವಾಗಲೂ ಇದೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

ಈಗ ತಮಾಷೆಯನ್ನೂ ಮಾಡುವಂತಿಲ್ಲ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ

by Shwetha
April 24, 2026
0

ಬೆಂಗಳೂರು: ಕಬಡ್ಡಿ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ ಕುರಿತು ನೀಡಿದ್ದ ಹೇಳಿಕೆ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು...

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

by Shwetha
April 24, 2026
0

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಮರ ಶುರುವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram