ಅಮೆರಿಕಾ ಜೊತೆ ಸೇರಿದ ಚೀನಿ ವಿಜ್ಞಾನಿಗಳು ಚೀನಾ ಕುತಂತ್ರವನ್ನು ಬಯಲು ಮಾಡಿದ್ರಾ …!
ವಾಷಿಂಗ್ಟನ್, ಜುಲೈ 13: ಜಾಗತಿಕವಾಗಿ ಕೋವಿಡ್-19 ವೈರಸ್ ನ ಜನ್ಮ ಸ್ಥಾನ ವುಹಾನ್ ಎಂಬುವುದು ಎಲ್ಲರಿಗೂ ವಿಧಿತವಾಗಿರುವ ಸತ್ಯ. ಆದರೆ ತನ್ನ ಕುತಂತ್ರ ಬುದ್ಧಿ ಬಿಡದ ಚೀನಾ ಈ ವೈರಸ್ ನನ್ನ ದೇಶದಲ್ಲಿ ಹುಟ್ಟಿದಲ್ಲ ಎಂದು ವಾದಿಸುತ್ತಲೇ ಇದೆ. ಹೇಗಾದರೂ ಸರಿಯೇ ಚೀನಾವನ್ನು ಜಗತ್ತಿನ ಮುಂದೆ ತಪ್ಪಿತಸ್ಥನೆಂದು ಜಾಹೀರು ಮಾಡಬೇಕು ಎಂದು ಪಣತೊಟ್ಟಿರುವ ಅಮೆರಿಕ ಇದೀಗ ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದೆ.
ವುಹಾನ್ನ ವೈರಾಣು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವೈರಾಣು ತಜ್ಞರು ಜೀವ ಭಯದಿಂದ ರಾತ್ರೋರಾತ್ರಿ ಚೀನಾದಿಂದ ತಲೆಮರೆಸಿಕೊಂಡು ಅಮೆರಿಕಾ ಸೇರಿದ್ದು, ಚೀನಾದ ಪಾತ್ರ ಕುರಿತು ಇಂಚಿಂಚು ಮಾಹಿತಿಯನ್ನು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮುಖ್ಯ ತಂತ್ರಗಾರಿಕಾ ಅಧಿಕಾರಿ ಸ್ಟೀವ್ ಬನ್ನಾನ್ ಅವರು ತಿಳಿಸಿದ್ದು ವುಹಾನ್ ಎಂಬುದು ವಿಶ್ವದ ವೈರಾಣುಗಳ ಚೆರ್ನೋಬಿಲ್ ಎಂದು ವರ್ಣಿಸಿದ್ದಾರೆ.
ವುಹಾನ್ನಲ್ಲಿ ಸಾರ್ಸ್ ರೀತಿಯ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂದು ಮೆಸೆಜಿಂಗ್ ಆ್ಯಪ್ ಮೂಲಕ ಇತರ ವೈದ್ಯರಿಗೆ ಮಾಹಿತಿಯನ್ನು ನೀಡಿ ಚೀನಾ ಸರ್ಕಾರದಿಂದ ಪ್ರಾಣಭಯಕ್ಕೆ ಸಿಲುಕಿ, ರಾತ್ರೋರಾತ್ರಿ ಚೀನಾದಿಂದ ತಲೆಮರೆಸಿಕೊಂಡು ಅಮೆರಿಕಾ ಸೇರಿದ ವಿಜ್ಞಾನಿ ಡಾ. ಲಿ-ಮೆಂಗ್ ಯಾನ್ ಅವರ ಜೊತೆ ಸುದ್ದಿ ವಾಹಿನಿ ನಡೆಸಿದ ಸಂದರ್ಶನದ ಸಂಕ್ಷಿಪ್ತ ವರದಿ ಇಲ್ಲಿದೆ.
ಹಾಂಗ್ ಕಾಂಗ್ ವಿಜ್ಞಾನಿ ಡಾ. ಲಿ-ಮೆಂಗ್ ಯಾನ್ ಅವರು ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಾ, ಚೀನಾದ ಸರ್ಕಾರಕ್ಕೆ ಕೋವಿಡ್-19 ಸೋಂಕಿನ ಬಗ್ಗೆ ಮೊದಲೇ ತಿಳಿದಿತ್ತು ಮತ್ತು ಆಕೆಯ ಲ್ಯಾಬ್ ಮೇಲ್ವಿಚಾರಕರು ವೈರಸ್ ಕುರಿತಾದ ಆರಂಭಿಕ ಸಂಶೋಧನೆಯನ್ನು ನಿರ್ಲಕ್ಷಿಸಿದರು ಎಂದು ಹೇಳಿದ್ದಾರೆ. ನಾನು ಎಲ್ಲಿ ಸತ್ಯವನ್ನು ಬಾಯಿಬಿಡುತ್ತೇನೆ ಎಂಬ ಕಾರಣಕ್ಕೆ ಚೀನಾ ಸರ್ಕಾರದಿಂದ ಜೀವಭಯ ಎದುರಿಸುತ್ತಿದ್ದು, ಕೊರೋನವೈರಸ್ ಎಷ್ಟು ಅಪಾಯಕಾರಿ ಎಂಬ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಲು ಚೀನಾದಿಂದ ತಪ್ಪಿಸಿಕೊಂಡು ಯು.ಎಸ್.ಗೆ ಬಂದು ತಲುಪಿದ್ದೇನೆ ಎಂದು ಅವರು ಹೇಳಿದ್ದಾರೆ.
ಅಮೆರಿಕಾದ ಅಜ್ಞಾತ ಸ್ಥಳದಿಂದ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಲೀ ಮೆಂಗ್ ಯಾನ್, ಹಾಂಕಾಂಗ್ ಸಾರ್ವಜನಿಕ ಆರೋಗ್ಯ ವಿವಿಯಲ್ಲಿ ನಾನು ವೈರಾಣು ಶಾಸ್ತ್ರಜ್ಞೆ ಆಗಿ ಕೆಲಸ ಮಾಡಿದ್ದು, ಕೊರೋನಾ ವೈರಸ್ ಬಗ್ಗೆ ಸಂಶೋಧನೆ ನಡೆಸಿದ ಮೊದಲ ವಿಜ್ಞಾನಿಗಳಲ್ಲಿ ನಾನು ಒಬ್ಬಳು. 2019 ರ ಕೊನೆಯಲ್ಲಿ ಸಾರ್ಸ್ ತರಹದ ಪ್ರಕರಣಗಳನ್ನು ಪರಿಶೀಲಿಸಲು ನನ್ನನ್ನು ವುಹಾನ್ನ ವೈರಾಣು ತಯಾರಿಕಾ ಘಟಕದಲ್ಲಿ ಮೇಲ್ವಿಚಾರಕರಾಗಿ ನೇಮಿಸಲಾಗಿತ್ತು ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಜನರಿಗೆ ಸೋಂಕು ಹರಡುವ ಮೊದಲೇ ಚೀನಾ ಸರ್ಕಾರಕ್ಕೆ ಈ ಬಗ್ಗೆ ವಿಜ್ಞಾನಿಗಳಾದ ನಾವು ಎಚ್ಚರಿಕೆ ಕೊಟ್ಟಿದ್ದೆವು. ಮನುಷ್ಯರಿಂದ ಮನುಷ್ಯರಿಗೆ ವೈರಸ್ ಹರಡುವ ಸಾಧ್ಯತೆ ಬಗ್ಗೆ ಹೇಳಿದರೂ ಚೀನಾ ಸರ್ಕಾರ ನಮ್ಮ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ.
ತನ್ನ ಆವಿಷ್ಕಾರಗಳನ್ನು ನಿರ್ಲಕ್ಷಿಸಿದ ಕಾರಣಕ್ಕೆ ನಾನು ಲ್ಯಾಬ್ ಮೇಲ್ವಿಚಾರಕರಿಗೆ ವರದಿ ಮಾಡಿದ್ದಾಗಿ ಅವರು ಹೇಳಿದ್ದು, ಚೀನಾ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಇದರಿಂದ ನೀವು ತೊಂದರೆಗೆ ಸಿಲುಕಬಹುದು. ಹಾಗಾಗಿ ಸುಮ್ಮನಿರಲು ಅವರು ಸೂಚಿಸಿದರು ಎಂದು ಯಾನ್ ಹೇಳಿದ್ದಾರೆ.
ಅಂತಿಮವಾಗಿ ನಾನು ವೈರಸ್ ಬಗ್ಗೆ ತಿಳಿದಿರುವ ಮಾಹಿತಿಯನ್ನು ಬ್ಲಾಗ್ ನಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದೆ. ಸಾರ್ಸ್ ರೀತಿಯ ಹೊಸ ರೋಗ ಲಕ್ಷಣ ಹೊಂದಿರುವ ರೋಗಿಗಳನ್ನು ನಾನು ಗುರುತಿಸಿದ್ದೇನೆ. ಹಾಗಾಗಿ ಸುರಕ್ಷಾ ಸಾಧನಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡೆ.
ಇದರಿಂದಾಗಿ ನಾನು ಅಪಾಯಕ್ಕೆ ಸಿಲುಕಿದೆ. ಪ್ರಾಣಭಯದಿಂದ ವಿವಿಯ ಕ್ಯಾಂಪಸ್, ಅಲ್ಲಿನ ಕ್ಯಾಮರಾ, ಜನರ ಕಣ್ತಪ್ಪಿಸಿ ಓಡಾಡುವ ಸ್ಥಿತಿ ಇತ್ತು. ಹೀಗಾಗಿ ರಾತ್ರೋರಾತ್ರಿ ಚೀನಾದಿಂದ ತಪ್ಪಿಸಿಕೊಂಡು ಅಮೆರಿಕ ತಲುಪಿದೆ ಎಂದು ಹೇಳಿಕೊಂಡಿದ್ದಾರೆ.
ನಾನು ಚೀನಾವನ್ನು ಬಿಟ್ಟು ಓಡಿಹೋದಾಗಿನಿಂದ, ಚೀನಾ ಸರ್ಕಾರವು ನನ್ನನ್ನು ಮೌನವಾಗಿಡಲು ಸೈಬರ್ ದಾಳಿಯನ್ನು ಪ್ರಾರಂಭಿಸಿತು. ಅಷ್ಟೇ ಅಲ್ಲ ನನ್ನನ್ನು ಹಿಂದೆ ಕರೆಯಿಸಿ ಕೊಳ್ಳಲು ತನ್ನ ಕುಟುಂಬ ವರ್ಗಕ್ಕೆ ಕಿರುಕುಳ ಕೊಡುತ್ತಿದೆ.
ನಾನು ಲಾಸ್ ಏಂಜಲೀಸ್ ನಲ್ಲಿ ಇಳಿಯುವಾಗ, ಯು.ಎಸ್. ಅಧಿಕಾರಿಗಳು ನನಗಾಗಿ ಕಾಯುತ್ತಿದ್ದರು ಮತ್ತು ನಾನು ಅವರಿಗೆ ಸತ್ಯವನ್ನು ಹೇಳಬೇಕಾಗಿತ್ತು.
ನಾನು ಸರಿಯಾದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಅವರಿಗೆ ಸತ್ಯವನ್ನು ಹೇಳಿದೆ. ನನ್ನನ್ನು ಚೀನಾಕ್ಕೆ ವಾಪಸು ಕಳುಹಿಸಬೇಡಿ. ಕೋವಿಡ್-19 ವೈರಸ್ ನ ಸತ್ಯವನ್ನು ಹೇಳಲು ಬಂದವಳು ನಾನು ಮತ್ತು ದಯವಿಟ್ಟು ನನ್ನನ್ನು ರಕ್ಷಿಸಿ. ಇಲ್ಲದಿದ್ದರೆ, ಚೀನಾ ಸರ್ಕಾರ ನನ್ನನ್ನು ಕೊಲ್ಲುತ್ತದೆ ಎಂದು ಯಾನ್ ಹೇಳಿದರು.
ಅವರು ಅನುಮೋದಿತ ರಜೆಯಲ್ಲಿದ್ದರೂ ಸಹ, ಅವರು ನನ್ನ ಇಮೇಲ್ಗಳು ಮತ್ತು ಫೈಲ್ಗಳನ್ನು ತೆಗೆದುಕೊಂಡಿದ್ದಾರೆ ಎಂದು ಯಾಂಗ್ ಹೇಳಿದ್ದಾರೆ.
ಯಾನ್ ಇನ್ನು ಮುಂದೆ ನಮ್ಮ ಉದ್ಯೋಗಿಯಲ್ಲ ಎಂದು ಯುನಿವರ್ಸಿಟಿ ವಕ್ತಾರರು ಸುದ್ದಿ ವಾಹಿನಿಗೆ ತಿಳಿಸಿದ್ದು, ಡಾ ಲಿ-ಮೆಂಗ್ ಯಾನ್ ಇನ್ನು ಮುಂದೆ ವಿಶ್ವವಿದ್ಯಾಲಯದ ಸಿಬ್ಬಂದಿ ಸದಸ್ಯರಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಮ್ಮ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಯ ಮೇಲಿನ ಗೌರವದಿಂದ, ನಾವು ಅವರ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಯುನಿವರ್ಸಿಟಿ ವಕ್ತಾರರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ನ ಚೀನೀ ರಾಯಭಾರ ಕಚೇರಿ ಸುದ್ದಿ ವಾಹಿನಿಗೆ ಯಾನ್ ಯಾರೆಂದು ತಿಳಿದಿಲ್ಲ ಮತ್ತು ಚೀನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಿದೆ ಎಂದು ಸಮರ್ಥಿಸಿಕೊಂಡಿದೆ.
ನಾವು ಆ ವ್ಯಕ್ತಿಯ ಬಗ್ಗೆ ಕೇಳಿಲ್ಲ ಎಂದು ಇಮೇಲ್ ನಲ್ಲಿ ಹೇಳಿಕೆ ನೀಡಿರುವ ರಾಯಭಾರಿ ಕಚೇರಿ ಚೀನಾ ಸರ್ಕಾರವು ಕೋವಿಡ್-19 ವೈರಸ್ ಗೆ ಏಕಾಏಕಿ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದೆ. ಅದರ ಎಲ್ಲಾ ಪ್ರಯತ್ನಗಳನ್ನು ಪೂರ್ಣ ಪಾರದರ್ಶಕತೆಯೊಂದಿಗೆ ‘ಫೈಟಿಂಗ್ ಕೋವಿಡ್ -19: ಚೀನಾ ಇನ್ ಆಕ್ಷನ್’ ಎಂಬ ಶ್ವೇತಪತ್ರದಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ ಮತ್ತು ಸತ್ಯಗಳನ್ನು ಎಲ್ಲರಿಗೂ ಹೇಳುತ್ತವೆ ಎಂದು ಹೇಳಿದೆ.