ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಸರಣಿಯ ಅಂಕ ಪಟ್ಟಿಯ ನಿಯಮಗಳು ಏನು ಹೇಳ್ತಾವೆ…?
ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ನಾಲ್ಕು ವಿಕೆಟ್‍ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದ ವೆಸ್ಟ್ ಇಂಡೀಸ್ 40 ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಇಂಗ್ಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ 146 ಅಂಕಗಳನ್ನು ಪಡೆದುಕೊಂಡಿದೆ.
ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಒಟ್ಟು 360 ಅಂಕಗಳನ್ನು ಪಡೆದುಕೊಂಡಿದೆ. ಟೀಮ್ ಇಂಡಿಯಾ ಆಡಿರುವ 9 ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಸೋತಿದೆ. ಇನ್ನುಳಿದ ಏಳು ಪಂದ್ಯಗಳನ್ನು ಗೆದ್ದುಕೊಂಡಿದೆ.
ಇನ್ನುಳಿದಂತೆ ಆಸ್ಟ್ರೇಲಿಯಾ 296 ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗೂ ನ್ಯೂಜಿಲೆಂಡ್ 180 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್‍ನ ಅಂಕಪಟ್ಟಿಯ ನಿಯಮಗಳು
ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಸರಣಿಯ ಅಂಕಪಟ್ಟಿಯ ನಿಯಮಗಳು ಈ ಕೆಳಗಿನಂತಿವೆ. ಒಟ್ಟು ಅಂಕಗಳನ್ನು ಆಯಾ ಟೆಸ್ಟ್ ಸರಣಿಯ ಪಂದ್ಯಗಳ ಮೇಲೆ ನಿರ್ಧಾರ ಮಾಡಲಾಗುತ್ತದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ತಲಾ ಪಂದ್ಯಗಳಿಗೆ 60 ಅಂಕ, ಮೂರು ಟೆಸ್ಟ್ ಪಂದ್ಯಗಳ ಸರಣಿಯ ತಲಾ ಪಂದ್ಯಗಳಿಗೆ 40 ಅಂಕ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ತಲಾ ಪಂದ್ಯಗಳಿಗೆ 30 ಅಂಕ ಹಾಗೂ ಐದು ಟೆಸ್ಟ್ ಸರಣಿಗಳ ತಲಾ ಪಂದ್ಯಗಳಿಗೆ 24 ಅಂಕಗಳನ್ನು ನೀಡಲಾಗುತ್ತದೆ.
ಎರಡು ಪಂದ್ಯಗಳ ಸರಣಿ – 60 ಅಂಕ ಗೆಲುವು, 30 ಅಂಕ ಟೈ ಹಾಗೂ ಡ್ರಾ 20 ಅಂಕ
ಮೂರು ಪಂದ್ಯಗಳ ಸರಣಿ – 40 ಅಂಕ ಗೆಲುವು, 20 ಅಂಕ ಟೈ, ಹಾಗೂ 13 ಅಂಕ ಡ್ರಾ
ನಾಲ್ಕು ಪಂದ್ಯಗಳ ಸರಣಿ – 30 ಅಂಕ ಗೆಲುವು, 15 ಅಂಕ ಟೈ ಹಾಗೂ 10 ಅಂಕ ಡ್ರಾ
ಐದು ಪಂದ್ಯಗಳ ಸರಣಿ – 24 ಅಂಕ ಗೆಲುವು, 12 ಅಂಕ ಟೈ ಹಾಗೂ 8 ಅಂಕ ಡ್ರಾ