ುಂದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ತಂಡದ ಘೋಷಣೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವು ಯುವ ಹಾಗೂ ಸ್ಟಾರ್ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರೂ, BCCI ನೀಡಿದ ಆಯ್ಕೆಯಿಂದ ಅವರಿಗೆ ನಿರಾಶೆಯಾಗಿದೆ.
ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರೆ, ಫಾರ್ಮ್‌ನಲ್ಲಿ ಇದ್ದ ಮೊಹಮ್ಮದ್ ಸಿರಾಜ್ ಅವರನ್ನು ವಿಶ್ರಾಂತಿ ನೆಪದಲ್ಲಿ ಹೊರಗಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗಿದೆ.
2025ರ IPLನಲ್ಲಿ ಮಿಂಚಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದ ಸುದರ್ಶನ್, ಶಶಾಂಕ್, ಪ್ರಸಿದ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ರಿಯಾನ್ ಪರಾಗ್ ಇವರಿಗೆ ಕೂಡ ಆಯ್ಕೆಗಾರರಿಂದ ಅವಕಾಶ ದೊರಕಿಲ್ಲ.
ಇದೇ ವೇಳೆ, ಯಶಸ್ವಿ ಜೈಸ್ವಾಲ್, ಪ್ರಸಿದ್ಧ ಕೃಷ್ಣ, ಧ್ರುವ್ ಜುರೆಲ್, ರಿಯಾನ್ ಪರಾಗ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸ್ಟ್ಯಾಂಡ್‌ಬೈ ಪಟ್ಟಿಯಲ್ಲಿ ಮಾತ್ರ ಸೇರಿಸಲಾಗಿದೆ.
BCCI ಈ ಬಾರಿ ಅನುಭವಿಗಳಿಗೇ ಹೆಚ್ಚು ಆದ್ಯತೆ ನೀಡಿರುವುದರಿಂದ, ಯುವ ಆಟಗಾರರಿಗೆ ನಿರಾಶೆಯಾಗಿದೆ. ಮುಂದಿನ ಸರಣಿಗಳಲ್ಲಿ ಈ ಆಟಗಾರರು ಮತ್ತೆ ಅವಕಾಶ ಪಡೆಯುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.








