ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಉಗ್ರರು ಸ್ಫೋಟ ನಡೆಸಲು ಸಂಚು ನಡೆಸಿದ್ದ ಸಂಗತಿ ಬೆಳಕಿಗೆ ಬಂದಿದೆ.
ಸ್ಪೋಟಕ್ಕೆ ಸಂಚು ರೂಪಿಸಿದ್ದ 17 ಜನ ಶಂಕಿತ ಉಗ್ರರ ವಿರುದ್ಧ ಎನ್‍ಐಎ ಕೋರ್ಟ್‍ಗೆ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ತಿಳಿಸಿದೆ.
ಸಲ್ಲಿಕೆ ಮಾಡಿದೆ. ತನಿಖೆ ವೇಳೆ ಶಂಕಿತ ಉಗ್ರರು ನಿಷೇಧಿತ ಐಸಿಸ್ ಜೊತೆ ನಂಟು ಹೊಂದಿದ್ದರು, ನಗರದಲ್ಲಿ ಲಘು ಸ್ಪೋಟಕಗಳನ್ನ ತಯಾರಿಸಿ ರಾಜ್ಯದಲ್ಲಿ ಸ್ಪೋಟ ನಡೆಸಲು ತಯಾರಿ ನಡೆಸಿದ್ದರು ಎಂದು ಎ???ಎ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿ ತಮಿಳುನಾಡಿನ ಕಡಲೂರಿನ ಖ್ವಾಜಾ ಮೊಹಿನುದ್ದೀನ್ ಸೂಚನೆಯಂತೆ ನಗರದಲ್ಲಿ ಮೆಹಬೂಬ್ ಪಾಷ ಎಂಬಾತ ಸ್ಪೋಟ ನಡೆಸಲು ಪ್ಲಾನ್ ಮಾಡಿದ್ದ ಎಂದು ಎಸ್‍ಐಎ ತಿಳಿಸಿದೆ.
ಕಳೆದ ಜನವರಿಯಲ್ಲಿ ತಮಿಳುನಾಡು ಹಾಗೂ ಐಎಸ್‍ಡಿ ಆಧಿಕಾರಿಗಳು ನಡೆಸಿದ ಜಂಟಿ ದಾಳಿ ವೇಳೆ ಬೆಂಗಳೂರಿನ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಮೆಹಬೂಬ್ ಪಾಷ ಉಗ್ರ ಚಟುವಟಿಕೆಗಳನ್ನ ನಡೆಸುತ್ತಿರುವುದು ಪತ್ರೆಯಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಎನ್‍ಐಎಗೆ ಕೆಲವು ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿದೆ.
ಬೆಂಗಳೂರಿನ ಮೆಹಬೂಬ್ ಪಾಷ, ತಮಿಳುನಾಡಿನ ಖ್ವಾಜಾ ಮೊಹಿನುದ್ದೀನ್, ಮಂಡ್ಯದ ಇಮ್ರಾನ್ ಖಾನ್, ಮಹಮ್ಮದ್ ಹನೀಪ್, ಮಹಮ್ಮದ್ ಮನ್ಸೂರ್ ಅಲಿಖಾನ್, ಕೋಲಾರದ ಸಲೀಂ ಖಾನ್, ಹುಸೇನ್ ಷರೀಫ್ ಸೇರಿ 17 ಜನರನ್ನ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 120b, 17,18,18b,19,20,38,39, UAPA ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಬೆಂಗಳೂರಿನ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.








