ಬೆಂಗಳೂರು ಗಲಭೆಯ ನಂತರ ಕೆಲಕಾಲ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇದೀಗ ಮತ್ತೆ ಸಕ್ರಿಯವಾಗಿ ಟ್ವೀಟ್ಗಳನ್ನು ಮಾಡುತ್ತಿದೆ. ಇತ್ತೀಚೆಗೆ IPL ಲೀಡರ್ಬೋರ್ಡ್ ಹಂಚಿಕೊಂಡಿರುವ RCB, ತಮ್ಮ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದೆ.
“ಬರ್ನಿಂಗ್ ಡಿಸೈರ್, ಕನ್ಸಿಸ್ಟೆಂಟ್ ಅಪ್ರೋಚ್, ಬೋಲ್ಡ್ ಪ್ರಾಮಿಸ್… ಈ ಪ್ರಯಾಣವೇ ನಮ್ಮನ್ನು ಈ ದಶಕದ ಅತ್ಯುತ್ತಮ ತಂಡವನ್ನಾಗಿ ಮಾಡಿದೆ. ಪ್ರಾಮಾಣಿಕತೆ ಮತ್ತು ವಿಶ್ವಾಸದೊಂದಿಗೆ ನಾವು ಪ್ರತಿಯೊಂದು ಹೆಜ್ಜೆಯನ್ನು ಕಟ್ಟಿದ್ದೇವೆ” ಎಂದು ಟ್ವೀಟ್ನಲ್ಲಿ ಬರೆದಿದೆ.
IPL ಅಂಕಿಅಂಶಗಳ ಪ್ರಕಾರ, 2020ರಿಂದ ಇಂದಿನವರೆಗೂ ನಡೆದ 90 ಪಂದ್ಯಗಳಲ್ಲಿ 50 ಗೆಲುವುಗಳನ್ನು ದಾಖಲಿಸಿ RCB ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ತಂಡ ತನ್ನ ಸ್ಥಿರತೆ ಮತ್ತು ಪ್ರಗತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
RCB ಅಭಿಮಾನಿಗಳು ಈ ಘೋಷಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ನೀಡಿದ್ದು, ಮುಂದಿನ ಸೀಸನ್ಗಳಲ್ಲಿ ಕೂಡ ಇದೇ ರೀತಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸುತ್ತಿದ್ದಾರೆ.








