ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರವೊಂದು ರೂಪಕ ಪಡೆಯುತ್ತಿದೆ. ಈ ಚಿತ್ರಕ್ಕೆ ‘ಮಾ ವಂದೇ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರತಂಡವು ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಚಿತ್ರವನ್ನು ಕ್ರಾಂತಿ ಕುಮಾರ್ ಸಿಎಚ್ ನಿರ್ದೇಶಿಸುತ್ತಿದ್ದು, ಉನ್ನಿ ಮುಕುಂದನ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಬಿಡುಗಡೆಯಾದ ಪೋಸ್ಟರ್‌ನಲ್ಲಿ ಮೋದಿ ಸಹಿ ಮಾಡುತ್ತಿರುವ ದೃಶ್ಯವಿದ್ದು, ಅದರ ಮೇಲೆ ಪ್ರಧಾನಮಂತ್ರಿ ಮೋದಿ ಅವರೇ ಉಚ್ಛರಿಸಿದ ತಾಯಿಯ ಧೈರ್ಯವು ಅನೇಕ ಯುದ್ಧಗಳಿಗಿಂತ ಬಲವಾಗಿರುತ್ತದೆ ಎಂಬ ನುಡಿಗಟ್ಟು ಮುದ್ರಿಸಲಾಗಿದೆ.
ಈ ಬಯೋಪಿಕ್‌ನಲ್ಲಿ ಮೋದಿ ಅವರ ಬಾಲ್ಯದಿಂದ ಪ್ರಧಾನಮಂತ್ರಿಯಾಗುವವರೆಗಿನ ಹೋರಾಟ, ತ್ಯಾಗ ಮತ್ತು ನಾಯಕತ್ವದ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಚಿತ್ರತಂಡದ ಪ್ರಕಾರ, ಚಿತ್ರವು ದೇಶದಾದ್ಯಂತ ಬಿಡುಗಡೆಗೊಳ್ಳಲಿದ್ದು, ಹಲವು ಭಾಷೆಗಳಿಗೂ ಡಬ್ ಮಾಡುವ ಯೋಜನೆ ಇದೆ.
ಈ ಸಿನಿಮಾ ಕೇವಲ ರಾಜಕೀಯ ಕಥೆಯಲ್ಲ, ಬದಲಿಗೆ ಪ್ರೇರಣಾದಾಯಕ ಜೀವನಯಾನವನ್ನು ತೋರಿಸುವುದಾಗಿ ತಂಡ ಭರವಸೆ ನೀಡಿದೆ.








