ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮತ್ತೊಂದು ಬಾರಿಗೆ ತಮ್ಮ ಪ್ರಬಲ ಶಕ್ತಿ ತೋರಿಸಿದೆ. ಏಷ್ಯಾ ಕಪ್ನಲ್ಲಿ ಸತತ 2 ಬಾರಿ ಸೋಲಿಸಿರುವ ಪಾಕಿಸ್ತಾನ ತಂಡದ ಬಗೆಗಿನ ಮಾಧ್ಯಮ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸೂರ್ಯ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮುಂದೆ ಪಾಕಿಸ್ತಾನವನ್ನು ಭಾರತದ ಸ್ಟಾಂಡರ್ಡ್ ಎದುರಾಳಿ ಎಂದು ಕರೆದರೆ ಸರಿ ಆಗುವುದಿಲ್ಲ. ಆ ರೀತಿಯ ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ತಂಡವು ಭಾರತ ತಂಡಕ್ಕೆ ಯಾವುದೇ ಲೆಕ್ಕ ಅಲ್ಲ ಎಂದು ಸೂರ್ಯ ಹೇಳಿದ್ದಾರೆ.
ಇನ್ನುಮುಂದೆ ಪಾಕಿಸ್ತಾನವನ್ನು ಭಾರತದ ಸ್ಟಾಂಡರ್ಡ್ ಎದುರಾಳಿ ಎಂದು ಕರೆಯಬೇಡಿ. ಆ ರೀತಿ ಪ್ರಶ್ನೆ ಕೇಳುವುದನ್ನೇ ಬಂದ್ ಮಾಡಿ. ಸತತ 12, 13 ಮ್ಯಾಚ್ಗಳಲ್ಲಿ ಒಂದೆರಡು ಪಂದ್ಯ ಗೆದ್ದಿರುವ ಪಾಕ್ ನಮಗೆ ಲೆಕ್ಕಕೇ ಇಲ್ಲ ಎಂದು ಅವರು ಟಾಂಗ್ ಕೊಟ್ಟಿದ್ದಾರೆ.








