ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯ ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ ಮತ್ತು ಗಾಯತ್ರಿ ಜಾಲಿಹಾಳ್ ಅವರ ಮದುವೆ ಪ್ರಕರಣವನ್ನು ಟೀಕಿಸಿದ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಮುಕುಳೆಪ್ಪನ ವಿರುದ್ಧ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ಮುಕುಳೆಪ್ಪ ‘ಹಿಂದೂ ಹುಡುಗಿಯರು ದುಡ್ಡು ಕೊಟ್ರೆ ಬರ್ತಾರೆ, ಮುಸ್ಲಿಂ ಹುಡುಗಿಯರು ಬರಲ್ಲ’ ಎಂದು ಹೇಳಿದ್ದಾನೆ ಎಂದು ಆರೋಪಿಸಿದ ಮುತಾಲಿಕ್, ಅವನ ಸೊಕ್ಕು ಮುರಿಯುವ ಬೆದರಿಕೆ ಹಾಕಿದ್ದಾರೆ.
ಮುಂಡಗೋಡದ ಶಿವಾಜಿ ಸರ್ಕಲ್ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುತಾಲಿಕ್, ಲವ್ ಜಿಹಾದ್ ಪ್ರಕರಣಗಳ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು. ಮುಂಡಗೋಡದಲ್ಲಿ ನಡೆದ ಹಿಂದೂ-ಮುಸ್ಲಿಂ ಮದುವೆ ಪ್ರಕರಣದ ವಿಚಾರವಾಗಿ ಮುಕುಳೆಪ್ಪನ ವಿರುದ್ಧ ಗುಡುಗಿದ ಅವರು, ಹಿಂದೂ ಸಮಾಜವನ್ನು ಕೆಣಕುವವರ ಸೊಕ್ಕು ಮುರಿಯುವುದಾಗಿ ಹೇಳಿದರು.
ನೀನು ಹೇಗೆ ಯೂಟ್ಯೂಬ್ ನಡೆಸ್ತೀಯಂತಾ ನೋಡೋಣ: ಮುತಾಲಿಕ್
ಮುಂಡಗೋಡದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಮದುವೆಯಾದ ಮುಕುಳೆಪ್ಪನ ಹೆಸರು ಹೇಳಲು ಕೂಡ ಅಸಹ್ಯವಾಗುತ್ತದೆ. ಈ ಮುಕುಳೆಪ್ಪ ಹಿಂದೂ ಹುಡುಗಿಯರ ಬಗ್ಗೆ ಲಘುವಾಗಿ ಮಾತನಾಡಿದ್ದಾನೆ. ಹಿಂದೂ ಹುಡುಗಿಯರು ದುಡ್ಡು ಕೊಟ್ರೆ ಬರ್ತಾರೆ, ಮುಸ್ಲಿಂ ಹುಡುಗಿಯರು ಬರಲ್ಲ ಅಂತಾ ಈ ಮುಕುಳೆಪ್ಪ ಇತರರಲ್ಲಿ ಹೇಳಿದ್ದಾನೆ. ಬಡ್ಡಿ ಮಗನೇ ನಿನ್ನ ಸೊಕ್ಕು ಅಡಗಿಸ್ತೀವಿ! ದುಡ್ಡು ಕೊಟ್ರೆ ಹುಡುಗಿಯರು ಬರ್ತಾರೆ ಅಂತಾ ಸೊಕ್ಕಿನಿಂದ ಹೇಳ್ತೀಯಲ್ಲಾ, ನೀನು ಹೇಗೆ ಯೂಟ್ಯೂಬ್ ನಡೆಸ್ತೀಯಂತಾ ನೋಡೋಣ, ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ಲವ್ ಜಿಹಾದ್ ವಿರುದ್ಧ ಹೋರಾಟಕ್ಕೆ ಕರೆ
ಮುತಾಲಿಕ್ ಮುಂದುವರೆದು, “ಮುಸ್ಲಿಮರು ನಿಮ್ಮ ಹುಡುಗಿಯರನ್ನ ಮದುವೆಯಾಗಿ, ಹಿಂದೂ ಹುಡುಗಿಯರ ಮೇಲೆ ಏಕೆ ಕಣ್ಣು ಹಾಕ್ತಿದ್ದೀರಾ? ಹಿಂದೂ ಹುಡುಗಿಯರಿಗೆ ಯಾಕೆ ಬುರ್ಖಾ ಹಾಕಿಸ್ತಿದ್ದೀರಿ? ಹಿಂದೂ ಹುಡುಗಿಯರಿಗೆ ಯಾಕೆ ಗೋಮಾಂಸ ತಿನ್ನಿಸ್ತಿದ್ದೀರಿ?” ಎಂದು ಪ್ರಶ್ನೆ ಎಸೆದರು.
ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಕೆಡಿಸಿ ತಮ್ಮ ಜನಸಂಖ್ಯೆ ಹೆಚ್ಚಿಸುವುದು ಮುಸ್ಲಿಂಗಳ ಮುಖ್ಯ ಉದ್ದೇಶವಾಗಿದೆ ಎಂದು ಆರೋಪಿಸಿದ ಅವರು, “ಪೆಹಲ್ಗಾಮ್ನಲ್ಲಿ ಮುಸ್ಲಿಂ ಭಯೋತ್ಪಾದಕರು ಹಿಂದೂಗಳ ಹೆಸರು ಕೇಳಿ ಶೂಟ್ ಮಾಡಿ ಸಾಯಿಸಿದ್ದಾರೆ. ಪ್ರತೀ ನಿತ್ಯ ಇಂತಹ ನೂರಾರು ಲವ್ ಜಿಹಾದ್ ಪ್ರಕರಣಗಳನ್ನು ಹಿಂದೂ ಸಂಘಟನೆಗಳು ಹ್ಯಾಂಡಲ್ ಮಾಡುತ್ತಿವೆ,” ಎಂದು ಹೇಳಿದರು.
ಶ್ರೀರಾಮ ಸೇನೆಯ ಸಹಾಯವಾಣಿ ಘೋಷಣೆ
ಲವ್ ಜಿಹಾದ್ ಜಾಲದಿಂದ ಹಿಂದೂ ಯುವತಿಯರನ್ನು ಮುಕ್ತಗೊಳಿಸಲು ಶ್ರೀರಾಮ ಸೇನೆಯಿಂದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಮುತಾಲಿಕ್ ಘೋಷಿಸಿದರು. “ಎಲ್ಲಾದರೂ ಹಿಂದೂ ಹುಡುಗಿಯರನ್ನು ಪುಸಲಾಯಿಸ್ತಿದ್ದಾರೆ ಅನ್ನೋ ಮಾಹಿತಿ ಇದ್ರೆ ತಕ್ಷಣ ಸಹಾಯವಾಣಿಗೆ ಕರೆ ಮಾಡಿ. ಆ ಹುಡುಗಿಯನ್ನು ಜಾಲದಿಂದ ಸಂಪೂರ್ಣ ಮುಕ್ತಗೊಳಿಸಿ ಯಾವುದೇ ಕೇಸ್, ಗಲಾಟೆ ಇಲ್ಲದೇ ನಿಮ್ಮ ಮಗಳನ್ನು ಮನೆಗೆ ಸೇರಿಸುವ ಜವಾಬ್ದಾರಿ ನಮ್ಮದು,” ಎಂದು ಭರವಸೆ ನೀಡಿದರು. ಹಿಂದೂ ಸಮಾಜವು ಜಾಗರೂಕವಾಗಿ ಲವ್ ಜಿಹಾದ್ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.








