ಮುಂಬೈ : ಲಾಕ್ ಡೌನ್ ಸಮಯದಿಂದಲೂ ಮುಂಬೈನಲ್ಲಿರುವ ತನ್ನ ಪನ್ವೆಲ್ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿರೋ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ಅಲ್ಲಿ ಕುದುರೆಗೆ ಹುಲ್ಲು ತಿನ್ನಿಸಿ ತಾನು ತಿಂದು ಸುದ್ದಿಯಾಗಿದ್ದರು. ಇದೀಗ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರೈತ ಪರವಾಗಿ ಫೋಟೋ ಹಾಕಿ ಮತ್ತೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ಹೌದು..! ಇತ್ತೀಚೆಗೆಷ್ಟೆ ಸಲ್ಲು, ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರೈತರ ಪರವಾಗಿ ಫೋಟೋವೊಂದನ್ನು ಹಾಕಿದ್ದರು. ಈಗ ಇದೇ ಫೋಟೋವನ್ನು ಇಟ್ಟುಕೊಂಡು ನೆಟ್ಟೆಗರು ಸಲ್ಲು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ತಮ್ಮ ಇನ್ ಸ್ಟಾಗ್ರಾಂ ಫೋಟೋದಲ್ಲಿ ಸಲ್ಲು, ಹೊಲದಲ್ಲಿ ಕುಳಿತ್ತಿದ್ದಾರೆ. ಜೊತೆಗೆ ಅವರ ಮೈತುಂಬ ಕೆಸರನ್ನು ಬಳಿಯಲಾಗಿದೆ. ಇದನ್ನು ಕಂಡ ನೆಟ್ಟಿಗರು ಯಾವ ರೈತ ಈ ರೀತಿ ಹೊಲದಲ್ಲಿ ಕುಳಿತು ಫೋಟೋಶೂಟ್ ಮಾಡಿಸುತ್ತಾನೆ ಎಂದು ಕಮೆಂಟ್ ಮಾಡುವ ಮೂಲಕ ಸಲ್ಮಾನ್ ಖಾನ್ ಅವರನ್ನು ಕಾಲೆಳೆದಿದ್ದಾರೆ. ಸದ್ಯ ಸಲ್ಲು ಅವರ ಈ ಫೋಟೋ ಸೋಶಿಯ್ ಮೀಡೊಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.








