ಬೆಂಗಳೂರು, ನ.11: ಮಾಧ್ಯಮ ಕ್ಷೇತ್ರದಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯಶಸ್ವಿನಿ ಪರಿಮಿ ಅವರಿಗೆ ಕನ್ನಡ ರಾಜ್ಯೋತ್ಸವದ (Karnataka Rajyotsava) ಪ್ರಯುಕ್ತ ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ವತಿಯಿಂದ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಸಂಸ್ಥೆಯು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲು ಎಂ.ಜಿ ರಸ್ತೆಯ ತನ್ನ ಕಛೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಶಿಕ್ಷಾ ರತ್ನ, ಸೇವಾ ರತ್ನ, ಕಲಾ ರತ್ನ ಹಾಗೂ ಮಹಿಳಾ ರತ್ನ ವಿಭಾಗದಡಿಯಲ್ಲಿ ವಿವಿಧ ಕ್ಷೇತಗಳ ಸಾಧಕರನ್ನು ಸನ್ಮಾನಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಕಾರ್ಟಿಂಗ್: ಬೆಂಗಳೂರಿನ ಇಶಾನ್ ಮಾದೇಶ್‌ಗೆ ಗೆಲುವು
ಸುದ್ದಿ ಹಾಗೂ ಮನರಂಜನಾ ಮಾಧ್ಯಮ ಕ್ಷೇತ್ರದಲ್ಲಿ 15 ವರ್ಷಗಳ ಸೇವೆ, ಸುರಾನಾ ಕಾಲೇಜು ಬೋರ್ಡ್ ಆಫ್ ಸ್ಟಡೀಸ್ ಮೆಂಬರ್ ಹಾಗೂ ವಿವಿಧ ಹೀಲಿಂಗ್ ಮಾಡಾಲಿಟೀಸ್ ನಲ್ಲಿ ನಿರತರಾಗಿರುವ ಯಶಸ್ವಿನಿ ಪರಿಮಿ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಹಲವಾರು ವರ್ಷಗಳಿಂದ ನಿರೂಪಣಾ ವಿಭಾಗದಲ್ಲಿ ಹೆಸರು ಮಾಡಿರುವ ತಾರಾ ನಂಜುಂಡಸ್ವಾಮಿ ಸೇರಿದಂತೆ ನಾಲ್ಕು ಜನ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಕ್ಸಿಸ್ ಬ್ಯಾಂಕ್ ಎಂ ಜಿ ರಸ್ತೆ ಶಾಖೆಯ ಮುಖ್ಯಸ್ಥರಾದ ಕೆ. ಎಲ್. ಗಣಪತಿ, ಶಾಖೆಯ ಎಫ್ ಬಿ ಎ ಆದ ಶ್ರೀ ಪುಷ್ಪ ಸಿ. ಎಚ್ ಅವರು ಭಾಗವಹಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








