ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಆಡಿ ಯಶ ಸಾಧಿಸೋದು ಅಂದ್ರೆ ಅದೊಂದು ಮಹಾ ತಪಸ್ಸು. ದಟ್ಟ ಕಾನನದಲ್ಲಿ ಸನ್ಯಾಸಿಗಳು ತಪಸ್ಸು ಮಾಡೋದು ಒಂದೇ..ಪ್ರಖರ ಸೂರ್ಯನ ಕಿರಣಗಳ ಮಧ್ಯೆ ಆಡೋದು ಒಂದೇ. ಯಾಕಂದ್ರೆ, ಸನ್ಯಾಸಿಯ ತಾಳ್ಮೆ – ಏಕಾಗ್ರತೆ, ದೃಢ ಮನಸ್ಸಿಗೆ ಭಂಗವಾದ್ರೆ ತಪಸ್ಸು ವ್ಯರ್ಥವಾಗಿ ಕಾಡಿನಿಂದ ನಾಡಿಗೆ ಬರಬೇಕಾಗುತ್ತದೆ. ಹಾಗೇ ಟೆಸ್ಟ್ ಕ್ರಿಕೆಟ್‍ನಲ್ಲೂ ಆಟಗಾರÀ ತನ್ನ ತಾಳ್ಮೆ – ಏಕಾಗ್ರತೆ, ಮನಸ್ಸು ಗಲಿಬಿಲಿಯಾದಾಗ ಕ್ರೀಸ್‍ನಿಂದ ಪೆವಿಲಿಯನ್‍ಗೆ ಹಿಂತಿರುಗಬೇಕಾಗುತ್ತದೆ.
ಹೌದು, ಸನ್ಯಾಸಿಯ ತಪಸ್ಸು ಭಂಗ ಮಾಡಲು ರಕ್ಕಸರು ಕಿರುಕುಳ ಕೊಟ್ಟು ತಾಳ್ಮೆ ಕಳೆದುಕೊಳ್ಳಬೇಕಾಗುತ್ತದೆ. ಪ್ರಾಣಿಪಕ್ಷಿಗಳು ಚಿತ್ರವಿಚಿತ್ರ ಶಬ್ದಗಳಿಂದ ಏಕಾಗ್ರತೆಗೆ ಭಂಗವಾಗುತ್ತದೆ. ಅಪ್ಸರೆಯರ ವೈಯ್ಯಾರಕ್ಕೆ ಮನಸ್ಸು ಚಂಚಲವಾಗುತ್ತದೆ. ಹಾಗಂತ ನಾವು ಪುರಾಣ ಕಥೆಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಹಾಗೇ ಆಧುನಿಕ ಕ್ರಿಕೆಟ್ ಮೈದಾನದಲ್ಲೂ ಘಾತಕ ಬೌಲರ್‍ಗಳು ಬ್ಯಾಟರ್‍ನ ತಾಳ್ಮೆಯನ್ನು ಪರೀಕ್ಷೆ ಮಾಡ್ತಾರೆ. ಕ್ರಿಕೆಟ್ ಪ್ರೇಮಿಗಳು ಕಿರುಚಾಡಿಕೊಂಡು ಬ್ಯಾಟರ್‍ನ ಏಕಾಗ್ರತೆಗೆ ಭಂಗವನ್ನುಂಟು ಮಾಡೋ ಪ್ರಂiÀiತ್ನವನ್ನೂ ನಡೆಸುತ್ತಾರೆ. ಇನ್ನೊಂದೆಡೆ ಸ್ಪಿನ್ ಮೋಡಿಗಾರರು ಬಳಕುವ ಸುಂದ್ರಿಯಂತೆ ಚೆಂಡನ್ನ ಎಸೆದು ಬ್ಯಾಟರ್‍ನ ಮನಸ್ಸನ್ನು ಚಂಚಲಗೊಳಿಸುತ್ತಾರೆ. ಅಂದು ವನ ಮಧ್ಯದಲ್ಲಿ ತಪಸ್ಸು ಮಾಡುತ್ತಿದ್ದ ಸನ್ಯಾಸಿಗಳು ಹಾಗೂ ಇಂದು 22 ಯಾರ್ಡ್ ಪಿಚ್‍ನಲ್ಲಿ ಟೆಸ್ಟ್ ಕ್ರಿಕೆಟ್ ಆಡೋ ಬ್ಯಾಟರ್‍ಗಳು ಎದುರಿಸುವ ಸವಾಲುಗಳು ಒಂದೇ ರೀತಿಯಲ್ಲಿವೆ ಅಲ್ವಾ..?
ಹೌದು, ಏಕದಿನ ಹಾಗೂ ಟಿ-20 ಕ್ರಿಕೆಟ್ ಎಷ್ಟೇ ಮನರಂಜನೆ ಕೊಟ್ರೂ ಟೆಸ್ಟ್ ಕ್ರಿಕೆಟ್‍ನಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ
ಕ್ರಿಕೆಟಿಗನ ಕನಸು. ಶ್ವೇತ ಬಣ್ಣದ ಜೆರ್ಸಿಯಲ್ಲಿ ಆಡಿ ಯಶ ಸಾಧಿಸಿದ್ರೆ ಆತನ ಕ್ರಿಕೆಟ್ ಬದುಕು ಸಾರ್ಥಕಗೊಂಡಂತೆ. ಅಲ್ಲದೆ ಕ್ರಿಕೆಟ್ ಆಟವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೂ ಒಂದು ಅರ್ಥ ಬರುತ್ತದೆ. ಇದು ಪ್ರತಿಯೊಬ್ಬ ವೃತ್ತಿಪರ ಕ್ರಿಕೆಟಿಗನ ಅಭಿಲಾಷೆಯೂ ಹೌದು.
ಆದ್ರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಯಶ ಸಾಧಿಸೋದು ಅಷ್ಟೊಂದು ಇಝಿ ಅಲ್ಲ. ಅದೊಂದು ಥರ ಸನ್ಯಾಸಿಯೊಬ್ಬ ಕಠಿಣ ತಪಸ್ಸು ಮಾಡಿ ವರ ಸಿದ್ದಿಸಿಕೊಂಡ ಹಾಗೆ. ಸಾಕಷ್ಟು ಶ್ರಮ ಪಟ್ಟು ಆಡುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಅಲ್ಲಿ ತಾಳ್ಮೆ, ಏಕಾಗ್ರತೆ, ದೃಢ ಮನಸ್ಸು ಬಹು ಮುಖ್ಯ ಪಾತ್ರ ವಹಿಸುತ್ತೆ. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.
ಹಿಂದೊಂದು ಇತ್ತು ಕಾಲ. ಟೆಸ್ಟ್ ಕ್ರಿಕೆಟ್ ಅಂದ್ರೆ ಐದು ದಿನಗಳ ಆಟ..ಟೆಸ್ಟ್ ಪಂದ್ಯವನ್ನು ಆಡೋದು ಆಟಗಾರರನಿಗೆ ಹಿರಿಮೆಯಾದ್ರೆ, ಗ್ಯಾಲರಿಯಲ್ಲಿರುವ ಪ್ರೇಕ್ಷಕನಿಗೂ ಕಣ್ಣಾರೆ ಪಂದ್ಯವನ್ನು ನೋಡಿದ್ದೇನೆ ಅನ್ನೋ ಪುಳಕ. ಇಲ್ಲಿ ಆಟಗಾರರಿಗೆ ದುಡ್ಡು ಮುಖ್ಯವಾಗಿರಲಿಲ್ಲ. ಬದಲಾಗಿ ಆಟವೇ ಮುಖ್ಯವಾಗಿರುತ್ತಿತ್ತು. ಒಂದೊಂದು ರನ್ ಗಳಿಸಲು ಬ್ಯಾಟರ್ ಎಷ್ಟು ಶ್ರಮಪಡಬೇಕೋ ಹಾಗೇ ಬೌಲರ್ ಕೂಡ ವಿಕೆಟ್ ಉರುಳಿಸಲು ಅಷ್ಟೇ ಕಷ್ಟಪಡಬೇಕಾಗುತ್ತದೆ. ಬ್ಯಾಟರ್ – ಬೌಲರ್‍ನ ತಾಳ್ಮೆ, ಏಕಾಗ್ರತೆ, ಸಾಮಥ್ರ್ಯ, ಪ್ರತಿಭೆಯನ್ನು ಪರೀಕ್ಷೆ ಮಾಡೋದು ಅಂದ್ರೆ ಅದು ಟೆಸ್ಟ್ ಕ್ರಿಕೆಟ್‍ನಲ್ಲಿ ಮಾತ್ರ. ದಿನಕ್ಕೆ 90 ಓವರ್.. ಐದು ದಿನಕ್ಕೆ 450 ಓವರ್. ಅಂದ್ರೆ 2700 ಎಸೆತಗಳನ್ನು ಎರಡು ತಂಡಗಳ ಬೌಲರ್‍ಗಳು ಎಸೆಯಬೇಕು. ಅದರಲ್ಲಿ ಎಷ್ಟು ರನ್ ಬರುತ್ತೆ ಅನ್ನೋದು ಉಭಯ ತಂಡಗಳ ಬ್ಯಾಟರ್‍ಗಳ ಬ್ಯಾಟಿಂಗ್ ಮೇಲೆ ನಿಂತಿರುತ್ತದೆ. ಅಂದ ಹಾಗೇ ಇದು ಡ್ರಾಗೊಳ್ಳುವ ಪಂದ್ಯಗಳ ಲೆಕ್ಕಚಾರ. ಸೋಲು – ಗೆಲುವಿನಲ್ಲಿ ಇದೆಲ್ಲಾ ಲೆಕ್ಕಕ್ಕೆ ಬರಲ್ಲ. ಇನ್ನು, ಕಟ್ಟಾ ಅಭಿಮಾನಿಗಳನ್ನು ಬಿಟ್ಟು ಯಾರು ಗೆಲ್ಲಲಿ.. ಸೋಲಲಿ.. ಮನರಂಜನೆಯ ಜೊತೆ ಆಟಗಾರನ ಆಟವನ್ನು ಶ್ಲಾಘನೆ ಮಾಡೋದನ್ನು ಅಭಿಮಾನಿಗಳು ಮರೆಯುತ್ತಿರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಿದೆ. ಟೆಸ್ಟ್ ಕ್ರಿಕೆಟ್‍ನ ಜೊತೆಗೆ ಆಟಗಾರನ ಹಾಗೂ ಪ್ರೇಕ್ಷಕರ ಮನಸ್ಥಿಯೂ ಬದಲಾಗಿದೆ. ಅದು ಬೇರೆ ಮಾತು.. ಇರಲಿ..
ಇದನ್ನೂ ಓದಿ: ಭಾರತದ ಟೆಸ್ಟ್ ಕ್ರಿಕೆಟ್‍ನ ಸಿಕ್ಸರ್ ಬಾಸ್ ರಿಷಬ್ ಪಂತ್..!
ಅಂದ ಹಾಗೇ, ಒಂದು ಲಂಚ್ ಬ್ರೇಕ್, ಒಂದು ಟೀ ಬ್ರೇಕ್, ಎರಡು ಡ್ರಿಂಕ್ಸ್ ಬ್ರೇಕ್‍ನಲ್ಲಿ ಆಡೋ ಏಕೈಕ ಗೇಮ್ ಅಂದ್ರೆ ಅದು ಕ್ರಿಕೆಟ್. ನೋಡೋಕೆ ಟೆಸ್ಟ್ ಆಟಗಾರರಿಗೆ ರಾಯಲ್ ಟ್ರೀಟ್‍ಮೆಂಟ್ ಸಿಗುತ್ತೆ ಅಂತ ಹೇಳಬಹುದು. ಆದ್ರೆ ಈ ರಾಯಲ್ ಸೌಲಭ್ಯಗಳ ಜೊತೆಗೆ ಕ್ರಿಕೆಟಿಗನೊಬ್ಬ ಲಾಯಲ್ ಅಗಿ ಆಡಿದ್ರೆ ಮಾತ್ರ ಆತನಿಗೆ ಬಹುಪರಾಕ್.. ಇಲ್ಲ ಅಂದ್ರೆ ಆತನ ಹೆಸರು ಕೂಡ ನಾಪತ್ತೆಯಾಗಿರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿವೆ. ಅದೇನೇ ಇರಲಿ.. ಟೆಸ್ಟ್ ಕ್ರಿಕೆಟ್ ಈಗ ಸಾಕಷ್ಟು ಬದಲಾಗಿದೆ.
ಟೆಸ್ಟ್ ಕ್ರಿಕೆಟ್ ಅಂದ್ರೆ ಬೋರಿಂಗ್ ಆಟ. ರನ್ ಬರಲ್ಲ. ಬಾಲ್ ವೇಸ್ಟ್ ಮಾಡ್ತಾರೆ. ಯಾರು ನೋಡ್ತಾರೆ ಮ್ಯಾಚ್ ಅನ್ನು ಅಂತ ಹೇಳುವಂತಿಲ್ಲ. ಟೆಸ್ಟ್ ಕ್ರಿಕೆಟ್ ಕೂಡ ವೇಗವನ್ನು ಪಡೆದುಕೊಂಡಿದೆ. ಫಲಿತಾಂಶಕ್ಕಾಗಿ ಐದು ದಿನ ಕಾಯಬೇಕಿಲ್ಲ. ಎರಡು ಮೂರು ದಿನಗಳಲ್ಲಿ ರಿಸಲ್ಟ್ ಸಹ ಬಂದಿರುತ್ತದೆ. ಬ್ಯಾಟರ್ ಆಗಲಿ.. ಬೌಲರ್ ಆಗಲಿ.. ತಾಳ್ಮೆಯೇ ಇಲ್ಲ. ಹೊಡಿಬಡಿ ಎಂಬ ಮಾಸ್ ಆಟದ ಮುಂದೆ ಕ್ಲಾಸ್ ಆಟ ಮರೀಚಿಕೆಯಾಗಿದೆ. ಕಲಾತ್ಮಕತೆಯ ಆಟವನ್ನು ನೋಡುವುದೇ ಅಪರೂಪ. ಏನಿದ್ರೂ ಚಿನ್ನಿದಾಂಡು ಆಟದ ಬ್ಯಾಟಿಂಗ್ ಅನ್ನೇ ನೋಡಬೇಕು. ಬೌಲರ್‍ಗಳ ಬೌಲಿಂಗ್ ಶೈಲಿಯೂ ಬದಲಾಗಿದೆ. ಹಾಗಂತ ಇದು ತಪ್ಪಲ್ಲ. ಟೆಸ್ಟ್ ಮ್ಯಾಚ್ ಗೆಲ್ಲುವ ಸೂತ್ರಗಳು ಹೊಸ ಸ್ವರೂಪ ಪಡೆದುಕೊಂಡಿವೆ ಅಷ್ಟೇ.
ಒಂದಂತೂ ಸತ್ಯ. ಟೆಸ್ಟ್ ಕ್ರಿಕೆಟ್‍ನ ಪರಂಪರೆ ಕಳೆದುಕೊಂಡಂತೆ ಭಾಸವಾಗುತ್ತಿದೆ. ಹಳೆಯ ದಿನಗಳು ಬಿಡಿ. ಕಳೆದ ಎರಡು ಮೂರು ದಶಕಗಳನ್ನು ನೆನಪು ಮಾಡಿ ಕೊಂಡಾಗ ಟೆಸ್ಟ್ ಕ್ರಿಕೆಟ್ ಅಂದ್ರೆ ನಮ್ಮ ಕಣ್ಣೆದುರು ಬರೋದು ಗಾವಸ್ಕರ್, ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸ್ಟೀವ್ ವಾ, ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಜಯವರ್ಧನೆ, ಯೂಸುಫ್ ಯೋಹಾನ ಮೊದಲಾದ ಹೆಸರುಗಳು.. ನಂತ್ರ ಜಾಯ್ ರೂಟ್, ಪೂಜಾರ.. ರಹಾನೆ.. ಸ್ಟೀವನ್ ಸ್ಮಿತ್, ವಿರಾಟ್ ಕೊಹ್ಲಿ, ಹೆಸರು ಗಳು ಕೇಳಿ ಬರುತ್ತಿದ್ದವು. ಆದ್ರೆ ಆಧುನಿಕ ಕ್ರಿಕೆಟ್ ನಲ್ಲಿ ಆ ರೀತಿ ಆಡೋ ಆಟಗಾರರು ತುಂಬಾ ವಿರಳ ಆಗಿದ್ದಾರೆ.
ಈಗ ಏನಿದ್ರೂ ಹೊಡಿ ಬಡಿ ಆಟದ ಖದರು. ಪ್ರತಿ ಎಸೆತದಲ್ಲೂ ರನ್ ಬರಬೇಕು. ಅದು ಸಿಂಗಲ್ಸ್ ಡಬಲ್ಸ್ ಅಲ್ಲ. ಏನಿದ್ರೂ ಫೆÇೀರ್ ಸಿಕ್ಸ್ ಅಷ್ಟೇ.. ಇಲ್ಲ ಅಂದ್ರೆ ಔಟ್.. ರಿಸಲ್ಟ್ ಎರಡು ಮೂರು ದಿನದಲ್ಲಿ ಬರ್ಬೇಕು.. ಈ ಮೆಂಟಾಲಿಟಿ ಯಲ್ಲಿ ಆಡೋ ಆಟಗಾರರೇ ಜಾಸ್ತಿ. ಇದು ಕೇವಲ ಟೀಮ್ ಇಂಡಿಯಾ ಆಟಗಾರರಿಗೆ ಅನ್ವಯ ಆಗೋಲ್ಲ.. ವಲ್ರ್ಡ್ ಕ್ರಿಕೆಟ್ ನ ಬಹುತೇಕ ಆಟಗಾರರಿಗೆ ಅನ್ವಯ ಆಗುತ್ತೆ.
ನೀವು ಏನು ಬೇಕಾದ್ರು ಹೇಳಿ.. ಟೆಸ್ಟ್ ಕ್ರಿಕೆಟ್ ಅಂದ್ರೆ ಅದಕ್ಕೆ ಅದರದ್ದೇ ಆದ ಘನತೆ, ಚಾರ್ಮ್ ಇದೆ. ಇಲ್ಲಿ ಬ್ಯಾಟರ್ ನ ತಾಳ್ಮೆ, ಸಾಮಥ್ರ್ಯವನ್ನು ಟೆಸ್ಟ್ ಮಾಡೋದು ಬೌಲರ್ ನ ಕೈ ಚಳಕ. ಹಾಗೇ ಬೌಲರ್‍ನ ಕಾಡಿ ಬೇಡಿ ರನ್ ಗಳಿಸೋದು ಬ್ಯಾಟರ್‍ನ ಬ್ಯಾಟಿಂಗ್ ಕೌಶಲ್ಯದಲ್ಲಿದೆ.
ಆದ್ರೆ ಸದ್ಯ ಟೀಮ್ ಇಂಡಿಯಾದಲ್ಲಿ ಇದನ್ನು ಕಾಣೋದು ಅಸಾಧ್ಯವಾಗಿದೆ. ಏನಿದ್ರೂ ಹೊಡಿ ಬಡಿ ಆಟದ ಸದ್ದೇ ಜಾಸ್ತಿ ಕಾಣಿಸ್ತಾ ಇದೆ. ಒತ್ತಡವನ್ನು ನಿಭಾಯಿಸಿಕೊಂಡು, ಸಮಯೋಚಿತವಾಗಿ ಆಡುವ ಮನೋಭಾವನೆ ಆಟಗಾರಲ್ಲಿ ಕಡಿಮೆಯಾಗುತ್ತಿದೆ. ಪ್ರತಿ ಎಸೆತ, ಪ್ರತಿ ಕ್ಷಣದಲ್ಲೂ ರನ್ ಗಳಿಸಬೇಕು ಅನ್ನೋ ಧಾವಂತ ಎದ್ದು ಕಾಣುತ್ತಿದೆ. ಅಂದ ಹಾಗೇ ಇದೆಲ್ಲ ನೆನಪಾಗಿದ್ದು ಯಾಕೆ ಅಂದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ಟೆಂಬಾ ಬಾವುಮ ಆಡಿದ ರೀತಿ ನೋಡಿದಾಗ ಅಸಲಿ ಟೆಸ್ಟ್ ಕ್ರಿಕೆಟ್ ನ ಆಟ ನೆನಪಾಯಿತ್ತು. ಫಾಸ್ಟ್ ಹಾಗೂ ಸ್ಪಿನ್ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಂತು ಆಡಿದ ಪರಿಯನ್ನು ನೋಡಿದಾಗ ಟೆಸ್ಟ್ ಕ್ರಿಕೆಟ್ ಇನ್ನು ಜೀವಂತದಲ್ಲಿದೆ ಎಂದು ಅನ್ಸಿತ್ತು. ಅಷ್ಟೇ ಅಲ್ಲ ಸ್ಪಿನ್ನರ್ ಗಳ ಎದುರು ಟೀಮ್ ಇಂಡಿಯಾ ಬ್ಯಾಟರ್ ಗಳು ಆಡುವುದನ್ನು ಇನ್ನು ಕಲಿಯಬೇಕಿದೆ. ಇಲ್ಲ ಅಂದ್ರೆ ಭವಿಷ್ಯದಲ್ಲಿ ತುಂಬಾ ಕಷ್ಟ ಇದೆ ಎಂಬ ಪಾಠ ವನ್ನು ಕಳಿಸಿದೆ.
ಒಟ್ಟಿನಲ್ಲಿ ಯಂಗ್ ಇಂಡಿಯಾಗೆ ತವರಿನಲ್ಲಿ ಗೆಲುವು ಅಂದು ಕೊಂಡಷ್ಟು ಇಝಿ ಇಲ್ಲ ಎಂಬುದನ್ನು ಅರಿತುಕೊಂಡ್ರೆ ತುಂಬಾ ಒಳ್ಳೆಯದು.
ಲೇಖನ: ಸನತ್ ರೈ
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








