ಬೆಂಗಳೂರು: ಮಹಾಮಾರಿ ಕೊರೊನಾ ಪಾಸಿಟಿವ್ ಬಂದರೆ ಆಘಾತಕ್ಕೆ ಒಳಗಾಗುವವರೇ ಹೆಚ್ಚು. ಟಿವಿಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ನಮಗೂ ಕೊರೊನಾ ಬಂದರೆ ಸತ್ತೇ ಹೋಗುತ್ತೇವೆ ಎಂಬ ಭಯ ಸಾಮಾನ್ಯ ಜನರನ್ನು ಕಾಡುತ್ತಿರುವ ಸಂಗತಿ.
ಆದರೆ, ನಗರದ 80ರ ಹರೆಯದ ವೃದ್ಧೆಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಎಸ್.ಲೀಲಾವತಿ ಎಂಬ 80ರ ಹರೆಯದ ಅಜ್ಜಿಗೆ ಸಣ್ಣ ಶಸ್ತ್ರ ಚಿಕಿತ್ಸೆಯೊಂದು ನಡೆಯಬೇಕಿತ್ತು. ಅದಕ್ಕೂ ಮುನ್ನ ಕೋವಿಡ್ ಟೆಸ್ಟ್ ಮಾಡಿಸಿ ಬಿಡಿ ಎಂದು ವೈದ್ಯರು ಸೂಚಿಸಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಕೂಡಲೇ ಅವರು ಜೆ.ಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದರು. ಧೈರ್ಯಗೆಡದೇ ವೈದ್ಯರು ನೀಡಿದ ಚಿಕಿತ್ಸೆಗೆ ಸಹಕರಿಸಿ ಚಾಚೂ ತಪ್ಪದೆ ಪಾಲಿಸಿದ ಲೀಲಾವತಿ ಒಂದು ವಾರದ ಹೊತ್ತಿಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದರು.
ಆಸ್ಪತ್ರೆಯಿಂದ ಗುಣಮುರಾಗಿ ಬಂದ ನಂತರ ತಮ್ಮ ಅನುಭವ ಹಂಚಿಕೊಂಡಿರುವ ಎಸ್. ಲೀಲಾವತಿ, ದಿನವೂ ಮನದಲ್ಲಿ ಕಾಡುತ್ತಿದ್ದ ಕೋವಿಡ್ ಭೂತ ಈಗ ನನ್ನ ದೇಹದಲ್ಲೇ ಸೇರಿದ್ದರೂ ಯಾವುದೇ ಭಯ ಆಗದಂತೆ ವೈದ್ಯರು ನನ್ನನ್ನು ನೋಡಿಕೊಂಡರು.
ಮನೆಯಿಂದ ಯಾರೂ ಬರುವಂತಿಲ್ಲ, ಯಾರನ್ನೂ ನೋಡುವಂತಿಲ್ಲ ಎಂಬ ಕೊರತೆಯೊಂದರ ಹೊರತಾಗಿ ಕೋವಿಡ್ ನನ್ನನ್ನು ಯಾವ ರೀತಿಯಲ್ಲೂ ಬಾಧಿಸಲಿಲ್ಲ. ಎರಡು ಮೂರು ದಿನ ನೆಗಡಿ ಇದ್ದದ್ದನ್ನು ಬಿಟ್ಟರೆ ನನಗೆ ಇನ್ನಾವ ಲಕ್ಷಣಗಳು ಇರಲೂ ಇಲ್ಲ, ಬರಲೂ ಇಲ್ಲ. ಕೋವಿಡ್ ಮೈಲ್ಡ್ ಮತ್ತು ಅಸಿಂಪೆÇ್ಟಮ್ಯಾಟಿಕ್ ಆಗಿರುವವರು ಹೆದರಲು ಯಾವುದೇ ಕಾರಣಗಳಿಲ್ಲ. ಫ್ಲೂ, ಜ್ವರ ಬಂದಾಗ ಆಸ್ಪತ್ರೆಗೆ ಸೇರುವುದಕ್ಕೂ, ಇದಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. 80 ವಯಸ್ಸಿನ ನನಗೇ ಹೆದರುವ ಕಾರಣವಿಲ್ಲವೆಂದ ಮೇಲೆ ನನಗಿಂತ ಚಿಕ್ಕವರು, ಹೆಚ್ಚು ಆರೋಗ್ಯವಂತರು ಕೋವಿಡ್ ಪಾಸಿಟಿವ್ ಆದರೂ ಧೈರ್ಯದಿಂದ ಎದುರಿಸಿ ಗುಣಮುಖರಾಗಿ ಹೊರಬರಬಹುದು ಎನ್ನುತ್ತಾರೆ ಲೀಲಾವತಿ.
80ರ ಹರೆಯದಲ್ಲೂ ವೃದ್ಧೆಯ ಜೀವನೋತ್ಸಾಹ ಇತರರಿಗೂ ಮಾದರಿಯಾಗಿದೆ
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








