ವ್ಯಕ್ತಿಯರ‍್ವ ತಾನು ಅನೈತಿಕ ಸಂಬAಧ ಹೊಂದಿದ್ದ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದಿದೆ. ೪೫ ವರ್ಷದ ಹುಲಿಗಮ್ಮ ಮೃತದುರ್ದೈವಿಯಾಗಿದ್ದು, ಹಲಗೇರಿ ಸಿದ್ದಲಿಂಗಪ್ಪ ಕೊಲೆಮಾಡಿರುವ ಆರೋಪಿಯಾಗಿದದ್ದಾನೆ. ಮೃತ ಹುಲಿಗಮ್ಮ ಸಿದ್ದಲಿಂಗಪ್ಪನ ಬಳಿ ೨ ಎಕರೆ ಜಮೀನಿಗೆ ಬೇಡಿಕೆಯಿಟ್ಟಿದ್ದಳು. ಆದರೆ ಇದಕ್ಕೆ ಒಪ್ಪದ ಸಿದ್ದಲಿಂಗಪ್ಪ ಆಕೆಯನ್ನ ಕತ್ತು ಹಿಸುಕಿ ಕೊಲೆ ಮಾಡಿ ತನ್ನ ಜಮೀನಿನಲ್ಲೇ ಶವವನ್ನು ಹೂತಿಟ್ಟಿದ್ದ ಎನ್ನಲಾಗಿದೆ. ಇದೀಗ ಈತನ ಕೃತ್ಯ ಬಯಲಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಸಂಬಮಧ ಪ್ರಕರಣ ದಾಖಲಿಸಿಕೊಂಡಿರುವ ತಂಬ್ರಳ್ಳಿ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಶವ ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.
ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ
ನವದೆಹಲಿ: ದೇಶದ ರಾಜಕಾರಣದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಮತ್ತು ಬಿಜೆಪಿಯ ಅಧಿಪತ್ಯ ಕುಸಿಯುವ ಕಾಲ ಹತ್ತಿರ ಬಂದಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಅವರು ಗುಡುಗಿದ್ದಾರೆ....








