ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 78ನೇ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯಡಿಯೂರಪ್ಪ ಇಂದು ತಮ್ಮ ಅದೃಷ್ಟದ ಮನೆ ಕಾವೇರಿಗೆ ಗೃಹಪ್ರೇಶ ಮಾಡಿದ್ದಾರೆ.
ಇಂದು ಮುಂಜಾನೆ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಗೃಹಪ್ರವೇಶ ಪೂಜೆ ಮಾಡಿ ತಮ್ಮ ವಾಸಸ್ಥಳವನ್ನು ಕಾವೇರಿಗೆ ಶಿಫ್ಟ್ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದು ತಿಂಗಳುಗಳೇ ಉರುಳಿದರು ಮಾಜಿಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸ ಬಿಟ್ಟುಕೊಡದ ಕಾರಣ ಬಿಎಸ್‍ವೈ ತಮ್ಮ ವಾಸಸ್ಥಳವನ್ನು ಬದಲಿಸಿರಲಿಲ್ಲ. ಇದೀಗಾ ಸಿದ್ದರಾಮಯ್ಯ ಕಾವೇರಿಯಿಂದ ನಿರ್ಗಮಿಸಿದ ಹಿನ್ನೆಲೆ ಸರ್ಕಾರಿ ಬಂಗಲೆ ‘ಕಾವೇರಿ’ಗೆ ಕುಟುಂಬ ಸಮೇತ ಸ್ಥಳಾಂತರಗೊಂಡಿದ್ದಾರೆ.
ಇನ್ನು, ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದ ವೈಲ್ ಪೆಟಲ್ಸ್ ಸಭಾಂಗಣದಲ್ಲಿ ಸಂಜೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.








