ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?

admin by admin
December 13, 2025
in Newsbeat, Sports, ಕ್ರಿಕೆಟ್
Gill.. Sanju Samson's fight.. Will Jaiswal - Vaibhav get a chance..?

Gill.. Sanju Samson's fight.. Will Jaiswal - Vaibhav get a chance..?

Share on FacebookShare on TwitterShare on WhatsappShare on Telegram

ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?

ಟೀಮ್ ಇಂಡಿಯಾ ಮನೆಯೊಂದು ಮೂರು ಬಾಗಿಲು ಆಗುತ್ತಿರುವುದಕ್ಕೆ ಕಾರಣ ಯಾರು..?
ಸ್ಕೈ ಗ್ಯಾಂಗ್‍ನಲ್ಲಿ ಇಷ್ಟೊಂದು ಭಿನ್ನಾಭಿಪ್ರಾಯ ಮೂಡಲು ಪ್ರಮುಖ ವಿಷ್ಯವಾದ್ರೂ ಏನು..?
ಟೀಮ್ ಇಂಡಿಯಾ ಎಡುವುತ್ತಿರುವುದು ಎಲ್ಲಿ..?
202ರ ಟಿ-20 ವಿಶ್ವಕಪ್ ಟೂರ್ನಿಗೆ ರೆಡಿಯಾಗೋದು ಯಾವಾಗ..?
ಪ್ರತಿಷ್ಠಿತ ಟೂರ್ನಿ ಸಮೀಪಿಸುತ್ತಿರುವುದಂತೆ ಟೀಮ್ ಇಂಡಿಯಾದಲ್ಲಿ ಇಷ್ಟೊಂದು ಗೊಂದಲ ಯಾಕೆ..?
ಹೀಗೆ ಮುಂದುವರಿದ್ರೆ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡೋದು ಹೇಗೆ..?
ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಒಂದೇ ಒಂದು ಹೆಸರು… ಅದು ಹೆಡ್‍ಕೋಚ್ ಗೌತಮ್ ಗಂಭೀರ್.
ಹೌದು, ಗಂಭೀರ್ ಹೆಡ್ ಕೋಚ್ ಆದ ಬಳಿಕ ಸತತ ಟೀಕೆಗಳೇ ಕೇಳಿಬರುತ್ತಿವೆ. ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಗಂಭೀರ್ ವಿರುದ್ಧ ಸತತವಾಗಿ ಟೀಕಾಸ್ತ್ರಗಳ ಪ್ರಹಾರವೇ ನಡೆಯುತ್ತಿದೆ.
ಅದಕ್ಕೆ ಕಾರಣ ಗೌತಮ್ ಗಂಭೀರ್ ನಡೆ. ಯಾರು ಏನೇ ಅನ್ನಲಿ.. ನಾನು ಇರೋದೇ ಹೀಗೆ.. ನನ್ನ ತಂಡ ಹೀಗೆ ಇರುತ್ತೆ.. ಹೀಗೆ ಇರಬೇಕು ಎಂಬ ಸರ್ವಾಧಿಕಾರಿ ಧೋರಣೆಯೇ ಗಂಭೀರ್‍ಗೆ ಮುಳುವಾಗುತ್ತಿದೆಯಾ..? ಅಥವಾ ಸೀನಿಯರ್ – ಜ್ಯೂನಿಯರ್ ಆಟಗಾರರ ಮನ ಗೆಲ್ಲಲು ಗಂಭೀರ್ ವಿಫಲವಾಗುತ್ತಿದ್ದಾರಾ..? ಅಷ್ಟೇ ಅಲ್ಲ, ತಂಡದಲ್ಲಿರುವ ಕೆಲವು ಆಟಗಾರರು ಗಂಭೀರ್ ಮಾತನ್ನು ಕೇಳುತ್ತಿಲ್ವಾ..? ಎಲ್ಲರೂ ನನ್ನ ಮಾತು ಕೇಳಬೇಕು ಎಂಬ ಹಿಟ್ಲರ್ ಮನೋಭಾವನೆಯಾ..? ಆದ್ರೆ ತಂಡದೊಳಗೆ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ.. ಕೇವಲ ಊಹಾಪೋಹನಾ… ಯಾವುದು ಕೂಡ ಕ್ಲಾರಿಟಿ ಸಿಗುತ್ತಿಲ್ಲ.
ಆದ್ರೆ ಸದ್ಯದ ಟೀಮ್ ಇಂಡಿಯಾದ ಪರಿಸ್ಥಿತಿ ಚೌಚೌ ಬಾತ್‍ನಂತಿದೆ ಎಂಬುದು ಸುಳ್ಳಲ್ಲ. ಈ ಕಡೆ ಸಿಹಿನೂ ಇಲ್ಲ.. ಅತ್ತ ಖಾರನೂ ಇಲ್ಲ. ಸಿಹಿಯಾದಾಗ ಟೀಮ್ ಎಫರ್ಟ್.. ಖಾರ ಆದಾಗ ಹೆಡ್ ಕೋಚ್ ಸರಿ ಇಲ್ಲ ಅನ್ನೋ ಮಾತು. ಅದು ಏನೇ ಇರಲಿ, ಅದು ಯಾರೇ ಆಗಿರಲಿ..ಅಹಂ ಬಿಟ್ಟು ತಂಡದ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇಲ್ಲದೆ ಇದ್ರೆ ಭಾರತೀಯ ಕ್ರಿಕೆಟ್‍ಗೆ ಮತ್ತು ಅಭಿಮಾನಿಗಳಿಗೆ ಮಾಡುತ್ತಿರುವ ಮಹಾ ದ್ರೋಹ.
ಸದ್ಯ ಟೀಮ್ ಇಂಡಿಯಾದಲ್ಲಿ ಮುಖ್ಯ ಸಮಸ್ಯೆ ಇರೋದು ಬ್ಯಾಟಿಂಗ್ ಕ್ರಮಾಂಕದಲ್ಲಿ. ಅದರಲ್ಲೂ ಟಿ-20 ಕ್ರಿಕೆಟ್‍ನಲ್ಲಿ ಯಾರು ಇನಿಂಗ್ಸ್ ಆರಂಭಿಸಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪದೇ ಪದೇ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡುತ್ತಿರೋದು ಯಾಕೆ ಎಂಬುದು ತಿಳಿಯುತ್ತಿಲ್ಲ. ಅಷ್ಟಕ್ಕೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಅವಶ್ಯಕತೆಯಾದ್ರೂ ಏನಿದೆ..?
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪಾಟ್ನರ್ ಯಾರಾಗಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕೆಲವರು ಸಂಜು ಸ್ಯಾಮ್ಸನ್‍ಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಶುಭ್ಮನ್ ಗಿಲ್ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ನಡುವೆ ಎಕ್ಸ್ ಫ್ಯಾಕ್ಟರ್ ಆಗಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಕಡೆ ಬೆರಳು ತೋರಿಸುತ್ತಿದ್ದಾರೆ. ಆದ್ರೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್‍ಮೆಂಟ್ ಇದಕ್ಕೆ ಇನ್ನೂ ಕೂಡ ಉತ್ತರ ಹುಡುಕುತ್ತಿದೆ.
ಹಾಗೇ ನೋಡಿದ್ರೆ ಟೀಮ್ ಇಂಡಿಯಾದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳೇನೂ ಇಲ್ಲ. ಎಲ್ಲ ಸಮಸ್ಯೆ, ಗೊಂದಲಗಳನ್ನು ಸ್ವಯಂಕೃತವಾಗಿ ಮಾಡಿಕೊಂಡಿರೋದು. ಮುಖ್ಯವಾಗಿ ಟಿ-20ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಯಾರು ಇನಿಂಗ್ಸ್ ಆರಂಭಿಸಬೇಕು ಎಂಬುದು ಈಗ ಮುಖ್ಯ ಪ್ರಶ್ನೆ. ಒಂದು ವೇಳೆ ಶುಭ್ಮನ್ ಗಿಲ್ ಅದ್ಭುತವಾದ ಫಾರ್ಮ್‍ನಲ್ಲಿ ಇರುತ್ತಿದ್ರೆ ಈ ಪ್ರಶ್ನೆ ಉದ್ಭವ ಆಗುತ್ತಿರಲಿಲ್ಲ. ಹೀಗಾಗಿ ಸಂಜು ಸ್ಯಾಮ್ಸನ್‍ಗೆ ಅನ್ಯಾಯವಾಗುತ್ತಿದೆ ಎಂಬ ಧ್ವನಿ ಜೋರಾಗಿ ಕೇಳಿಬರುತ್ತಿದೆ.
ನಿಜ, ಹೇಳಬೇಕು ಅಂದ್ರೆ ಸಂಜುಗೆ ಅನ್ಯಾಯವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಸಂಜು ಪ್ರತಿಭೆಗೆ ಟೀಮ್ ಇಂಡಿಯಾದಲ್ಲಿ ಬೆಲೆ ಸಿಕ್ಕಿಲ್ಲ. ಒಂದು ವೇಳೆ ಸಂಜು ಮುಂಬೈ ಅಥವಾ ದೆಹಲಿ ತಂಡದಲ್ಲಿ ಆಡುತ್ತಿದ್ರೆ ಇವತ್ತು ಟೀಮ್ ಇಂಡಿಯಾದ ನಾಯಕನಾಗುತ್ತಿದ್ದ. ಆದ್ರೆ ಅಂತಹ ಅವಕಾಶಗಳು ಸಂಜುಗೆ ಸಿಗಲೇ ಇಲ್ಲ. ಗುರು ದ್ರಾವಿಡ್ ಆಗಲಿ, ರವಿಶಾಸ್ತ್ರಿಯೇ ಆಗಿರಲಿ, ಅನಿಲ್ ಕುಂಬ್ಳೆ, ಈಗೀನ ಕೋಚ್ ಗೌತಮ್ ಗಂಭೀರ್ ಕೂಡ ಸಂಜು ಸ್ಯಾಮ್ಸನ್‍ಗೆ ಹೆಚ್ಚು ಅವಕಾಶವನ್ನೇ ನೀಡಲಿಲ್ಲ. ಇದು ಯಾಕೆ ಎಂಬ ಪ್ರಶ್ನೆಗೆ ಉತ್ತರ ತಾರತಮ್ಯ.
ಓಕೆ.. ಟಿ-20 ಪಂದ್ಯದಲ್ಲಿ ಸಂಜುಗೆ ಆರಂಭಿಕ ಸ್ಥಾನ ಬೇಡ.. ಕನಿಷ್ಠ ವಿಕೆಟ್ ಕೀಪರ್ ಅವಕಾಶವನ್ನು ನೀಡಬಹುದಿತ್ತು. ಆದ್ರೆ ಟೀಮ್ ಮ್ಯಾನೇಜ್‍ಮೆಂಟ್ ಜಿತೇಶ್ ಶರ್ಮಾಗೆ ಚಾನ್ಸ್ ನೀಡಿದೆ. ಹಾಗೇ ನೋಡಿದ್ರೆ ಜಿತೇಶ್ ಶರ್ಮಾನಿಗಿಂತಲೂ ಸಂಜು ಪ್ರಬುದ್ಧ ಆಟಗಾರ. ಟೆಸ್ಟ್, ಏಕದಿನ ಬೇಡ. ಆದ್ರೆ ಟಿ-20 ಕ್ರಿಕೆಟ್‍ನಲ್ಲಿ ಸಂಜು ಇನ್ನೂ ಎಷ್ಟು ಉತ್ತಮ ಪ್ರದರ್ಶನ ನೀಡಬೇಕು..? ತಂಡದ 15ರ ಬಳಗದಲ್ಲಿ ಅವಕಾಶ ನೀಡುತ್ತೀರಿ.. ಆದ್ರೆ ಆಡುವ 11ರ ಬಳಗದಲ್ಲಿ ಅವಕಾಶ ಯಾಕಿಲ್ಲ. ಒಂದು ವೇಳೆ ಸಂಜುಗೆ ಅವಕಾಶ ಬೇಡ ಅಂದ ಮೇಲೆ ತಂಡಕ್ಕೆ ಆಯ್ಕೆ ಮಾಡುವುದಾದ್ರೂ ಯಾಕೆ..? ಯಾಕಂದ್ರೆ ಸಂಜು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಆದ್ರೆ ದಕ್ಷಿಣ ಭಾರತೀಯ ಎಂಬ ಕಾರಣಕ್ಕೆ ಅವಕಾಶ ನೀಡುವುತ್ತಿಲ್ವಾ..? ಇನ್ನು, ಪ್ರಸಿದ್ಧ ಕೃಷ್ಣ ಬಿಟ್ರೆ ಕರ್ನಾಟಕದಿಂದ ಕೆ.ಎಲ್. ರಾಹುಲ್ ಕೂಡ ಟಿ-20 ತಂಡದಿಂದ ದೂರ ಉಳಿದಿದ್ದಾರೆ. ಅದನ್ನು ಬಿಟ್ಟು ಕರ್ನಾಟಕದಿಂದ ಆ ಮಟ್ಟದ ಆಟಗಾರರು ರೂಪುಗೊಂಡಿಲ್ಲ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ. ಆದ್ರೆ ಟೀಮ್ ಇಂಡಿಯಾ ಕಾಂಬಿನೇಷನ್ ಸರಿಪಡಿಸಿಕೊಳ್ಳಬೇಕು. ಅದಕ್ಕಿಂತ ಮೊದಲು ಅಹಂ ಮತ್ತು ನಾನು ಅನ್ನೋ ಮಾನೋಭಾವನೆಯನ್ನು ಬಿಡಬೇಕು. ಒಗ್ಗಟ್ಟಿನ ಮಂತ್ರ ಪಠಿಸಬೇಕು. ಹೊಂದಾಣಿಕೆ ಹಾಗೂ ಪಾರದರ್ಶಕತೆಯಿಂದ ತಂಡವನ್ನು ಆಯ್ಕೆ ಮಾಡಿದ್ರ್ರೆ ಟೀಮ್ ಇಂಡಿಯಾದಲ್ಲಿ ಯಾವುದೇ ಪ್ರಾಬ್ಲಮ್ ಇಲ್ಲ. ಯಾಕಂದ್ರೆ ಟೀಮ್ ಇಂಡಿಯಾದ ಟಿ-20 ತಂಡದಲ್ಲಿರೋದು ಬಿಸಿರಕ್ತದ ಹುಡುಗರು. ಅವರಿಗೆ ಬೇಕಾಗಿರೋದು ಸೂಕ್ತ ಮಾರ್ಗದರ್ಶನದ ಜೊತೆಗೆ ಆತ್ಮವಿಶ್ವಾಸ ತುಂಬೋದು. ಅದನ್ನು ಮಾಡಬೇಕಿರೋದು ಹೆಡ್ ಮಾಸ್ಟರ್ ಗೌತಮ್ ಗಂಭೀರ್. ಮೇಲ್ನೋಟಕ್ಕೆ ಆ ಕೆಲಸ ಆಗುತ್ತಿಲ್ಲ ಎಂಬುದು ಕಂಡುಬರುತ್ತಿದೆ. ಗಂಭೀರ್‍ಗೆ ಒಂದು ಮಾತು.. ಗಂಭೀರ್ ಅದ್ಭುತ ಕ್ರಿಕೆಟಿಗ. ಅಪ್ಪಟ ದೇಶ ಪ್ರೇಮಿ. ಆದ್ರೆ ಮುಂಗೋಪಿ.. ನೇರ ನಡೆಯ ವ್ಯಕ್ತಿ. ತನಗೆ ಅನ್ನಿಸಿದ್ದನ್ನು ಕಡ್ಡಿ ಮುರಿದಂಗೆ ಹೇಳುವ ವ್ಯಕ್ತಿತ್ವ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ಟೀಮ್ ಇಂಡಿಯಾ ವಿಷ್ಯ ಬಂದಾಗ ಎಲ್ಲರನ್ನು ಸಮದೂಗಿಸಿಕೊಂಡು ಹೋಗಬೇಕು. ಇದನ್ನು ಅರಿತುಕೊಂಡ್ರೆ ಎಲ್ಲವೂ ಒಳ್ಳೆಯದಾಗುತ್ತದೆ.
ಸನತ್ ರೈ

Related posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

August 2, 2026
jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026
Source: Gill.. Sanju Samson's fight.. Will Jaiswal - Vaibhav get a chance..?
Via: Gill.. Sanju Samson's fight.. Will Jaiswal - Vaibhav get a chance..?
Tags: #gouthamgambhir#saakshatv#shubhmangill#vaibhavsuryavansi#Yashasvi JaiswalSanjuSamsonteamindia
ShareTweetSendShare
Join us on:

Related Posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

by admin
August 2, 2026
0

ನಾಳೆಯಿಂದ ಮೂರು ದಿನ ಕೆಲ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಈ ದಿನ ಶನಿ ಹಾಗೂ ಚಂದ್ರನ ಸಂಯೋಗದಿಂದಾಗಿ ಅತ್ಯಂತ ಅಶುಭ ಯೋಗ ಸೃಷ್ಟಿಯಾಗಲಿದೆ. ಇದು ಕೆಲ...

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

by Shwetha
August 2, 2026
0

ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

by Shwetha
August 2, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್‌,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram