ADVERTISEMENT
Tuesday, May 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

admin by admin
December 14, 2025
in Newsbeat, Sports, ಕ್ರಿಕೆಟ್
Playing a cricket match.. but no handshake..!

Playing a cricket match.. but no handshake..!

Share on FacebookShare on TwitterShare on WhatsappShare on Telegram

2025 ಭಾರತ – ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ – ನೋ ಹ್ಯಾಂಡ್ ಶೇಕ್..!
2025 ಭಾರತ – ಪಾಕ್ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ – ನೋ ಹ್ಯಾಂಡ್ ಶೇಕ್..!
2025 ಭಾರತ – ಪಾಕ್ ನಡುವಿನ 19 ವಯೋಮಿತಿ ಏಕದಿನ ಏಷ್ಯಾಕಪ್ ಟೂರ್ನಿ – ನೋ ಹ್ಯಾಂಡ್ ಶೇಕ್…!
ಇದು ಎಷ್ಟು ದಿನ ಹೀಗೆ ಮುಂದುವರಿಯುತ್ತೆ.. ಗೊತ್ತಿಲ್ಲ… ಉಭಯ ದೇಶಗಳ ನಡುವಿನ ರಾಜಕೀಯ ಕದನಕ್ಕೆ ಮೈದಾನದಲ್ಲಿ ಇಂಡೋ ಪಾಕ್ ಆಟಗಾರರು ಒಬ್ಬರೊನ್ನೊಬ್ಬರು ದಿಟ್ಟಿಸಿ ಕೂಡ ನೋಡುತ್ತಿಲ್ಲ. ಆಟಗಾರರ ನಡುವೆ ಮಾತಿಲ್ಲ.. ಮುಖದಲ್ಲಿ ನಗುವಿಲ್ಲ. ಎಲ್ಲವೂ ಪೂರ್ವ ನಿರ್ಧಾರದಂತೆ ನಡೆದಿದೆ. ಮೈದಾನದಲ್ಲಿ ಮುಜುಗರವಾಗಬಾರದು ಎಂಬ ಕಾರಣಕ್ಕೆ ಐಸಿಸಿ ಮೊದಲೇ ಸೂಚನೆ ನೀಡಿತ್ತು. ಹ್ಯಾಂಡ್ ಶೇಕ್ ಮಾಡುತ್ತಿಲ್ಲ ಎಂಬುದನ್ನು ಮೊದಲೇ ಹೇಳಬೇಕು ಎಂದು ಹೇಳಿತ್ತು. ಹಾಗೇ ಕ್ರಿಕೆಟ್ ಆಟದಲ್ಲಿ ರಾಜಕೀಯ ಬೇಡ ಎಂಬ ಸಂದೇಶವನ್ನು ಬಿಸಿಸಿಐ ತಿರಸ್ಕರಿಸಿದೆ. ಹೀಗಾಗಿ ಹ್ಯಾಂಡ್‍ಶೇಕ್ ವಿಚಾರ ಮುಂದಿನ ದಿನಗಳಲ್ಲಿ ಐಸಿಸಿಗೆ ಧರ್ಮ ಸಂಕಟವಾಗಿ ಪರಿಣಮಿಸಲಿದೆ.
ಇಂಡೋ ಪಾಕ್ ಮ್ಯಾಚ್ ಅಂದ್ರೆ ಅದು ಹೈವೋಲ್ಟೇಜ್ ಪವರ್ ಇದ್ದಂಗೆ. ನಿಜ, ಉಭಯ ದೇಶಗಳ ನಡುವೆ ಈ ಹಿಂದೆ ಮೈದಾನದಲ್ಲಿ ಸಾಕಷ್ಟು ವಾಕ್ಸಮರಗಳು ನಡೆದಿವೆ. ಆಟಗಾರರು ಕಿತ್ತಾಡಿಕೊಂಡಿದ್ದಾರೆ. ಹೊಡೆದಾಟಕ್ಕೂ ಮುಂದಾಗಿದ್ದಾರೆ. ಹಾಗೇ ಮೈದಾನದ ಹೊರಗಡೆಯೂ ಅಭಿಮಾನಿಗಳ ನಡುವೆ ಅಷ್ಟೇ ಕಿತ್ತಾಟಗಳು ನಡೆದಿವೆ. ಆದ್ರೆ ಪಂದ್ಯ ಮುಗಿದ ಮೇಲೆ ಉಭಯ ದೇಶಗಳ ನಡುವಿನ ಆಟಗಾರರ ನಡುವೆ ಆತ್ಮೀಯತೆ ಇರುತ್ತಿತ್ತು. ಭಾರತದ ವಿರುದ್ಧ ಸದಾ ಟೀಕೆ ಮಾಡುತ್ತಿರುವ ಶಾಹೀದ್ ಆಫ್ರಿದಿ 2004ರಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಮನೆಗೆ ಕರೆದು ಆತಿಥ್ಯ ನೀಡಿದ್ದರು ಎಂಬುದನ್ನು ಮರೆಯುವ ಹಾಗಿಲ್ಲ. ಅಲ್ಲದೆ, 2004ರ ಸೌಹಾರ್ದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಉಭಯ ದೇಶಗಳು ದ್ವೇಷವನ್ನು ಮರೆತು ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿದ್ರು.
ಆದ್ರೆ ಪಾಕ್‍ನ ರಾಜಕೀಯ ನಾಯಕರ ಅಧಿಕಾರ ದಾಹ.. ಸೇನೆಯ ಕಪಟ ನಾಟಕ..ನರಹಂತಕ ರಕ್ಕಸರ ಆರ್ಭಟಕ್ಕೆ ಇಂಡೋ ಪಾಕ್ ನಡುವಿನ ರಾಜಕೀಯ, ಆರ್ಥಿಕ ವಹಿವಾಟು ಮಾತ್ರ ಸ್ಥಗಿತಗೊಂಡಿಲ್ಲ. ಜೊತೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಮ್ಯಾಚ್ ನಿಂತೋಗಿದೆ. ಇದೀಗ ಐಸಿಸಿ ಟೂರ್ನಿಗಳನ್ನು ತಟಸ್ಥ ತಾಣಗಳಲ್ಲಿ ಆಡುತ್ತಿದ್ದು, ಮುಂದೊಂದು ದಿನ ಇದು ಕೂಡ ಸ್ಥಗಿತಗೊಂಡ್ರೆ ಅಚ್ಚರಿ ಏನಿಲ್ಲ..!
ಯಾಕಂದ್ರೆ ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿ ಪಾಕ್ ಜೊತೆ ನೆಂಟಸ್ತಿಕೆ ಮಾಡೋ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಮೋದಿ ಅವರು, ಅಟಲ್‍ಬಿಹಾರಿ ವಾಜಪೇಯಿಯಂತೆ ಸ್ನೇಹಜೀವಿಯೂ ಅಲ್ಲ.. ಮನಮೋಹನ್ ಸಿಂಗ್‍ನಂತೆ ಉದಾರವಾದಿಯೂ ಅಲ್ಲ.. ಏನಿದ್ರೂ ಭಯೋತ್ಪಾದನೆ ನಿಲ್ಲೋ ತನಕ ಪಾಕಿಸ್ತಾನದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಅಷ್ಟೇ ಅಲ್ಲ.. ಕ್ರಿಕೆಟ್‍ನಿಂದ ಭಾರತ – ಪಾಕ್ ನಡುವೆ ಸ್ನೇಹ ಬೆಳೆಯುತ್ತೆ ಎಂಬುದು ಪೇಪರ್ ಮೇಲೆ ಬರೆಯುವ ಪದಗಳಷ್ಟೇ ಎಂಬುದು ಗೊತ್ತಿರುವ ವಿಚಾರವೇ..! ಈ ಹಿಂದೆ ಎರಡು ಮೂರು ಬಾರಿ ಸ್ನೇಹ ಹಸ್ತಚಾಚಿದ್ರೂ ಭಾರತದ ಬೆನ್ನಿಗೆ ಚೂರಿ ಹಾಕಿರುವ ಪಾಕಿಸ್ತಾನದ ನರಿಬುದ್ದಿಯನ್ನು ಈಗ ಅಷ್ಟು ಇಝಿಯಾಗಿ ನಂಬುವ ಸ್ಥಿತಿಯಲ್ಲಿ ಇಲ್ವೇ ಇಲ್ಲ.. ಸೋ.. ಸದ್ಯ ನೋ ಹ್ಯಾಂಡ್‍ಶೇಕ್.. ಮುಂದೊಂದು ದಿನ ನೋ ಕ್ರಿಕೆಟ್ ಮ್ಯಾಚ್..?

ಸನತ್ ರೈ

Related posts

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

May 12, 2026
ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

May 12, 2026
Source: Playing a cricket match.. but no handshake..!
Via: Playing a cricket match.. but no handshake..!
Tags: #nohandshek#saakshatv#under19asiacupCricketPakistanteamindia
ShareTweetSendShare
Join us on:

Related Posts

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

by Shwetha
May 12, 2026
0

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕೆಲವು ಮಹತ್ವದ ಮನವಿಗಳನ್ನು ಮಾಡಿದ್ದಾರೆ. ಚಿನ್ನ ಖರೀದಿಸಬೇಡಿ, ವಾಹನ ಬಳಕೆ ತಗ್ಗಿಸಿ, ವಿದೇಶಿ ಪ್ರವಾಸ ಬೇಡ ಎಂಬಂತಹ ಸಲಹೆಗಳ...

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

by Shwetha
May 12, 2026
0

ರಾಜ್ಯದ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಗುಡ್ ನ್ಯೂಸ್ ಸಿಕ್ಕಿದೆ. ದುಬಾರಿ ಜೀವನ ವೆಚ್ಚದ ನಡುವೆ ಸರ್ಕಾರ ಈಗ ತುಟ್ಟಿಭತ್ಯೆ (DA)...

ನನ್ನ ಕ್ಷೇತ್ರದ ಜನರ ರಕ್ಷಣೆಗೆ ಮೆಟ್ಟು ಹಿಡಿಯಲೂ ಸಿದ್ಧ: ಅಥಣಿಯಲ್ಲಿ ಲೂಟಿಕೋರರ ವಿರುದ್ಧ ಸವದಿ ಗುಡುಗು

ನನ್ನ ಕ್ಷೇತ್ರದ ಜನರ ರಕ್ಷಣೆಗೆ ಮೆಟ್ಟು ಹಿಡಿಯಲೂ ಸಿದ್ಧ: ಅಥಣಿಯಲ್ಲಿ ಲೂಟಿಕೋರರ ವಿರುದ್ಧ ಸವದಿ ಗುಡುಗು

by Shwetha
May 12, 2026
0

ರೈತರು ಮತ್ತು ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ಅಂತಹ ಪ್ರಸಂಗ ಬಂದರೆ ಮೆಟ್ಟಿನಲ್ಲಿ ಹೊಡೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಬಿಜೆಪಿ...

‘ಪೆದ್ದಿ’ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

‘ಪೆದ್ದಿ’ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

by Shwetha
May 12, 2026
0

ವಿಶ್ವ ಸಿನಿರಂಗದಲ್ಲೇ ಸದ್ದು ಮಾಡಿದ್ದ RRR ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ ರಾಮ್ ಚರಣ್ ಇದೀಗ ಮತ್ತೊಂದು ಭಾರಿ ನಿರೀಕ್ಷೆಯ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ...

ಡಿ. ಸುಧಾಕರ್ ಗೆ ಅಂತಿಮ ವಿದಾಯ

ಡಿ. ಸುಧಾಕರ್ ಗೆ ಅಂತಿಮ ವಿದಾಯ

by Shwetha
May 12, 2026
0

ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಿ. ಸುಧಾಕರ್ ಅವರು ತಮ್ಮ 66 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಶ್ವಾಸಕೋಶದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram