ಅದು ತ್ರೇತಾಯುಗ ರಾಮಾಯಣದ ಯುಗ. ಅಯೋಧ್ಯೆಯಲ್ಲಿ ದಶರಥ ರಾಜ್ಯಭಾರ ಮಾಡುತ್ತಿದ್ದರೆ, ಮಿಥಿಲೆಯಲ್ಲಿ ರಾಜ ಋಷಿ ಜನಕ ಮಹಾರಾಜ ಆಳ್ವಿಕೆ ನಡೆಸುತ್ತಿದ್ದನು. ಧರಣಿಯಲ್ಲಿ ದೊರೆತ ಮಗಳು ಸೀತೆಯನ್ನು ಜನಕ ಮಹಾರಾಜ ಮತ್ತು ಪತ್ನಿ ಸುನೈನ ಅಪಾರವಾದ ಪ್ರೀತಿಯಿಂದ ಕಣ್ರೆಪ್ಪೆಯಂತೆ ಸಲಹುತ್ತಿದ್ದ ರು. ಸೀತೆಯ ಕಾಲ್ಗುಣದಿಂದ ಸುನೈನ ಗರ್ಭವತಿಯಾಗಿ ಹೆಣ್ಣು ಶಿಶುಜನನ ವಾಯಿತು ಅದಕ್ಕೆ ಊರ್ಮಿಳೆ ಎಂದು ಹೆಸರಿಟ್ಟರು. ಅಕ್ಕ ತಂಗಿ ಯರಾದ ಸೀತೆ -ಊರ್ಮಿಳೆಯರು ಅನ್ಯೋನ್ಯವಾಗಿ ಆಡಿಕೊಂಡಿದ್ದರು. ಮಕ್ಕಳಿನ್ನೂ ಚಿಕ್ಕವರಿರುವಾಗಲೇ ತಾಯಿ ಸುನೈನ ಮರಣ ಹೊಂದಿದಳು. ಊರ್ಮಿಳೆ ಜವಾಬ್ದಾರಿ ಸೀತೆಯ ಹೆಗಲಿಗೆ ಬಿತ್ತು. ಸೀತೆ ತಾಯಿಯಂತೆ ಊರ್ಮಿಳೆಯನ್ನು ನೋಡಿಕೊಂಡಳು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಅಯೋಧ್ಯೆಯಲ್ಲಿ ದಶರಥನಿಗೆ ನಾಲ್ಕು ಜನ ಗಂಡು ಮಕ್ಕಳಾಗಿ, ಅವರ ಬಾಲ್ಯ ಕಳೆದು ಯೌವನಕ್ಕೆ ಕಾಲಿಡುವುದರೊಳಗೆ ವಿಶ್ವಾಮಿತ್ರರು ಬಂದು ರಾಕ್ಷಸರ ಸಂಹಾರಕ್ಕೆ ತಮ್ಮ ಜೊತೆ ರಾಮ ಲಕ್ಷ್ಮಣರನ್ನು ಕಾಡಿಗೆ ಕರೆದೊಯ್ಧರು. ಅಲ್ಲಿ ರಾಕ್ಷಸರ ಸಂಹಾರವಾಗಿ ಋಷಿ ಮುನಿಗಳ ಕಾರ್ಯ ಸುಗಮವಾಗಿ ಸಾಗಿತು ನಂತರ ಜನಕ ರಾಜನ ಮಗಳು ಸೀತಾ ರಾಮರ ಕಲ್ಯಾಣದ ಜೊತೆ ರಾಮನ ಸಹೋದರು ಲಕ್ಷ್ಮಣ- ಸೀತೆಯ ತಂಗಿ ಊರ್ಮಿಳೆ, ಹಾಗೂ ಭರತ -ಶತ್ರುಜ್ಞ ಹಾಗೂ ಸೀತೆಯ ಇನ್ನಿಬ್ಬರು ಸಹೋದರಿಯರು ಶ್ರುತಿಕೀರ್ತಿ- ಮಾಂಡವಿಯರ ವಿವಾಹವು ಸಂಪನ್ನವಾಯಿತು.
ವಿವಾಹ ಕಾರ್ಯಗಳು ಮುಗಿದು ಅಯೋಧ್ಯೆಗೆ ಬಂದರು. ಮೊದಲೆರಡು ವರುಷ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದರು. ತಾಯಿ ಕಳೆದುಕೊಂಡು
ಊರ್ಮಿಳೆಗೆ ಕೌಸಲ್ಯೆ, ಕೈಕೆಯಿ, ಸುಮಿತ್ರ, ತಾಯಿ ಪ್ರೀತಿಯನ್ನು ಧಾರೆ
ಎರೆದರು. ಹೀಗೆ ಸುಖವಾಗಿದ್ದ ಕಾಲದಲ್ಲಿಯೇ ವಿಧಿ ಲಿಖಿತದಂತೆ, ಕೈಕೆಯಿ ಗೆ ಚಾಡಿ ಕೇಳುವ ದುರ್ಬುದ್ದಿ ಬಂತು, ಸ್ವಾರ್ಥ, ಅಸೂಯೆ ಮೊಳೆಯಿತು. ಕಾರಣ
ರಾಮನಿಗೆ 14 ವರ್ಷ ವನವಾಸಕ್ಕೆ ಹೊರಟನು, ಜೊತೆಯಲ್ಲಿ ಸೀತೆ ಲಕ್ಷ್ಮಣರು ಹೊರಟರು. ಹೊರಡುವ ಮುನ್ನ ಲಕ್ಷ್ಮಣ ಊರ್ಮಿಳೆಗೆ ಹೇಳಲು ಬಂದನು. ನಾನೂ ಬರುತ್ತೇನೆ ಎಂದಳು ತಡೆದ ಲಕ್ಷಣ ನೀನು ಇಲ್ಲಿಯೇ ಇದ್ದು ನಮ್ಮ ತಾಯಂದಿರನ್ನು ನೋಡಿಕೋ, ನಾನು ಕಾಡಿಗೆ ಹೋಗಿ ಅಣ್ಣ- ಅತ್ತಿಗೆಯನ್ನು ನೋಡಿಕೊಳ್ಳುತ್ತೇನೆ ಎಂದನು. ನೋವು ಹತಾಶೆಯಿಂದ ಕುಸಿದರೂ ಪತಿಯ ಮಾತನ್ನು ಒಪ್ಪಿದಳು. ಅದರಂತೆ ದಿನದ ಬಹು ಭಾಗ ಅತ್ತೆಯರ ಸೇವೆಯಲ್ಲೆ ಕಳೆಯುತ್ತಿದ್ದಳು.
ಒಂದು ದಿನ ಊರ್ಮಿಳೆ ಮಲಗಿದಾಗ, ನಿದ್ರಾ ದೇವಿ ಬಂದು ಲಕ್ಷ್ಮಣನ ನಿದ್ರೆಯನ್ನು ತೆಗೆದುಕೊಳ್ಳಲು ಹೇಳಿದಳು. ಸಂತೋಷದಿಂದ ಸ್ವೀಕರಿಸಿದಳು.
ಮುಂದೆ 14 ವರ್ಷಗಳ ಕಾಲ 16 ಘಂಟೆ ಮಲಗುತ್ತಿದ್ದಳು. ಉಳಿದ ಎಂಟು ಗಂಟೆಗಳ ಕಾಲ ಕೆಲಸ ಮತ್ತು ಅತ್ತೆಯರ ಸೇವೆ ಮಾಡುತ್ತಿದ್ದಳು. ರಾಮ ಲಕ್ಷ್ಮಣ ಸೀತೆಯರ ವನವಾಸ 13 ವರ್ಷ ಕಳೆಯಿತು. ಕೊನೆಯ ವರ್ಷದಲ್ಲಿ ರಾವಣ ಸೀತೆಯನ್ನು ಅಪಹರಿಸಿದನು. ರಾಮ ರಾವಣರಿಗೆ ಯುದ್ಧವಾಯಿತು. ರಾವಣನ ಮಗ ಮೇಘನಾಧನನ್ನು ಕೊಲ್ಲುವುದು ಅಷ್ಟು ಸುಲಭವಲ್ಲ. ಮೇಘ ನಾಥ ಶಿವನ ತಪಸ್ಸನ್ನು ಮಾಡಿ, ಯಾರು 12 ವರ್ಷ ನಿದ್ರಾ ಆಹಾರಗಳನ್ನು ಬಿಟ್ಟಿರುತ್ತಾ ನೋ ಅವನಿಂದ ಮಾತ್ರ ತನಗೆ ಸಾವು ಬರಬೇಕು ಎಂದು ವರ ಪಡೆದಿದ್ದನು. ಅವನ ಸಾವು ಲಕ್ಷ್ಮಣನ ಕೈಯಲ್ಲಿ ಇತ್ತು. ಲಕ್ಷ್ಮಣನಿಂದ ಮೇಘನಾಥ ಹತನಾದನು. ಹನುಮಂತ ಮತ್ತು ವಾನರ ಸೈನ್ಯದಿಂದ ಅನೇಕರು ಹತರಾದರು. ರಾಮ-ರಾವಣರ ಯುದ್ಧದಲ್ಲಿ ರಾಮನಿಂದ ರಾವಣನ ಸಂಹಾರವಾಯಿತು. ಯುದ್ದ ಮುಗಿದು ಸೀತೆಯನ್ನು ಬಂಧನದಿಂದ ಬಿಡಿಸಿಕೊಂಡು, ಎಲ್ಲರೂ ಸಂತೋಷ ದಿಂದ ಅಯೋಧ್ಯೆಗೆ ಬಂದರು.
ಅಯೋಧ್ಯೆಯಲ್ಲಿ ರಾಮ- ಸೀತೆ -ಲಕ್ಷ್ಮಣರಿಗೆ ಮೂರು ಸಿಂಹಾಸನ ಜೋಡಿ ಸಿದ್ದರು. ರಾಮ ಹೇಳಿದ ಇನ್ನೊಂದು ಸಿಂಹಾಸನ ಊರ್ಮಿಳೆಗೆ ಬೇಕು ಎಂದನು. ಏಕೆಂದು ಕೇಳಿದಾಗ, ಹದಿನಾಲ್ಕು ವರ್ಷ ವನವಾಸ ಮುಗಿಸಿ ಸುಖ ವಾಗಿ ಬಂದು ಒಂದಾಗಿ ಸೇರಲು ಊರ್ಮಿಳೆಯ ತ್ಯಾಗದಿಂದ ಸಾಧ್ಯ ವಾಯಿತು. ಎಲ್ಲರ ಸ್ತುತಿಗಳು ಅವಳಿಗೆ ಸಲ್ಲಬೇಕು. ಇಂದಿನ ಈ ಸಂತೋಷಕ್ಕೆ ಕಾರಣ ಅವಳು. 14 ವರ್ಷ ಪತಿಯಿಂದ ದೂರವಾಗಿ ಒಂಟಿಯಾಗಿ, ಲಕ್ಷ್ಮಣನ ನಿದ್ರೆಯನ್ನು ಸ್ವೀಕರಿಸಿ, ಬಹಳ ದೊಡ್ಡ ತ್ಯಾಗ ಮಾಡಿದ್ದಾಳೆ. ವನವಾಸದಲ್ಲಿ ನಾನು ಸೀತೆ ಲಕ್ಷ್ಮಣ ಜೊತೆಯಾಗಿದ್ದೆವು. ಲಕ್ಷ್ಮಣ ನಮ್ಮನ್ನು ಕಣ್ರೆಪ್ಪೆ ಯಂತೆ ನೋಡಿ ಕೊಂಡನು. ಊರ್ಮಿಳೆ ಒಂಟಿಯಾಗಿ ನಮ್ಮ ವನವಾಸಕ್ಕಿಂತ ಹೆಚ್ಚು ಸಂಕಟ ಅನುಭವಿಸಿದಳು. ನಮಗಾಗಿ ಕಾಯ್ದಿರಿಸಿದ (ರಾಮ ಸೀತೆ ಲಕ್ಷ್ಮಣ ) ಮೂರು ಸಿಂಹಾಸನದ ಜೊತೆ, ಊರ್ಮಿಳೆಗಾಗಿ ಇನ್ನೊಂದು ಸಿಂಹಾಸನ ಸಿದ್ಧವಾಗಲಿ ಎಂದು ಆದೇಶ ನೀಡಿದನು.
ಇದನ್ನು ಕೇಳಿದ ಊರ್ಮಿಳೆ ರಾಮನ ಮುಂದೆ ಬಂದು ಪಾದ ಚರಣಗಳಿಗೆರಗಿ
ಪ್ರಭು ನನಗೆ ಸಿಂಹಾಸನದ ಅವಶ್ಯಕತೆ ಇಲ್ಲ, ನಾನು ಎಂದೆಂದಿಗೂ ನಿಮ್ಮ ಸೇವೆ ಮಾಡುವ ಭಾಗ್ಯವನ್ನು ಕರುಣಿಸಿ. ಪ್ರಭು ನನ್ನ ಮುಂದಿನ ಜನ್ಮದಲ್ಲೂ
ಕೂಡ ನನಗೆ ಗುಡಿ ಗೋಪುರಗಳ ಅಗತ್ಯವಿಲ್ಲ. ಪೂಜೆ ಮಂಗಳಾರತಿ ನೈವೇದ್ಯ ಅರ್ಪಿಸಬೇಕಿಲ್ಲ ಅಂಥ ಆಕಾಂಕ್ಷೆ ನನಗಿಲ್ಲ. ನನಗಿರುವ ಆಸೆ ಎಂದರೆ ಎಲ್ಲಾ ಯುಗ ಯುಗಗಳಲ್ಲಿಯೂ ನೀವು ನೆಲೆಸಿರುವ ಗುಡಿಯಲ್ಲಿ ನಿಮ್ಮ ಪಾದದಡಿಯ ಧೂಪವಾಗಿ ಇರಲು ಬಯಸುತ್ತೇನೆ. ಇದರಿಂದ ನಾನು ಧೂಪದ ಸುಗಂಧ ವಾಗಿ ಎಲ್ಲರನ್ನು ತಲುಪುತ್ತೇನೆ ಎಂದಳು.
ಊರ್ಮಿಳೆಯ ನಿಷ್ಕಾಮ ಭಕ್ತಿ ಭಾವದ ಮಾತು ಕೇಳಿ, ಶ್ರೀರಾಮನ ಹೃದಯ ತುಂಬಿ ಬಂದಿತು. ಕರುಣಾಪೂರಿತನಾದ ರಾಮನು ಊರ್ಮಿಳೆಗೆ ಒಂದು ವರ ಕೊಟ್ಟನು. ಮುಂದೆ ಬರುವ ‘ಕಬ್ಬಿಣದ ಯುಗದಲ್ಲಿ’ ಅಂದರೆ ಕಲಿಯುಗದಲ್ಲಿ, ಅಣ್ಣ ಬಲರಾಮ, ಸಹೋದರಿ ಸುಭದ್ರೆಯೊಂದಿಗೆ ಜಗನ್ನಾಥನಾಗಿ ಪುರಿಯಲ್ಲಿ ನೆಲೆಸುತ್ತೇನೆ. ಪುರಿ ಜಗನ್ನಾಥನ ದೇವಾಲಯ ಜಗತ್ತ್ರಸಿದ್ಧವಾಗಿ ನೀನು ಅಲ್ಲಿ. ‘ವಿಮಲಾದೇವಿ’ಯಾಗಿ ನೆಲೆಸುವೆ. ದೇವರ ಪ್ರತಿರೂಪಕ್ಕೆ ಅಲಂಕರಿಸಿ, ಪಠಿಸಿ ಪೂಜಿಸಿ ಬಗೆ ಬಗೆಯ ನೈವೇದ್ಯ ಅರ್ಪಿಸು ತ್ತಾರೆ. ಆ ಪ್ರಸಾದದಲ್ಲಿ ನೀನು ‘ಮಹಾಪ್ರಸಾದ’ ಆಗುವೆ. ನಿನ್ನ ದೈವೀಶಕ್ತಿಯ ಧೂಪದ ಸುಗಂಧ ದೇವರಿಗೆ ಅರ್ಪಿತವಾಗಿ ಎಲ್ಲರಿಗೂ ಸುಗಂಧ ಬೀರುವೆ, ಹಾಗೆ ಜಗನ್ನಾಥನಿಗೆ ಅರ್ಪಿಸಿದ ಎಲ್ಲಾ ನೈವೇದ್ಯಗಳು, ‘ವಿಮಲಾದೇವಿ ಗೆ’ ಅರ್ಪಿತವಾದ ನಂತರವೇ ಅದು ‘ಮಹಾಪ್ರಸಾದ’ ವಾಗುತ್ತದೆ. ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ. ನೀನು ನೈವೇದ್ಯದಲ್ಲಿ ಮಹಾಪ್ರಸಾದವಾಗಿ ಮತ್ತು ನಿರ್ಮಾಲ್ಯದ ಹೂವಿನಲ್ಲಿಯೂ
ನೀನು ಪ್ರಸಾದವಾಗಿ ನೆಲೆಸಿರುವೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಜಗನ್ನಾಥನ ಮಂದಿರದಲ್ಲಿ ಧೂಪದ ಸುಗಂಧ ಬೀರುವೆ, ಪಕ್ವಾನ್ನಗಳಲ್ಲಿ ಸ್ವಾದಿಷ್ಟವಾದ ಮಹಾಪ್ರಸಾದವಾಗುವೆ, ನಿರ್ಮಾಲ್ಯದ ಹೂವಿನಲ್ಲಿ ಮುಡಿಗೆ ಪ್ರಸಾದವಾಗಿರುವೆ. ಜಗನ್ನಾಥನ ಪ್ರಸಾದ ದೊಂದಿಗೆ ಬೆರೆತು ಭಕ್ತರಿಗೆ ಭಕ್ತಿಯ ಪ್ರಸಾದವಾಗಿ ಸಲ್ಲುವೆ. ಭಕ್ತರು ತಮಗೆ ಸಿಗುವ ಮಹಾಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದಾಗ ಅವರ ಪಾಪಗಳೆಲ್ಲ ಕ್ಷೀಣಿಸಿ ಹೇರಳವಾದ ಪುಣ್ಯ ಪಡೆಯುತ್ತಾರೆ.
ಈ ರೀತಿ ಲಕ್ಷ್ಮಣನ ಮಡದಿ ‘ಊರ್ಮಿಳೆ’ ತನ್ನ ತ್ಯಾಗ- ಮತ್ತು ಶಾಂತ ಚಿತ್ತ
ಸ್ವಭಾವದಿಂದ ರಾಮನ ಕೃಪೆಗೆ ಪಾತ್ರಳಾಗಿ ಕಲಿಯುಗದಲ್ಲಿ ಜಗನ್ನಾಥನ ಪಾದದಲ್ಲಿ ಧೂಪವಾಗಿ, ಹೂವಿನ ಪ್ರಸಾದವಾಗಿ, ಮಂದಿರದಲ್ಲಿ ‘ವಿಮಲಾ ದೇವಿಯಾಗಿ’ ನೆಲೆಸಿ ಜಗನ್ನಾಥನ ಭೋಜನದ ನೈವೇದ್ಯದಲ್ಲಿ ‘ಮಹಾಪ್ರಸಾದ’ ವಾಗಿ ದೇವಾಲಯಕ್ಕೆ ಹೋದವರೆಲ್ಲ ಪ್ರಸಾದವನ್ನು ಸ್ವೀಕರಿಸಿದಾಗ ಅವರ ಮನೋಭಿಲಾಷೆಗಳೆಲ್ಲ ನೆರವೇರುತ್ತದೆ. ಆದ್ದರಿಂದ ಪ್ರಸಾದ ಸ್ವೀಕರಿಸದೆ ಯಾವುದೇ ಒಬ್ಬ ಭಕ್ತನು ಹಾಗೆ ಹೋಗ ಬಾರದು ಎಂಬಂಥ ಭಕ್ತಿ ಭಾವ ಜನಮನದಲ್ಲಿ ಬೆರೆತಿದೆ.
ಮನ್ನಾಥ: ಶ್ರೀ ಜಗನ್ನಾಥೋ ಮದ್ಗುರು ಶ್ರೀ ಜಗದ್ಗುರು:
ಮದಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀ ಗುರವೇ ನಮಃ !!








