ವೈಕುಂಠ ಏಕಾದಶಿ ಶುಭವಾಗಲಿ..
ಶ್ರೀ ಮಹಾವಿಷ್ಣು ಸ್ತೋತ್ರಗಳು
-೧-
|| ಶ್ರೀ ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್ ||
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅರ್ಜುನ ಉವಾಚ:-
ಕಿಂ ನು ನಾಮ ಸಹಸ್ರಾಣಿ ಜಪಂತೆ ಚ ಪುನ: ಪುನ: |
ಯಾನಿ ನಾಮಾನಿ ದಿವ್ಯಾನಿ ತಾನಿ ಚಾಸ್ಸ್ಚಕ್ಷ್ವ ಕೇಶವ ||೧||
ಭಾವಾರ್ಥ:-ಅರ್ಜುನನು ಕೇಳುವನು: ಕೇಶವಾ! ಮನುಜರು ಒಂದೇ ತೆರನಾಗಿ ನಿನ್ನ ಒಂದು ಸಾವಿರ ನಾಮಗಳನ್ನು ಯಾಕಾಗಿ ಪುನ: ಪುನ: ಜಪಿಸುತ್ತಾರೆ? ನಿನ್ನ ಆ ದಿವ್ಯ ನಾಮಗಳ ಬಗ್ಗೆ ವಿವರಿಸಿ ಹೇಳುವಂತವನಾಗು.
ಭಗವಾನುವಾಚ:-
ಮತ್ಸ್ಯಂ ಕೂರ್ಮಂ ವರಾಹಂ ಚ ವಾಮನಂ ಚ ಜನಾರ್ದನಮ್ |
ಗೋವಿಂದಂ ಪುಂಡರೀಕಾಕ್ಷಂ ಮಾಧವಂ ಮಧುಸೂದನಮ್ ||೨||
ಭಾವಾರ್ಥ:-ಭಗವಂತನು ಹೇಳುತ್ತಾನೆ: ಅರ್ಜುನಾ; ಮತ್ಸ್ಯ,ಕೂರ್ಮ; ವರಾಹ,ವಾಮನ, ಜನಾರ್ದನ,ಗೋವಿಂದ,ಪುಂಡರೀಕಾಕ್ಷ,ಮಾಧವ,ಮಧುಸೂದನ—–
ಪದ್ಮನಾಭಂ ಸಹಸ್ರಾಕ್ಷಂ ವನಮಾಲಿಂ ಹಲಾಯುಧಮ್ |
ಗೋವರ್ಧನಂ ಹೃಷೀಕೇಶಂ ವೈಕುಂಠಂ ಪುರುಷೋತ್ತಮ್ ||೩||
ಭಾವಾರ್ಥ:-ಪದ್ಮನಾಭ, ಸಹಸ್ರಾಕ್ಷ, ವನಮಾಲಿ, ಹಲಾಯುಧ, ಗೋವರ್ಧನ, ಹೃಷೀಕೇಶ, ವೈಕುಂಠ, ಪುರುಷೋತ್ತಮ———–
ವಿಶ್ವರೂಪಂ ವಾಸುದೇವಂ ರಾಮಂ ನಾರಾಯಣಂ ಹರಿಮ್ |
ದಾಮೋದರಂ ಶ್ರೀಧರಂ ಚ ವೇದಾಂಗಂ ಗರುಢಧ್ವಜಮ್ ||೪||
ಭಾವಾರ್ಥ:-ವಿಶ್ವರೂಪ, ವಾಸುದೇವ, ರಾಮ, ನಾರಾಯಣ, ಹರಿ, ದಾಮೋದರ, ಶ್ರೀಧರ, ವೇದಾಂಗ, ಗರುಢಧ್ವಜ———-
ಅನಂತಂ ಕೃಷ್ಣಗೋಪಾಲಂ ಜಪತೋ ನಾಸ್ತಿ ಪಾತಕಮ್ |
ಗವಾಂ ಕೋಟಿಪ್ರದಾನಸ್ಯ ಅಶ್ವಮೇಧಶತಸ್ಯ ಚ ||೫||
ಭಾವಾರ್ಥ:-ಅನಂತ, ಕೃಷ್ಣಗೋಪಾಲ ಎಂಬೀ ಇಪ್ಪತ್ತೆಂಟು ನಾಮಗಳನ್ನು ಜಪಿಸುವಂತಹವನ ಪಾಪಗಳೆಲ್ಲಾ ನಶಿಸಿ ಹೋಗುತ್ತವೆ. ಆತನಿಗೆ ಒಂದು ಕೋಟಿ ಗೋದಾನ, ಒಂದು ನೂರು ಅಶ್ವಮೇಧ ಯಾಗ ಮಾಡಿದರೆ ದೊರಕುವ ಫಲವು ಲಭಿಸುತ್ತದೆ.
ಕನ್ಯಾದಾನ ಸಹಸ್ರಾಣಾಂ ಫಲ ಪ್ರಾಪ್ನೋತಿ ಮಾನವಾ: |
ಅಮಾಯಾಂ ವಾ ಪೌರ್ಣಿಮಾಸ್ಯಾಮೇಕಾದಶ್ಯಾಂ ತಥೈವ ಚ ||೬||
ಭಾವಾರ್ಥ:-ಮತ್ತು ಒಂದು ಸಾವಿರ ಕನ್ಯಾದಾನ ಮಾಡಿದ ಫಲವು ಮಾನುಜರಿಗೆ ದೊರಕುವುದು.ಅಮವಾಸ್ಯೆ,ಹುಣ್ಣಿಮೆ,ಮತ್ತು ಏಕಾದಶಿಗಳಂದು ಮತ್ತು ಅದೇರೀತಿ———
ಸಂಧ್ಯಾಕಾಲೇ ಸ್ಮರೇನ್ನಿತ್ಯಂ ಪ್ರಾತ:ಕಾಲೇ ತಥೈವ ಚ |
ಮಧ್ಯಾಹ್ನೇ ಚ ಜಪೇನ್ನಿತ್ಯಂ ಸರ್ಪಪಾಪೈ: ಪ್ರಮುಚ್ಯತೇ ||೭||
ಭಾವಾರ್ಥ:-ಪ್ರತಿದಿನ ಸಾಯಂಕಾಲ,ಮುಂಜಾನೆ,ಮತ್ತು ಮದ್ಯಾಹ್ನದ ಸಮಯಗಳಲ್ಲಿ ಈ ನಾಮಗಳನ್ನು ಜಪಿಸುವ ಮಾನವರು ಸಮಸ್ತ ಪಾಪಗಳಿಂದ ವಿಮುಕ್ತರಾಗುತ್ತಾರೆ.
||ಇತಿ ಶ್ರೀ ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್ ||
||ಈ ರೀತಿಯಾಗಿ ಶ್ರೀ ವಿಷ್ಣುವಿನ ಇಪ್ಪತ್ತೆಂಟು ನಾಮಗಳು ||
+ ಪ್ರಜಾಪತಿಯನ್ನು ಸ್ಮರಿಸಬೇಕು.
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








