ADVERTISEMENT
Tuesday, September 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕರ್ನಾಟಕದ ಶಾಲೆಗಳಿಗೆ ರಿಲಯನ್ಸ್ ಜಿಯೋದಿಂದ ಭವಿಷ್ಯದ ಎಐ ತರಬೇತಿ ಸಬಲೀಕರಣ

admin by admin
January 30, 2026
in Newsbeat, State, ರಾಜ್ಯ
Reliance Jio empowers schools in Karnataka with future AI training

Reliance Jio empowers schools in Karnataka with future AI training

Share on FacebookShare on TwitterShare on WhatsappShare on Telegram

Related posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

September 29, 2026
ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

September 29, 2026

 ಸುಧಾರಿತ ಕೃತಕ ಬುದ್ಧಿಮತ್ತೆಯನ್ನು (ಎಐ– ಆರ್ಟಿಫಿಷಿಯಲ್ ಇಂಟೆಲೆಜೆನ್ಸ್) ಎಲ್ಲರಿಗೂ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ರಿಲಯನ್ಸ್ ಜಿಯೋ ಮತ್ತಷ್ಟು ಬಲಪಡಿಸುತ್ತಿದೆ. ಈ ಉದ್ದೇಶದ್ದೇ ಭಾಗವಾಗಿ, ಜಿಯೋ ಕರ್ನಾಟಕದಾದ್ಯಂತ ಸಮಗ್ರ ಎಐ ಶಿಕ್ಷಣ ಅಭಿಯಾನ ಪ್ರಾರಂಭಿಸಿದೆ. ಡಿಜಿಟಲ್ ಒಳಗೊಳ್ಳುವಿಕೆ ಬಲಪಡಿಸುವ ಹಾಗೂ ರಾಜ್ಯದ ಶಾಲೆ ಮತ್ತು ಕಾಲೇಜುಗಳ ಜೊತೆಗೆ ಸಂಪರ್ಕವನ್ನು ಸಾಧಿಸಿ, ‘ಜಿಯೋ ಎಐ ಕ್ಲಾಸ್‌ರೂಮ್‘ (Jio AI Classroom) ಉಪಕ್ರಮದ ಮೂಲಕ ಪ್ರಾಯೋಗಿಕ ಎಐ ತರಬೇತಿಯನ್ನು ನೀಡುವ ಗುರಿಯನ್ನು ಈ ಅಭಿಯಾನ ಹೊಂದಿದೆ.

 ಭಾರತದಾದ್ಯಂತ ಇರುವ ಶಾಲೆಗಳು ಎಐ ತಂತ್ರಜ್ಞಾನವನ್ನು ತರಗತಿಯ ಕಲಿಕೆಯಲ್ಲಿ ವೇಗವಾಗಿ ಅಳವಡಿಸಿಕೊಳ್ಳುತ್ತಾ ಇವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭವಿಷ್ಯಕ್ಕಾಗಿ ಸಿದ್ಧರಾಗುವ ರೀತಿಯಲ್ಲಿ ಶಿಕ್ಷಣದ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗೆ ಸಾಕ್ಷಿ ಆಗುತ್ತಿದೆ. ಜಿಯೋ ಎಐ ಕ್ಲಾಸ್‌ರೂಮ್ ಮೂಲಕ ಶಿಕ್ಷಣ ಸಂಸ್ಥೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಎಐ ಕೌಶಲಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳಿಗಾಗಿ ನಿಜವಾದ ‘ಎಐ–ರೆಡಿ‘ (AI-Ready) ಶಾಲೆಗಳನ್ನು ಸಜ್ಜುಗೊಳಿಸುತ್ತಿದೆ.

 ಈ ಅಭಿಯಾನವು ಆರಂಭಿಕ ಹಂತದಲ್ಲೇ ಭರ್ಜರಿ ಯಶಸ್ಸನ್ನು ಕಂಡಿದ್ದು, ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಶಾಲೆಗಳನ್ನು ತಲುಪಿದೆ. ಜಿಯೋದ ಹಿರಿಯ ಕಾರ್ಯನಿರ್ವಾಹಕರು ನಡೆಸಿಕೊಡುತ್ತಿರುವ ಈ ವಿಶೇಷ ತರಬೇತಿ ಅವಧಿಗಳಿಗಾಗಿ 10,000ಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

 ಯುವಜನತೆಯ ಕೌಶಲ ಅಭಿವೃದ್ಧಿಗೆ ಪೂರಕವಾಗಿ, ಕಂಪನಿಯು ನಾಲ್ಕು ವಾರಗಳ ಉಚಿತ ಆನ್‌ಲೈನ್ ಸರ್ಟಿಫಿಕೇಷನ್ ಕಾರ್ಯಕ್ರಮವಾದ ‘ಜಿಯೋ ಎಐ ಕ್ಲಾಸ್‌ರೂಮ್‘ ಅನ್ನು ಪರಿಚಯಿಸಿದೆ. ಈ ಕಾರ್ಯಕ್ರಮವು ವಿಡಿಯೋ ಉಪನ್ಯಾಸಗಳು, ಪಿಡಿಎಫ್ ಅಧ್ಯಯನ ಸಾಮಗ್ರಿಗಳು, ರೆಫರೆನ್ಸ್ ವಿಡಿಯೊಗಳು ಮತ್ತು ಪ್ರತಿ ಮಾಡ್ಯೂಲ್‌ನ ನಂತರ ಸಂವಾದಾತ್ಮಕ ರಸಪ್ರಶ್ನೆಗಳು ಹಾಗೂ ಅಸೈನ್‌ಮೆಂಟ್‌ಗಳನ್ನು ಒಳಗೊಂಡಿರುವ ನಾಲ್ಕು ಹಂತದ ಸಮಗ್ರ ಪಠ್ಯಕ್ರಮವನ್ನು ನೀಡುತ್ತದೆ.

 ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಭಾಗವಹಿಸುವವರಿಗೆ ‘ಕಂಪ್ಲೀಷನ್ ಬ್ಯಾಡ್ಜ್‘ ನೀಡಲಾಗುತ್ತದೆ. ಜಿಯೋ ಪಿಸಿ (JioPC) ಮೂಲಕ ಈ ಕಾರ್ಯಕ್ರಮವನ್ನು ಪಡೆಯುವ ಕಲಿಯುವವರು ಜಿಯೋ ಇನ್‌ಸ್ಟಿಟ್ಯೂಟ್ ಪ್ರಮಾಣಪತ್ರವನ್ನು ಸಹ ಪಡೆಯಲಿದ್ದಾರೆ. ಇದು ಅವರ ಎಐ ಪರಿಕಲ್ಪನೆಯ ತಿಳಿವಳಿಕೆ ಮತ್ತು ಅಸೈನ್‌ಮೆಂಟ್‌ಗಳ ಮೂಲಕ ಪಡೆದ ಪ್ರಾಯೋಗಿಕ ಜ್ಞಾನವನ್ನು ದೃಢೀಕರಿಸುತ್ತದೆ. ಈ ವ್ಯವಸ್ಥಿತ ಕೋರ್ಸ್ ಅನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಮೂಲಕ ಕಲಿಯುವವರಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಮತ್ತು ಎಐ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವ ಪಡೆಯಲು ವಿನ್ಯಾಸ ಮಾಡಲಾಗಿದೆ.

 

ಈ ಡಿಜಿಟಲ್ ಸಬಲೀಕರಣ ಅಭಿವೃದ್ಧಿಯ ಮುಖ್ಯವಾದ ಅಂಶ ಏನೆಂದರೆ, ಯಾವುದೇ ವೆಚ್ಚವಿಲ್ಲದೆ ಬಳಕೆದಾರರಿಗೆ ಪ್ರೀಮಿಯಂ ತಂತ್ರಜ್ಞಾನವನ್ನು ಒದಗಿಸುವುದು. ಜಿಯೋ ತನ್ನ ಅನ್‌ಲಿಮಿಟೆಡ್ 5ಜಿ ಚಂದಾದಾರರಿಗೆ ₹35,100 ಮೌಲ್ಯದ 18 ತಿಂಗಳ ‘ಗೂಗಲ್ ಜೆಮಿನಿ ಪ್ರೊ‘ (Google Gemini Pro) ಪ್ಲಾನ್ ಅನ್ನು ಉಚಿತವಾಗಿ ನೀಡುತ್ತಿದೆ. ಬಳಕೆದಾರರು ಇದನ್ನು ನೇರವಾಗಿ ಮೈಜಿಯೋ (MyJio) ಆಪ್ ಮೂಲಕ ಸಕ್ರಿಯಗೊಳಿಸಬಹುದು. ಇದು ಅತ್ಯಾಧುನಿಕ ಜೆಮಿನಿ 3 ಪ್ರೊ ಮಾಡೆಲ್ ಮತ್ತು ಉನ್ನತ ಮಟ್ಟದ ಸೃಜನಶೀಲ ಸಾಧನಗಳಿಗೆ ಸಂಪರ್ಕವನ್ನು ನೀಡುತ್ತದೆ. ಇದರಲ್ಲಿ ಎಐ–ಚಾಲಿತ ಚಿತ್ರ ರಚನೆಗಾಗಿ ‘ನ್ಯಾನೋ ಬನಾನಾ ಪ್ರೊ‘ (Nano Banana Pro) ಮತ್ತು ಸುಧಾರಿತ ವಿಡಿಯೋ ನಿರ್ಮಾಣಕ್ಕಾಗಿ ‘ವಿಯೋ 3.1′ (Veo 3.1) ಸೇರಿವೆ. ಈ ಪ್ಲಾನ್ ಶೈಕ್ಷಣಿಕ ಸಂಶೋಧನಾ ಸಾಧನವಾದ ‘ನೋಟ್‌ಬುಕ್ ಎಲ್‌ಎಂ‘ (NotebookLM) ಅನ್ನು ಸಹ ಒಳಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅವರ ಡಿಜಿಟಲ್ ಪೋರ್ಟ್‌ಫೋಲಿಯೊಗಳು ಮತ್ತು ಸಂಶೋಧನಾ ಡೇಟಾಗಳನ್ನು ಸಂಗ್ರಹಿಸಲು 2 ಟಿಬಿ ಕ್ಲೌಡ್ ಸ್ಟೋರೇಜ್ ಅನ್ನು ಸಹ ಒದಗಿಸುತ್ತದೆ.

 ತನ್ನ ಎಐ ಕ್ಲಾಸ್‌ರೂಮ್ ಉಪಕ್ರಮದ ಭಾಗವಾಗಿ, ಜಿಯೋ ಪಿಸಿಯು ‘ಜಿಯೋ ಪಿಸಿ ಎಐ ಕ್ಲಾಸ್‌ರೂಮ್ ಸ್ಕಾಲರ್‌ಶಿಪ್‘ ಅನ್ನು ಸಹ ಘೋಷಿಸಿದೆ. ಎಐ ಫೌಂಡೇಷನ್ ಕೋರ್ಸ್ ಪೂರ್ಣಗೊಳಿಸಿದ ಕಲಿಕಾರ್ಥಿಗಳಿಗೆ ಜಿಯೋ ಪಿಸಿ ಖರೀದಿಸಲು ಈ ವಿದ್ಯಾರ್ಥಿವೇತನವು ಸಹಾಯ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳು ದುಬಾರಿ ಕಂಪ್ಯೂಟರ್‌ಗಳನ್ನು ಖರೀದಿಸುವ ಅನಿವಾರ್ಯ ಇಲ್ಲದೆ ಎಐ ಪ್ರಾಜೆಕ್ಟ್‌ಗಳು ಮತ್ತು ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗುತ್ತದೆ.

 ಕರ್ನಾಟಕದ ವಿದ್ಯಾರ್ಥಿಗಳು http://www.jio.com/ai-classroom ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಅಗತ್ಯವಾದ ಮೂಲಭೂತ ಜ್ಞಾನವನ್ನು ಪಡೆಯಬಹುದು. ಇದು ಪ್ರಾದೇಶಿಕ ಉದ್ಯೋಗಿಗಳು ತಾಂತ್ರಿಕ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ.

Source: Reliance Jio empowers schools in Karnataka with future AI training
Via: Reliance Jio empowers schools in Karnataka with future AI training
Tags: # AI training#kannaanews#saakshatvbengalurukarnatakaReliance Jio
ShareTweetSendShare
Join us on:

Related Posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

by Shwetha
September 29, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

by Shwetha
September 29, 2026
0

ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

by Shwetha
September 29, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ...

ಬಿಜೆಪಿ ಜತೆ ರಾಜಿಯಾಗಿದ್ದರೆ ಡಿಕೆಶಿ ಇವತ್ತು ಬೇರೆ ಲೆವೆಲ್ ನಲ್ಲೇ ಇರುತ್ತಿದ್ದರು: ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ ಬಾಲಕೃಷ್ಣ

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಬಗ್ಗೆ ಸಚಿವರ ಹೇಳಿಕೆ: ಸರ್ಕಾರದೊಳಗೂ ಚರ್ಚೆ

by Shwetha
September 29, 2026
0

ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮದ ಕುರಿತು ರಾಜ್ಯ ಸರ್ಕಾರದೊಳಗೇ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಸರ್ಕಾರದ...

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

by Shwetha
September 29, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಕುರಿತು ಕೊನೆಗೂ ಸರ್ಕಾರ ಮೌನ ಮುರಿದಿದೆ. ಇದುವರೆಗೂ ವಿರೋಧ ಪಕ್ಷಗಳು ಮಾಡುತ್ತಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram