ಗುರುಮುಖೇನ ಕಲಿತ ವಿದ್ಯೆಯಿಂದ ಜ್ಞಾನ ಲಭ್ಯವಾಗುತ್ತದೆ. ಶ್ರಮ ಪಡದೆ ಪಡೆಯುವ ವಿದ್ಯೆ ಅನರ್ಥಕ್ಕೆ ಕಾರಣ ವಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಕಥೆ.
ಭಾರದ್ವಾಜ ಮಹರ್ಷಿಗಳಿಗೆ ಒಬ್ಬ ಮಗನಿದ್ದ. ಅವನ ಹೆಸರು.’ಯವಕ್ರೀತ’.ಆತ ಮೇಧಾವಿ ಧರ್ಮಿಷ್ಟನು ಆಗಿದ್ದನು. ಆದರೆ ಅವನು ಅತಿ ವಿಶ್ವಾಸವಿರುವ ವ್ಯಕ್ತಿ. ಗುರುಗಳಿಂದಲೇ ಏಕೆ ವಿದ್ಯೆ ಕಲಿಯಬೇಕು. ಗುರುವಿಲ್ಲದೆ ವೇದವನ್ನು ಕಲಿಯ ಬೇಕೆಂಬ ಹಂಬಲ.ಆ ಕಾರಣಕ್ಕಾಗಿ, ಗಂಗಾ ನದಿ ತಟಕ್ಕೆ ಹೋಗಿ ಇಂದ್ರನನ್ನು ಕುರಿತು ತಪಸ್ಸು ಮಾಡಿ ತೊಡಗಿದ. ತಂದೆ ತಾಯಿ, ಋಷಿಮುನಿಗಳು, ಹಿರಿಯರು ಉಪ ದೇಶ ಮಾಡಿದರೂ ಯಾರ ಬುದ್ದಿವಾದವು ಅವನಿಗೆ ರುಚಿಸಲಿಲ್ಲ. ಅವನ ಕಠಿಣ ತಪಸ್ಸಿ ನಿಂದ ಭೂಮಿಯ ತಾಪಮಾನ ಏರುಪೇರಾ ಯಿತು ದೇವತೆಗಳು ಹೆದರಿದರು.
ಸ್ವರ್ಗಾಧಿಪತಿಯಾದ ಇಂದ್ರನೂ ಬಂದು ಹೇಳಿದರೂ, ಇವನು ತನ್ನ ತಪಸ್ಸನ್ನು ನಿಲ್ಲಿಸ ಲಿಲ್ಲ. ಹೇಗಾದರೂ ಮಾಡಿ ಇವನಿಗೆ ಬುದ್ಧಿ ಕಲಿಸ ಬೇಕೆಂದು ತೀರ್ಮಾನಿಸಿದ ಇಂದ್ರ ದೇವ ಒಬ್ಬ ವೃದ್ಧ ಬ್ರಾಹ್ಮಣನ ವೇಷದಿಂದ ಗಂಗಾ ನದಿ ತಟಕ್ಕೆ ಬಂದನು.
ಒಂದು ದಿನ ಯವಕ್ರಿತ ಸಂಧ್ಯಾವಂದನೆಗಾಗಿ ನದಿಯಲ್ಲಿ ಸ್ನಾನ ಮಾಡಿ ಬರುವಾಗ, ಬೊಗಸೆಯಿಂದ ಮರಳನ್ನು ತೆಗೆದು ಇಂದ್ರದೇವ ನದಿಯಲ್ಲಿ ಹಾಕುತ್ತಿದ್ದ. ಇದನ್ನು ನೋಡಿದ ಯವಕ್ರೀತನಿಗೆ ಕುತೂಹಲವಾಯಿತು. ಇಂದ್ರನ ಬಳಿ ಬಂದು ಕೇಳಿದ, ವೃದ್ಧರೇ ಈ ಇಳಿ ವಯಸ್ಸಿನಲ್ಲಿ ನೀವು ಮಾಡುತ್ತಿರುವ ಕೆಲಸವೇನು? ವೃದ್ಧ ಹೇಳಿದ ಸಾಯುವುದ ರೊಳಗೆ ನನ್ನ ಕೈಯಿಂದ ಸಮಾಜಕ್ಕೆ ಏನಾ ದರೂ ಉಪಕಾರ ಮಾಡಬೇಕು ಎಂಬ ಹಂಬಲ ದಿಂದ ಈ ದಡದಿಂದ ಆ ದಡಕ್ಕೆ ಸಾಗಲು ನದಿಗೆ ಸೇತುವೆಯನ್ನು ಕಟ್ಟುತ್ತಿದ್ದೇನೆ
ವೃದ್ಧರ ಮಾತನ್ನು ಕೇಳಿ,ಯವಕ್ರೀತ ಪಕ ಪಕ ನಕ್ಕು,ವೃದ್ಧರೆ ಕೇವಲ ಮರಳಿನಿಂದ ಸೇತುವೆ ನಿರ್ಮಾಣ ಮಾಡಲು ಸಾಧ್ಯವೇ? ಅದು ರಭಸದಿಂದ ಹರಿವ ನದಿಗೆ ಬೊಗಸೆ ಯಲ್ಲಿ ಮರಳು ಹಾಕಿದರೆ ಕೊಚ್ಚಿಕೊಂಡು ಹೋಗುವುದಿಲ್ಲವೇ? ಇದೆಂತ ಮೂಢತನ ಎಂದ. ಕೂಡಲೇ ಆ ವೃದ್ಧ ಹೇಳಿದ ಏಕೆ ಕಟ್ಟಬಾರದು? ಗುರುಗಳಿಲ್ಲದೆ ವೇದಾಧ್ಯಯ ನ ನಿನಗೆ ಸಾಧ್ಯವಾಗುವುದಾದರೆ ಕೇವಲ ಮರಳಿನಿಂದ ಸೇತುವೆ ನಿರ್ಮಾಣ ಮಾಡಲು ನನಗೆ ಏಕೆ ಅಸಾಧ್ಯ? ಯವಕ್ರೀತನಿಗೆ ತನ್ನ ತಪ್ಪಿನ ಅರಿವಾಯಿತು ಅಪರಾಧ ಭಾವದಿಂದ ಮುಖ ಕೆಳಗೆ ಹಾಕಿದ
ಗುರುಗಳಿಲ್ಲದೆ ಸ್ವತಃ ಅಧ್ಯಯನದಿಂದ ವಿದ್ಯಾವಂತರಾಗುವ ಪ್ರವೃತ್ತಿ ಒಳ್ಳೆಯದಲ್ಲ ಅದರಿಂದ ಸರಿಯಾದ ದಾರಿ ಸಿಗುವುದಿಲ್ಲ.ಜ್ಞಾನಕ್ಕಿಂತ ಅತಿಯಾದ ಜ್ಞಾನವೇ ಹೆಚ್ಚಾಗು ತ್ತದೆ ಇದರಿಂದ ಸಮಾಜಕ್ಕೆ ಹಾನಿ ಆಗುತ್ತದೆ ಇಂತಹ ಜ್ಞಾನ ಮೋಕ್ಷಕ್ಕೂ,ಪುರುಷಾರ್ಥಕ್ಕೂ ಬರುವುದಿಲ್ಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಜ್ಞಾನ ಪಡೆಯಬೇಕೆಂದರೆ ಗುರು ಕುಲವಾಸ ಮಾಡಿ ಗುರುಗಳ ಸೇವೆ ಮಾಡಿ ಗುರುಗಳ ಮುಖದಿಂದ ಉಪದೇಶ ಪಡೆದು ಸಂಪಾದಿ ಸುವ ವಿದ್ಯೆ ನಿಜವಾದ ವಿದ್ಯೆ. ಕೇವಲ ಮರಳಿ ನಿಂದ ಕಟ್ಟಿದ ಸೇತುವೆ ಹೇಗೆ ನಿಲ್ಲುವುದಿಲ್ಲವೋ ಹಾಗೆ ಗುರುಗಳಿಲ್ಲದೆ ತಾನೇ ಪುಸ್ತಕಗಳ ನ್ನು ಓದಿ ಕಲಿತ-ಕಲಿಯುವ ವಿದ್ಯೆಯಿಂದ ಘನಪಂಡಿತ ನಾಗಲಾರ, ಕಬ್ಬಿಣ ಕಟ್ಟಿಗೆ ಕಲ್ಲು ಮರಳುಗಳಿಂದ ತಯಾರಾದ ಸೇತುವೆ ಹೇಗೆ ಉಪಯೋಗಕ್ಕೆ ಬರುತ್ತದೆಯೋ, ಹಾಗೆ ಗುರುಕುಲವಾಸ, ಗುರು ಸೇವೆ, ಗುರು ಮುಖೇನ ಬರುವ ಉಪದೇಶದ ವೇದ ಜ್ಞಾನ ಬಲಿಷ್ಠ ವಾಗಿರುತ್ತದೆ. ಇದು ಮೋಕ್ಷಕ್ಕೂ ಸಕಲ ಪುರುಷಾರ್ಥಗಳಿಗೆ ಸಾಧನವಾಗಿದೆ.
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ’








