ಹಾಸನ: ಕಾಡಾನೆಗಳ ಹಿಂಡೊಂದು ಗ್ರಾಮದೊಳಗೆ ನುಗ್ಗಿ ದಾಂಧಲೆ ಮಾಡಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಇಂದು ಏಕಾಏಕಿ ಮರಿಯಾನೆಯೊಂದಿಗೆ ಗ್ರಾಮದೊಳಗೆ ನುಗ್ಗಿದ ಕಾಡಾನೆಗಳ ಹಿಂಡು, ರೈತರು ಬೆಳೆದಿದ್ದ ಲಕ್ಷಾಂತರ ರೂ. ಬೆಲೆಬಾಳುವ ಶುಂಠಿ, ಕಾಫಿ ತೋಟ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿವೆ.
ಕಾಡಾನೆ ಹಿಂಡು ಗ್ರಾಮದೊಳಕ್ಕೆ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹೀಗಾಗಿ ಕಾಗನೂರು, ಮಲಗಳಲೆ, ಅನಗಳಲೆ, ಕಟ್ಟೆಹೊಳೆ, ಹೊಂಕರವಳ್ಳಿ ಭಾಗದ ಗ್ರಾಮಸ್ಥರು ಭಯದಲ್ಲೇ ಕಾಲ ಕಳೆಯುವಂತಾಗಿದೆ.
ಜತೆಗೆ ಕಾಡಾನೆಗಳ ಹಿಂಡಿನ ಪ್ರವೇಶದಿಂದಾಗಿ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ತೋಟಗಳಿಗೆ ಹೋಗಲು ಹಿಂದೆ-ಮುಂದೆ ನೋಡುವಂತಾಗಿದೆ.
ಕಾಡಾನೆಗಳ ಹಾವಳಿಯಿಂದ ಯಾವುದೇ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಗುಂಪು ಗುಂಪಾಗಿ ಆನೆಗಳು ದಾಳಿ ಮಾಡುವುದರಿಂದ ಅವುಗಳು ತಿರುಗಾಡುವ ಹಾದಿಯಲ್ಲಿ ಸಿಗುವ ಎಲ್ಲಾ ಬೆಳೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಸಾಹಸ ಮಾಡಿದರೂ ಆನೆಗಳ ಓಡಾಟದ ಸಮಸ್ಯೆ ದಿನದಿಂದ ಬಿಗಡಾಯಿಸುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರ ಹೋದ ಮೇಲೆ ಹಸಿದ ತೋಳಗಳಂತೆ ಬಿದ್ದಿದ್ದಾರೆ ವಿರೋಧಿಗಳು- ನನ್ನ ವಿರುದ್ಧದ ಸ್ಟಿಂಗ್ ಆಪರೇಷನ್ ಸಂಪೂರ್ಣ ಕಟ್ಟುಕಥೆ: ಅಹಿಂದ ನಾಯಕನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪಿತೂರಿ ಎಂದು ಸಿದ್ದರಾಮಯ್ಯ ಗುಡುಗು
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಪ್ರತಿಕ್ರಿಯೆ...








