ಪ್ರಕಾಶ್ ಪಳನಿ
ಸಂಸ್ಥಾಪಕರು ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್
ಟೀಮ್ ಕೆಫೆ ದಿವ್ಯಂ ತಂಡದ ಮಾಲೀಕರು

ಪ್ರಕಾಶ್ ಪಳನಿ. ಮೂಲತಃ ಬೆಂಗಳೂರಿನವರು. ಎಸ್. ಪಳನಿ ಮುದಲಿಯಾರ್ ಮತ್ತು ಚಂದ್ರಾ ಪಳಿ ಅವರ ಸುಪುತ್ರ. ಇನ್‍ಸ್ಟ್ರುಮೆಂಟೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಬಿಇ ಪದವಿಧರ.
ಬಾಲ್ಯದಿಂದಲೇ ಸ್ವಂತ ಬಲದಲ್ಲಿ ಉದ್ಯಮ ಆರಂಭಿಸಿ ಜೀವನ ರೂಪಿಸುವ ಛಲ ಹೊಂದಿದವರು. ಅದಕ್ಕಾಗಿಯೇ ತಮ್ಮ 11ನೇ ವಯಸ್ಸಿನಲ್ಲಿಯೇ ತಮ್ಮ ಮನೆಯ ಬಳಿ ತರಕಾರಿ ವ್ಯಾಪಾರ ಆರಂಭಿಸಿದ್ರು ಅದರ ಜತೆಜತೆಗೆ ಎಕ್ಸಿಬಿಷನ್ ಸೆಂಟರ್‍ಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ವಿದ್ಯಾಭ್ಯಾಸದ ನಂತರ ಹೆಸರಾಂತ ಪೈಂಟ್ ತಯಾರಿಕೆ ಮತ್ತು ಮಾರಾಟ ಸಂಸ್ಥೆಯೊಂದರ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್? ಆಗಿ ಹೊಸ ವೃತ್ತಿಯನ್ನು ಆರಂಭಿಸಿದರು.
ತಮಗೆ ದೊರೆತ ಪ್ರತಿ ಅವಕಾಶವನ್ನೂ ತಮ್ಮ ಉದ್ಯಮಶೀಲತಾ ಗುಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಳಸಿಕೊಂಡವರು ಪ್ರಕಾಶ್ ಪಳನಿ. ಅದರಂತೆ ಪೈಂಟ್ ಕಂಪೆನಿಯ ಹಿರಿಯ ಅಧಿಕಾರಿಗಳು ಪ್ರಕಾಶ್ ಪಳನಿ ಅವರ ಪ್ರಾಮಾಣಿಕ ಕೆಲಸ ಮತ್ತು ಸಾಮಥ್ರ್ಯವನ್ನು ಗುರುತಿಸಿ ವಿಪ್ರೊದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದರು. ಇದರ ನಡುವೆಯೇ ಸರ್ಕಾರಿ ಉದ್ಯೋಗ ದೊರೆತಿದ್ದರೂ, ಅದನ್ನು ತೊರೆದು ಐಟಿ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಲು ಪ್ರಕಾಶ್ ಪಳನಿ ಮುಂದಾಗಿದ್ರು.
ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಮುಂದಿಟ್ಟುಕೊಂಡು 1993ರಲ್ಲಿ ತಮ್ಮ ಸ್ವಂತ ಸಾಮಥ್ರ್ಯದಲ್ಲಿ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದರು. ಕಳೆದ 30ಕ್ಕೂ ಹೆಚ್ಚಿನ ವರ್ಷಗಳಿಂದ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದೇಶದಾದ್ಯಂತ ತನ್ನ ಗ್ರಾಹಕರಿಗೆ ಸಿಸ್ಟಂ ಇಂಟಿಗ್ರೇಷನ್, ಕನ್ಸಲ್ಟಿಂಗ್ ಸರ್ವೀಸ್, ಮ್ಯಾನೇಜಿಂಗ್ ಸರ್ವೀಸಸ್, ಸ್ಟ್ರಾಟೆಜಿಕ್ ಔಟ್‍ಸೋಸಿರ್ಂಗ್ ಸೇರಿದಂತೆ ಮತ್ತಿತರ ಸೇವೆಗಳನ್ನು ಒದಗಿಸುತ್ತಿದೆ. ಈವರೆಗೆ 50 ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿಗೆ ಅವರ ಬೇಡಿಕೆಗನುಗುಣವಾಗಿ ಪ್ರಕಾಶ್ ಪಳನಿ ಅವರ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸೇವೆಯನ್ನು ನೀಡುತ್ತಿದೆ.
ಐಟಿ ಜತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಪ್ರಕಾಶ್ ಪಳನಿ ಅವರು, ಹೆಸರಾಂತ ಅನುಭವ ಗ್ರೂಪ್ ಕನ್‍ಸ್ಟ್ರಕ್ಷನ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. 2008ರಿಂದಲೂ ಅನುಭವ ಗ್ರೂಪ್ ಸಂಸ್ಥೆ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗೃಹ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಐಷಾರಾಮಿ ಅಪಾರ್ಟ್‍ಮೆಂಟ್ಸ್, ಸೆಮಿ ಲಕ್ಷುರಿ ಅಪಾರ್ಟ್‍ಮೆಂಟ್ಸ್, ವಿಲ್ಲಾಸ್, ವಾಣಿಜ್ಯ ಕಟ್ಟಡಗಳ ನಿರ್ಮಾಣ ಮಾಡುತ್ತಾ ಬಂದಿದೆ. ಅನುಭವ ಗ್ರೂಪ್ ಸಂಸ್ಥೆಯು ಪ್ರಕಾಶ್ ಪಳನಿ ಮಾರ್ಗದರ್ಶನದಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗೃಹ ನಿರ್ಮಾಣ ಯೋಜನೆಗಳನ್ನು ರೂಪಿಸುತ್ತಿದೆ.
ಬಹುಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಪಳನಿ ಅವರು, ಆತಿಥ್ಯ ಕ್ಷೇತ್ರದಲ್ಲೂ ಹೆಜ್ಜೆಯನ್ನಿಟ್ಟಿದ್ದಾರೆ. ಪಳನಿ ಅವರ ಮಾಲೀಕತ್ವದ ಹಲವು ರೆಸ್ಟೋರೆಂಟ್‍ಗಳು, ಸರ್ವೀಸ್ ಅಪಾರ್ಟ್‍ಮೆಂಟ್ಸ್‍ಗಳಿವೆ. ಹಾಗೆಯೇ, ಚಲನಚಿತ್ರ ಕ್ಷೇತ್ರದತ್ತಲೂ ಆಸಕ್ತಿ ಹೊಂದಿರುವ ಪ್ರಕಾಶ್ ಅವರು, ಈವರೆಗೆ 3 ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ 40ಕ್ಕೂ ಹೆಚ್ಚಿನ ಚಲನಚಿತ್ರಗಳನ್ನು ವಿತರಣೆ ಮಾಡಿದ್ದಾರೆ.
ಹಾಲಿ ಜಾಲಿವುಡ್ ಫಿಲಂಸ್ ಎಂದು ಹೆಸರು ಬದಲಾವಣೆಯಾಗಿರುವ ಇನ್ನೋವೇಟಿವ್ ಫಿಲ್ಮ್ ಇಂಡಸ್ಟ್ರೀಯ ಪಾಲುದಾರರಾಗಿಯೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಉದ್ಯಮಗಳ ಬೆಳವಣಿಗೆಯ ಜತೆಜತೆಗೆ 1 ಸಾವಿರಕ್ಕೂ ಹೆಚ್ಚಿನ ಜನರಿಗೆ ಪ್ರಕಾಶ್ ಪಳನಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಇದೀಗ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಭಾಗವಾಗಿರುವ ಪಳನಿ ಪ್ರಕಾಶ್ ಅವರು, ದಿ ಕೆಫೆ ದಿವ್ಯಂ ತಂಡದ ಮಾಲೀಕರಾಗಿದ್ದಾರೆ. ಈ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.







