ADVERTISEMENT
Tuesday, September 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಬಹುಮುಖ ಪ್ರತಿಭೆಯ ಕಣಜ ಪ್ರಕಾಶ್ ಪಳನಿ ದಿ ಕೆಫೆ ದಿವ್ಯಂ ತಂಡದ ಒಡೆಯ..!

admin by admin
February 17, 2026
in Sports, Newsbeat, ಕ್ರೀಡೆ
cmcup2026-team cafedivvyam owner prakash palani

cmcup2026-team cafedivvyam owner prakash palani

Share on FacebookShare on TwitterShare on WhatsappShare on Telegram

ಪ್ರಕಾಶ್ ಪಳನಿ
ಸಂಸ್ಥಾಪಕರು ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್
ಟೀಮ್ ಕೆಫೆ ದಿವ್ಯಂ ತಂಡದ ಮಾಲೀಕರು

 

Related posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

September 29, 2026
ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

September 29, 2026
cmcup2026-team cafedivvyam
cmcup2026-team cafedivvyam

ಪ್ರಕಾಶ್ ಪಳನಿ. ಮೂಲತಃ ಬೆಂಗಳೂರಿನವರು. ಎಸ್. ಪಳನಿ ಮುದಲಿಯಾರ್ ಮತ್ತು ಚಂದ್ರಾ ಪಳಿ ಅವರ ಸುಪುತ್ರ. ಇನ್‍ಸ್ಟ್ರುಮೆಂಟೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಬಿಇ ಪದವಿಧರ.

ಬಾಲ್ಯದಿಂದಲೇ ಸ್ವಂತ ಬಲದಲ್ಲಿ ಉದ್ಯಮ ಆರಂಭಿಸಿ ಜೀವನ ರೂಪಿಸುವ ಛಲ ಹೊಂದಿದವರು. ಅದಕ್ಕಾಗಿಯೇ ತಮ್ಮ 11ನೇ ವಯಸ್ಸಿನಲ್ಲಿಯೇ ತಮ್ಮ ಮನೆಯ ಬಳಿ ತರಕಾರಿ ವ್ಯಾಪಾರ ಆರಂಭಿಸಿದ್ರು ಅದರ ಜತೆಜತೆಗೆ ಎಕ್ಸಿಬಿಷನ್ ಸೆಂಟರ್‍ಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ವಿದ್ಯಾಭ್ಯಾಸದ ನಂತರ ಹೆಸರಾಂತ ಪೈಂಟ್ ತಯಾರಿಕೆ ಮತ್ತು ಮಾರಾಟ ಸಂಸ್ಥೆಯೊಂದರ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್? ಆಗಿ ಹೊಸ ವೃತ್ತಿಯನ್ನು ಆರಂಭಿಸಿದರು.

ತಮಗೆ ದೊರೆತ ಪ್ರತಿ ಅವಕಾಶವನ್ನೂ ತಮ್ಮ ಉದ್ಯಮಶೀಲತಾ ಗುಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಳಸಿಕೊಂಡವರು ಪ್ರಕಾಶ್ ಪಳನಿ. ಅದರಂತೆ ಪೈಂಟ್ ಕಂಪೆನಿಯ ಹಿರಿಯ ಅಧಿಕಾರಿಗಳು ಪ್ರಕಾಶ್ ಪಳನಿ ಅವರ ಪ್ರಾಮಾಣಿಕ ಕೆಲಸ ಮತ್ತು ಸಾಮಥ್ರ್ಯವನ್ನು ಗುರುತಿಸಿ ವಿಪ್ರೊದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದರು. ಇದರ ನಡುವೆಯೇ ಸರ್ಕಾರಿ ಉದ್ಯೋಗ ದೊರೆತಿದ್ದರೂ, ಅದನ್ನು ತೊರೆದು ಐಟಿ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಲು ಪ್ರಕಾಶ್ ಪಳನಿ ಮುಂದಾಗಿದ್ರು.

ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಮುಂದಿಟ್ಟುಕೊಂಡು 1993ರಲ್ಲಿ ತಮ್ಮ ಸ್ವಂತ ಸಾಮಥ್ರ್ಯದಲ್ಲಿ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದರು. ಕಳೆದ 30ಕ್ಕೂ ಹೆಚ್ಚಿನ ವರ್ಷಗಳಿಂದ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದೇಶದಾದ್ಯಂತ ತನ್ನ ಗ್ರಾಹಕರಿಗೆ ಸಿಸ್ಟಂ ಇಂಟಿಗ್ರೇಷನ್, ಕನ್ಸಲ್ಟಿಂಗ್ ಸರ್ವೀಸ್, ಮ್ಯಾನೇಜಿಂಗ್ ಸರ್ವೀಸಸ್, ಸ್ಟ್ರಾಟೆಜಿಕ್ ಔಟ್‍ಸೋಸಿರ್ಂಗ್ ಸೇರಿದಂತೆ ಮತ್ತಿತರ ಸೇವೆಗಳನ್ನು ಒದಗಿಸುತ್ತಿದೆ. ಈವರೆಗೆ 50 ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿಗೆ ಅವರ ಬೇಡಿಕೆಗನುಗುಣವಾಗಿ ಪ್ರಕಾಶ್ ಪಳನಿ ಅವರ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸೇವೆಯನ್ನು ನೀಡುತ್ತಿದೆ.
ಐಟಿ ಜತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಪ್ರಕಾಶ್ ಪಳನಿ ಅವರು, ಹೆಸರಾಂತ ಅನುಭವ ಗ್ರೂಪ್ ಕನ್‍ಸ್ಟ್ರಕ್ಷನ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. 2008ರಿಂದಲೂ ಅನುಭವ ಗ್ರೂಪ್ ಸಂಸ್ಥೆ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗೃಹ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಐಷಾರಾಮಿ ಅಪಾರ್ಟ್‍ಮೆಂಟ್ಸ್, ಸೆಮಿ ಲಕ್ಷುರಿ ಅಪಾರ್ಟ್‍ಮೆಂಟ್ಸ್, ವಿಲ್ಲಾಸ್, ವಾಣಿಜ್ಯ ಕಟ್ಟಡಗಳ ನಿರ್ಮಾಣ ಮಾಡುತ್ತಾ ಬಂದಿದೆ. ಅನುಭವ ಗ್ರೂಪ್ ಸಂಸ್ಥೆಯು ಪ್ರಕಾಶ್ ಪಳನಿ ಮಾರ್ಗದರ್ಶನದಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗೃಹ ನಿರ್ಮಾಣ ಯೋಜನೆಗಳನ್ನು ರೂಪಿಸುತ್ತಿದೆ.

ಬಹುಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಪಳನಿ ಅವರು, ಆತಿಥ್ಯ ಕ್ಷೇತ್ರದಲ್ಲೂ ಹೆಜ್ಜೆಯನ್ನಿಟ್ಟಿದ್ದಾರೆ. ಪಳನಿ ಅವರ ಮಾಲೀಕತ್ವದ ಹಲವು ರೆಸ್ಟೋರೆಂಟ್‍ಗಳು, ಸರ್ವೀಸ್ ಅಪಾರ್ಟ್‍ಮೆಂಟ್ಸ್‍ಗಳಿವೆ. ಹಾಗೆಯೇ, ಚಲನಚಿತ್ರ ಕ್ಷೇತ್ರದತ್ತಲೂ ಆಸಕ್ತಿ ಹೊಂದಿರುವ ಪ್ರಕಾಶ್ ಅವರು, ಈವರೆಗೆ 3 ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ 40ಕ್ಕೂ ಹೆಚ್ಚಿನ ಚಲನಚಿತ್ರಗಳನ್ನು ವಿತರಣೆ ಮಾಡಿದ್ದಾರೆ.
ಹಾಲಿ ಜಾಲಿವುಡ್ ಫಿಲಂಸ್ ಎಂದು ಹೆಸರು ಬದಲಾವಣೆಯಾಗಿರುವ ಇನ್ನೋವೇಟಿವ್ ಫಿಲ್ಮ್ ಇಂಡಸ್ಟ್ರೀಯ ಪಾಲುದಾರರಾಗಿಯೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಉದ್ಯಮಗಳ ಬೆಳವಣಿಗೆಯ ಜತೆಜತೆಗೆ 1 ಸಾವಿರಕ್ಕೂ ಹೆಚ್ಚಿನ ಜನರಿಗೆ ಪ್ರಕಾಶ್ ಪಳನಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಇದೀಗ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಭಾಗವಾಗಿರುವ ಪಳನಿ ಪ್ರಕಾಶ್ ಅವರು, ದಿ ಕೆಫೆ ದಿವ್ಯಂ ತಂಡದ ಮಾಲೀಕರಾಗಿದ್ದಾರೆ. ಈ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.

Tags: #9dreamz#cmcup2026#cmcupbadminton2026#prakashpalani#saakshatvbengalurukarnatakathecafedivyam
ShareTweetSendShare
Join us on:

Related Posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

by Shwetha
September 29, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

by Shwetha
September 29, 2026
0

ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

by Shwetha
September 29, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ...

ಬಿಜೆಪಿ ಜತೆ ರಾಜಿಯಾಗಿದ್ದರೆ ಡಿಕೆಶಿ ಇವತ್ತು ಬೇರೆ ಲೆವೆಲ್ ನಲ್ಲೇ ಇರುತ್ತಿದ್ದರು: ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ ಬಾಲಕೃಷ್ಣ

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಬಗ್ಗೆ ಸಚಿವರ ಹೇಳಿಕೆ: ಸರ್ಕಾರದೊಳಗೂ ಚರ್ಚೆ

by Shwetha
September 29, 2026
0

ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮದ ಕುರಿತು ರಾಜ್ಯ ಸರ್ಕಾರದೊಳಗೇ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಸರ್ಕಾರದ...

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

by Shwetha
September 29, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಕುರಿತು ಕೊನೆಗೂ ಸರ್ಕಾರ ಮೌನ ಮುರಿದಿದೆ. ಇದುವರೆಗೂ ವಿರೋಧ ಪಕ್ಷಗಳು ಮಾಡುತ್ತಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram