ADVERTISEMENT
Thursday, February 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

Shwetha by Shwetha
February 19, 2026
in ದೇಶ - ವಿದೇಶ, National, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬಂಗಾರ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಶುಭ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಚಿನ್ನದ ಆಭರಣ ಕೊಳ್ಳುವುದು ಒಂದು ಸಂಪ್ರದಾಯವಾದರೆ, ಕಷ್ಟಕಾಲಕ್ಕೆ ಆಗಲಿ ಎಂದು ಹಳದಿ ಲೋಹದ ಮೇಲೆ ಹೂಡಿಕೆ ಮಾಡುವುದು ಜಾಣತನದ ನಡೆಯಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಆಗುತ್ತಿರುವ ಏರಿಳಿತಗಳನ್ನು ಕಂಡು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ ಚಿನ್ನದ ಬೆಲೆ ಲಕ್ಷದ ಗಡಿ ದಾಟಲಿದೆಯೇ ಅಥವಾ ಕುಸಿತ ಕಾಣಲಿದೆಯೇ ಎಂಬ ಗೊಂದಲಕ್ಕೆ ಮಾರುಕಟ್ಟೆ ತಜ್ಞರು ಸ್ಪಷ್ಟ ಉತ್ತರ ನೀಡಿದ್ದಾರೆ.

ಈಗಿನ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದರೆ ಆಭರಣ ಪ್ರಿಯರಿಗೆ ನೆಮ್ಮದಿ ತರುವ, ಆದರೆ ದೊಡ್ಡ ಮಟ್ಟದ ಹೂಡಿಕೆದಾರರಿಗೆ ಎಚ್ಚರಿಕೆ ನೀಡುವ ಮಹತ್ವದ ಸುದ್ದಿಯೊಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಹೊರಬಿದ್ದಿದೆ.

Related posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

February 19, 2026
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

February 19, 2026

ಅಮೆರಿಕ ಮತ್ತು ರಷ್ಯಾ ಸಂಬಂಧ ಸುಧಾರಣೆ ಚಿನ್ನದ ಮೇಲೆ ಬೀರಲಿದೆ ಪ್ರಭಾವ

ಇಷ್ಟು ದಿನ ಬದ್ಧವೈರಿಗಳಂತಿದ್ದ ಅಮೆರಿಕ ಹಾಗೂ ರಷ್ಯಾ ನಡುವಿನ ಸಂಬಂಧ ಸುಧಾರಣೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಉಭಯ ದೇಶಗಳ ನಡುವೆ ವ್ಯಾಪಾರ ವಹಿವಾಟು ಹೆಚ್ಚಳವಾದರೆ ಅದರ ನೇರ ಪರಿಣಾಮ ಚಿನ್ನದ ಬೆಲೆಯ ಮೇಲೆ ಆಗಲಿದೆ. ಅಂತಾರಾಷ್ಟ್ರೀಯ ಪ್ರಸಿದ್ಧ ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀತಿ ಕಡಿಮೆಯಾಗುವ ಸಾಧ್ಯತೆಯಿದ್ದು, ರಷ್ಯಾ ಮತ್ತೆ ತನ್ನ ವಹಿವಾಟನ್ನು ಡಾಲರ್ ಮೂಲಕವೇ ಮುಂದುವರಿಸುವ ಸುಳಿವು ಸಿಕ್ಕಿದೆ.

ರಷ್ಯಾ ಮತ್ತು ಅಮೆರಿಕ ದೇಶಗಳು ಹೊಸ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿದ್ದು, ಈ ಒಪ್ಪಂದದಲ್ಲಿ ಕೇವಲ ಇಂಧನ, ನೈಸರ್ಗಿಕ ಅನಿಲ ಅಥವಾ ಕಚ್ಚಾ ತೈಲವಷ್ಟೇ ಅಲ್ಲದೆ, ಚಿನ್ನವೂ ಸೇರ್ಪಡೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗಾದಲ್ಲಿ ಏರುಗತಿಯಲ್ಲಿರುವ ಚಿನ್ನದ ಬೆಲೆ ಒಮ್ಮೆಲೇ ನೆಲಕ್ಕೆ ಅಪ್ಪಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ದರ ಕುಸಿತದ ಲೆಕ್ಕಾಚಾರ ಹೇಗಿದೆ?

ಪ್ರಸ್ತುತ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಗಮನಿಸಿದರೆ, ಮುಂದಿನ ವರ್ಷದ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂಗೆ 90 ಸಾವಿರದಿಂದ ಒಂದು ಲಕ್ಷದವರೆಗೂ ತಲುಪಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಸದ್ಯ ನಡೆಯುತ್ತಿರುವ 1 ಲಕ್ಷದ 40 ಸಾವಿರದಿಂದ 1 ಲಕ್ಷದ 80 ಸಾವಿರದವರೆಗಿನ ವಹಿವಾಟಿನ ಅಂಕಿಅಂಶಗಳನ್ನು ನೋಡಿದರೆ, ಬೆಲೆ ಇಳಿಕೆಯಾಗುವ ಸಾಧ್ಯತೆಯೇ ಹೆಚ್ಚಿದೆ.

ತಜ್ಞರ ಪ್ರಕಾರ, ಅಮೆರಿಕ ಮತ್ತು ರಷ್ಯಾ ನಡುವಿನ ವಾಣಿಜ್ಯ ಮೈತ್ರಿ ಏರ್ಪಟ್ಟರೆ, ಈಗಿರುವ ಚಿನ್ನದ ಬೆಲೆಯು ಅರ್ಧಕ್ಕರ್ಧ ಕಡಿಮೆಯಾಗುವ ಸಾಧ್ಯತೆಯೂ ಇದೆ. ಏರಿದಷ್ಟೇ ವೇಗವಾಗಿ ಇಲ್ಲದಿದ್ದರೂ, ನಿಧಾನವಾಗಿಯಾದರೂ ಚಿನ್ನದ ಬೆಲೆ ಕುಸಿಯುತ್ತಿರುವುದು ಆಭರಣ ಪ್ರಿಯರಿಗೆ ಖುಷಿಯ ವಿಚಾರವಾಗಿದೆ.

ಹೂಡಿಕೆದಾರರು ಏನು ಮಾಡಬೇಕು?

ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಎಂದು ಅಥವಾ ಏರುತ್ತಿದೆ ಎಂದು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದಂತೆ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ದೊಡ್ಡ ಮಟ್ಟದಲ್ಲಿ ಇನ್ವೆಸ್ಟ್ ಮಾಡಲು ಅಥವಾ ಹೂಡಿಕೆ ಮಾಡಲು ಯೋಚಿಸುತ್ತಿರುವವರು ಸದ್ಯಕ್ಕೆ ತಮ್ಮ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

1. ಸ್ಥಳೀಯ ದರ ಅಷ್ಟೇ ನೋಡಬೇಡಿ: ಕೇವಲ ಭಾರತೀಯ ಮಾರುಕಟ್ಟೆಯ ದರವನ್ನು ನೋಡಿ ಹೂಡಿಕೆ ಮಾಡುವುದು ಅಪಾಯಕಾರಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.

2. ಕಾದು ನೋಡುವುದು ಉತ್ತಮ: ಸದ್ಯಕ್ಕೆ ಮಾರುಕಟ್ಟೆ ಅಸ್ಥಿರವಾಗಿರುವುದರಿಂದ, ದೊಡ್ಡ ಮೊತ್ತದ ಹಣವನ್ನು ಚಿನ್ನದ ಮೇಲೆ ತೊಡಗಿಸುವ ಬದಲು, ಬೆಲೆ ಸ್ಥಿರವಾಗುವವರೆಗೆ ಕಾಯುವುದು ಜಾಣತನ.

3. ಅವಸರದ ನಿರ್ಧಾರ ಬೇಡ: ಮದುವೆ ಅಥವಾ ಶುಭ ಕಾರ್ಯಗಳಿಗೆ ಅಗತ್ಯವಿರುವಷ್ಟು ಆಭರಣ ಕೊಳ್ಳುವುದು ಅನಿವಾರ್ಯವಾದರೂ, ಲಾಭದ ಉದ್ದೇಶದಿಂದ ಈಗಲೇ ಚಿನ್ನ ಕೊಳ್ಳುವುದು ನಷ್ಟ ತರಬಹುದು ಎಂದು ಮಾರುಕಟ್ಟೆ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ರಾಜಕೀಯ ಬದಲಾವಣೆಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದರೂ ಆಶ್ಚರ್ಯವಿಲ್ಲ. ಆದ್ದರಿಂದ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುವುದು ಅತ್ಯಗತ್ಯ.

ShareTweetSendShare
Join us on:

Related Posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

by Shwetha
February 19, 2026
0

ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಂತಸದ ಸುದ್ದಿ. ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಐತಿಹಾಸಿಕ ಮತ್ತು ಮಹತ್ವದ...

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

by Shwetha
February 19, 2026
0

ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಬಿಲ್‌ಗಳ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಆರ್. ಮಂಜುನಾಥ್...

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

by Shwetha
February 19, 2026
0

ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಂಡದ ನಿರ್ವಹಣೆಯಲ್ಲಿ...

ಅನುದಾನಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದರೆ ಅಶೋಕ್ ವಿಜಯೇಂದ್ರ ಮನೆ ಮುಂದೆ ಕಸ ಸುರಿಸ್ತೀನಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

ಅನುದಾನಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದರೆ ಅಶೋಕ್ ವಿಜಯೇಂದ್ರ ಮನೆ ಮುಂದೆ ಕಸ ಸುರಿಸ್ತೀನಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

by Shwetha
February 19, 2026
0

ಬೆಂಗಳೂರು: ರಾಜಧಾನಿಯ ಕಸ ವಿಲೇವಾರಿ ಸಮಸ್ಯೆ ಇದೀಗ ರಾಜಕೀಯ ರಣರಂಗವಾಗಿ ಮಾರ್ಪಟ್ಟಿದೆ. ಬೆಂಗಳೂರಿನ ತ್ಯಾಜ್ಯವನ್ನು ದೊಡ್ಡಬಳ್ಳಾಪುರಕ್ಕೆ ಸಾಗಿಸುವ ವಿಚಾರದಲ್ಲಿ ಬಿಜೆಪಿ ನಾಯಕರು ಮತ್ತು ಸರ್ಕಾರದ ನಡುವೆ ನೇರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram