ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ABRK) ಯೋಜನೆಯಡಿ ಮಹತ್ವದ ಸಡಿಲಿಕೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿನ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಹಂತದ ಚಿಕಿತ್ಸೆಗೆ BPL ಕಾರ್ಡ್ ಹೊಂದಿರುವ ರೋಗಿಗಳು ರೆಫರಲ್ ಲೆಟರ್ ಇಲ್ಲದೆ ಚಿಕಿತ್ಸೆ ಪಡೆಯಬಹುದು ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ.
ಈ ಸೌಲಭ್ಯ ಲಭ್ಯವಿರುವ ಆಸ್ಪತ್ರೆಗಳು:
MS ರಾಮಯ್ಯ ಆಸ್ಪತ್ರೆ, ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS ಆಸ್ಪತ್ರೆ), ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಹೊಸೂರು ರಸ್ತೆ ಸೆಂಟ್‌ಜಾನ್ಸ್ ಆಸ್ಪತ್ರೆ
ಈ ಕ್ರಮದಿಂದ ಆರ್ಥಿಕವಾಗಿ ಹಿಂದುಳಿದ ವರ್ಗದ ರೋಗಿಗಳಿಗೆ ತುರ್ತು ಹಾಗೂ ಅವಶ್ಯಕ ಚಿಕಿತ್ಸೆ ಪಡೆಯುವುದು ಸುಲಭವಾಗಲಿದೆ. ಇದುವರೆಗೆ ದ್ವಿತೀಯ ಹಂತದ ಚಿಕಿತ್ಸೆಗೆ ರೆಫರಲ್ ಪತ್ರ ಕಡ್ಡಾಯವಾಗಿದ್ದರಿಂದ ವಿಳಂಬ ಉಂಟಾಗುತ್ತಿದ್ದುದಾಗಿ ಹೇಳಲಾಗುತ್ತಿತ್ತು.
ಸರ್ಕಾರದ ಈ ನಿರ್ಧಾರ ಆರೋಗ್ಯ ಸೇವೆಗೆ ಸುಲಭ ಪ್ರವೇಶ ಕಲ್ಪಿಸುವುದರ ಜೊತೆಗೆ ಬಿಪಿಎಲ್ ಕುಟುಂಬಗಳಿಗೆ ಆರ್ಥಿಕ ಭಾರವನ್ನು ತಗ್ಗಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.








