ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಮನೆಯಿಂದ ಕೆಲಸ ಮಾಡುವ ಯೋಜನೆ ತಂದಿದ್ದು, ತಿಂಗಳಿಗೆ ₹25,000 ಸಂಬಳ ನೀಡಲಿದೆ ಎಂಬ ಸಂದೇಶ ವೈರಲ್ ಆಗುತ್ತಿದೆ. ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳು ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ಮನೆಯಿಂದ ಕೆಲಸ ಮಾಡಿದರೆ ₹25,000 ಸಂಬಳ ಸಿಗುತ್ತದೆ ಎಂಬ ಯಾವುದೇ ಅಧಿಕೃತ ಯೋಜನೆ ಕೇಂದ್ರ ಸರ್ಕಾರದಿಂದ ಜಾರಿಯಾಗಿಲ್ಲ ಎಂದು PIB ತಿಳಿಸಿದೆ. ಇಂತಹ ಭ್ರಮೆ ಹುಟ್ಟಿಸುವ ಪೋಸ್ಟ್ಗಳು ಮತ್ತು ಜಾಹೀರಾತುಗಳಿಂದ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ.
ನಕಲಿ ಸುದ್ದಿ, ವಿಡಿಯೋ ಅಥವಾ ಫೋಟೋಗಳನ್ನು ಕಂಡರೆ ಅವುಗಳನ್ನು factcheck@pib.gov.in ಗೆ ಕಳುಹಿಸುವಂತೆ ಸೂಚಿಸಲಾಗಿದೆ. ಸರ್ಕಾರದ ಅಧಿಕೃತ ಮಾಹಿತಿ ಪಡೆಯಲು ವಿಶ್ವಾಸಾರ್ಹ ಮೂಲಗಳನ್ನು ಮಾತ್ರ ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಡುವ ತಪ್ಪು ಮಾಹಿತಿಯಿಂದ ಮೋಸಹೋಗಬಾರದು ಎಂದು PIB ನಾಗರಿಕರಿಗೆ ಎಚ್ಚರಿಕೆ ನೀಡಿದೆ.








