ಶ್ರೀ ರಾಮುಲು ಆಪ್ತ ನಿಗೂಢ ಸಾವು : ತನಿಖೆ ಆಗಲೇಬೇಕು ಎಂದ ರವಿ ಕೃಷ್ಣಾರೆಡ್ಡಿ
ಬೆಂಗಳೂರು : ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಮಹೇಶ್ ರೆಡ್ಡಿ ಕಳೆದ ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಸಚಿವರೊಬ್ಬರ ಅಧಿಕೃತ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಎದ್ದಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ, ಡಿಜಿ ಹಾಗೂ ಐಜಿಪಿ ಅವರಿಗೆ ರವಿ ಕೃಷ್ಣಾರೆಡ್ಡಿ ಅವರು ಪತ್ರ ಬರೆದಿದ್ದಾರೆ. ಕಳೆದ ಏಪ್ರಿಲ್ 29ರಂದು ಶ್ರೀರಾಮುಲು ಅವರ ಆಪ್ತ ಮಹೇಶ್ ರೆಡ್ಡಿ ಬೆಂಗಳೂರಿನ ಸಚಿವರೊಬ್ಬರ ಅಧಿಕೃತ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಶವವನ್ನು ರಾತ್ರೋರಾತ್ರಿ ಬಳ್ಳಾರಿಗೆ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ಸಾವು ಸಹಜವೋ- ಅಸಹಜವೋ ಎಂಬ ಸತ್ಯಾಂಶ ಹೊರಬರಬೇಕು ಎಂದು ರವಿಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ಸಚಿವರೊಬ್ಬರ ಕೆಲ ಅವ್ಯವಹಾರಗಳ ರಹಸ್ಯ ಮಹೇಶ್ ರೆಡ್ಡಿಗೆ ಗೊತ್ತಿತ್ತು ಎಂಬ ಮಾಹಿತಿಯಿದೆ. ಅಸಹಜ ಸಾವು ಎಂಬ ವದಂತಿಯೂ ಕೇಳಿ ಬರುತ್ತಿದೆ. ಹೀಗಾಗಿ ಮಹೇಶ್ ಸಾವಿನ ರಹಸ್ಯವನ್ನು ಬಯಲು ಮಾಡಲು ಸೂಕ್ತ ತನಿಖೆ ನಡೆಸಬೇಕು.
ಮಹೇಶ್ ರೆಡ್ಡಿ ಸತ್ತ ಬಳಿಕ ಕೋವಿಡ್ ಪರೀಕ್ಷೆಯನ್ನೂ ನಡೆಸದೆ, ರಾತ್ರೋರಾತ್ರಿ ಬಳ್ಳಾರಿಗೆ ಶವ ಸಾಗಿಸಿ ಅಂತ್ಯಸAಸ್ಕಾರ ಮಾಡಿರುವ ಬಗ್ಗೆಯೂ ರವಿ ಕೃಷ್ಣಾರೆಡ್ಡಿ ಅವರು ಅನುಮಾನ ವ್ಯಕ್ತಪಡಿಸಿದ್ದು, ಎಲ್ಲಕ್ಕೂ ತನಿಖೆಯೇ ಉತ್ತರ ನೀಡಬೇಕು ಎಂದಿದ್ದಾರೆ.







