ADVERTISEMENT
Tuesday, March 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

Shwetha by Shwetha
March 3, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವಿಧಿಸಿದ್ದ ಬರೋಬ್ಬರಿ 12 ಕೋಟಿ ರೂಪಾಯಿಗಳ ಪ್ರೊ-ರೇಟಾ ಶುಲ್ಕವನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಈ ಮೂಲಕ ಜಲಮಂಡಳಿಯ ನೋಟಿಸ್ ಅನ್ನು ಎತ್ತಿಹಿಡಿದಿರುವ ನ್ಯಾಯಾಲಯವು, ನಿಯಮದನ್ವಯ ಶುಲ್ಕ ಪಾವತಿಸುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದೆ.

ಶಾಲಾ ಆಡಳಿತ ಮಂಡಳಿಯ ವಾದಗಳನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಬೃಹತ್ ಮೊತ್ತದ ಶುಲ್ಕ ಪಾವತಿಗೆ ಆದೇಶಿಸಿದೆ. ಈ ತೀರ್ಪು ಬಾಕಿ ಉಳಿದಿರುವ ನೀರಿನ ಶುಲ್ಕ ವಸೂಲಾತಿಗೆ ಜಲಮಂಡಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ.

Related posts

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

March 3, 2026
ದೆಹಲಿ ತಲುಪಿದ ರಾಜ್ಯ ಕಾಂಗ್ರೆಸ್ ಸಂಪುಟ ಕಸರತ್ತು: ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಅಂಗಳದಲ್ಲಿ ಜೋರಾದ ಲಾಬಿ

ದೆಹಲಿ ತಲುಪಿದ ರಾಜ್ಯ ಕಾಂಗ್ರೆಸ್ ಸಂಪುಟ ಕಸರತ್ತು: ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಅಂಗಳದಲ್ಲಿ ಜೋರಾದ ಲಾಬಿ

March 3, 2026

ಕನಕಪುರ ರಸ್ತೆಯಲ್ಲಿರುವ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಆವರಣದಲ್ಲಿ ಅಂತರ್ಜಲ ಮಟ್ಟ ಕುಸಿದು, ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಹಿತದೃಷ್ಟಿಯಿಂದ ಕಾವೇರಿ ನೀರಿಗಾಗಿ ಶಾಲೆಯು ಜಲಮಂಡಳಿಯ ಮೊರೆ ಹೋಗಿತ್ತು. ದಿನಕ್ಕೆ ಬರೋಬ್ಬರಿ 9 ಲಕ್ಷ ಲೀಟರ್ ನೀರು ಪೂರೈಸುವಂತೆ 2004 ರಲ್ಲೇ ಶಾಲಾ ಆಡಳಿತ ಮಂಡಳಿ ಜಲಮಂಡಳಿಗೆ ಮನವಿ ಸಲ್ಲಿಸಿತ್ತು.

ಅಂದಿನ ಒಪ್ಪಂದದಂತೆ, ನೀರು ಸರಬರಾಜು ಪೈಪ್‌ಲೈನ್ ಅಳವಡಿಸಲು ತಗಲುವ ವೆಚ್ಚವಾದ 93 ಲಕ್ಷ ರೂಪಾಯಿಗಳನ್ನು ಶಾಲೆ ಪಾವತಿಸಿತ್ತು. ಆದರೆ, ಕಾಲಕ್ರಮೇಣ ನೀರಿನ ದರ ಮತ್ತು ಸಂಪರ್ಕದ ನಿಯಮಗಳಲ್ಲಿ ಬದಲಾವಣೆಯಾಯಿತು. 2016 ರಲ್ಲಿ ಜಲಮಂಡಳಿಯು ತನ್ನ ದರಗಳನ್ನು ಪರಿಷ್ಕರಿಸಿದಾಗ, ಶಾಲೆಗೆ ಅನ್ವಯವಾಗುವಂತೆ ಪ್ರೊ-ರೇಟಾ ಶುಲ್ಕವನ್ನು ಮರು ಲೆಕ್ಕಾಚಾರ ಹಾಕಲಾಯಿತು. ಇದರನ್ವಯ 4.32 ಕೋಟಿ ರೂ. ಮೂಲ ಪ್ರೊ-ರೇಟಾ ಶುಲ್ಕ ಹಾಗೂ ಅದಕ್ಕೆ ಬಡ್ಡಿ ಮತ್ತು ಇತರೆ ದಂಡ ಸೇರಿ ಒಟ್ಟು 12.96 ಕೋಟಿ ರೂ. ಪಾವತಿಸುವಂತೆ ಜಲಮಂಡಳಿ ಡಿಮ್ಯಾಂಡ್ ನೋಟಿಸ್ ನೀಡಿತ್ತು. ಹಣ ಪಾವತಿಸದಿದ್ದರೆ ನೀರು ಮತ್ತು ಒಳಚರಂಡಿ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ಶಾಲೆ

ಜಲಮಂಡಳಿಯ ಈ ನಡೆಯನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೊರೆ ಹೋಗಿತ್ತು. ನಾವು ಶೈಕ್ಷಣಿಕ ಸಂಸ್ಥೆಯಾಗಿದ್ದು, ಲಾಭದಾಯಕ ಉದ್ದೇಶ ಹೊಂದಿಲ್ಲ. ನಮ್ಮನ್ನು ವಾಣಿಜ್ಯ ವಿಭಾಗದಡಿ ಪರಿಗಣಿಸಿ ಇಷ್ಟೊಂದು ಬೃಹತ್ ಮೊತ್ತದ ಶುಲ್ಕ ವಿಧಿಸುವುದು ಸರಿಯಲ್ಲ. ಅಲ್ಲದೆ, ಈಗಾಗಲೇ ಒಪ್ಪಂದದಂತೆ ನಾವು ಹಣ ಪಾವತಿಸಿದ್ದೇವೆ ಎಂದು ಶಾಲೆಯ ಪರ ವಕೀಲರು ವಾದ ಮಂಡಿಸಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಹೆಚ್ಚುವರಿಯಾಗಿ ಪಾವತಿಸಿದ್ದೇವೆ ಎನ್ನಲಾದ 1.01 ಕೋಟಿ ರೂ.ಗಳನ್ನು ಜಲಮಂಡಳಿ ವಾಪಸ್ ನೀಡಬೇಕೆಂದು ಕೋರಿದ್ದರು.

ಶಾಲೆಯ ವಾದ ತಳ್ಳಿಹಾಕಿದ ನ್ಯಾಯಾಲಯ

ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಜಲಮಂಡಳಿಯ ಪರವಾಗಿ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯವು ತನ್ನ ಆದೇಶದಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ:

1. ಜಲಮಂಡಳಿಗೆ ಸಂಪೂರ್ಣ ಅಧಿಕಾರವಿದೆ: ಬಿಡಬ್ಲ್ಯುಎಸ್‌ಎಸ್‌ಬಿ ಕಾಯ್ದೆಯ ಸೆಕ್ಷನ್ 16 ರ ಅಡಿಯಲ್ಲಿ ನೀರಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ಪ್ರೊ-ರೇಟಾ ಶುಲ್ಕ ವಿಧಿಸಲು ಮತ್ತು ಅದನ್ನು ಪರಿಷ್ಕರಿಸಲು ಮಂಡಳಿಗೆ ಶಾಸನಬದ್ಧ ಅಧಿಕಾರವಿದೆ. ಹಳೆಯ ಒಪ್ಪಂದಗಳು ಶಾಸನಬದ್ಧ ನಿಯಮಗಳನ್ನು ಮೀರುವಂತಿಲ್ಲ.

2. ವಾಣಿಜ್ಯ vs ವಸತಿ: ನೀರಿನ ದರ ನಿಗದಿಯಲ್ಲಿ ಜಲಮಂಡಳಿ ಕೇವಲ ಎರಡು ವಿಭಾಗಗಳನ್ನು ಮಾತ್ರ ಹೊಂದಿದೆ. ಒಂದು ವಸತಿ (Domestic) ಮತ್ತು ಇನ್ನೊಂದು ವಸತಿಯೇತರ (Non-Domestic). ಶೈಕ್ಷಣಿಕ ಸಂಸ್ಥೆಗಳಿಗೆ ಎಂದು ಪ್ರತ್ಯೇಕ ವಿನಾಯಿತಿ ಅಥವಾ ವಿಭಾಗ ಕಾಯ್ದೆಯಲ್ಲಿಲ್ಲ. ಹೀಗಾಗಿ ಶಾಲೆಯನ್ನು ವಸತಿಯೇತರ ವಿಭಾಗದಡಿಯೇ ಪರಿಗಣಿಸಬೇಕಾಗುತ್ತದೆ.

3. ದಾಖಲೆಗಳಲ್ಲಿ ವಾಣಿಜ್ಯ ಸಂಕೀರ್ಣ ಎಂದು ಉಲ್ಲೇಖ: ಸ್ವತಃ ಅರ್ಜಿದಾರರೇ (ಶಾಲೆ) ಈ ಹಿಂದೆ ಸಲ್ಲಿಸಿದ ನಕ್ಷೆ ಮಂಜೂರಾತಿ ಮತ್ತು ಇತರೆ ದಾಖಲೆಗಳಲ್ಲಿ ತಮ್ಮ ಕಟ್ಟಡವನ್ನು ವಾಣಿಜ್ಯ ಸಂಕೀರ್ಣ ಎಂದು ಘೋಷಿಸಿಕೊಂಡಿದ್ದಾರೆ. ಹೀಗಿರುವಾಗ ಈಗ ಶೈಕ್ಷಣಿಕ ಸಂಸ್ಥೆ ಎಂದು ವಾದಿಸಿ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಚಾಟಿ ಬೀಸಿದೆ.

ತೀರ್ಪಿನ ಪರಿಣಾಮವೇನು

ನ್ಯಾಯಾಲಯವು ಶಾಲೆಯ ರಿಟ್ ಅರ್ಜಿಯನ್ನು ವಜಾಗೊಳಿಸಿದ್ದು, 1.01 ಕೋಟಿ ರೂ. ಮರುಪಾವತಿ ಬೇಡಿಕೆಯನ್ನೂ ತಿರಸ್ಕರಿಸಿದೆ. ಆದರೆ, ವಿಧಿಸಲಾಗಿರುವ ಶುಲ್ಕದ ಲೆಕ್ಕಾಚಾರದಲ್ಲಿ ಏನಾದರೂ ಗಣಿತದ ತಪ್ಪುಗಳಿದ್ದರೆ (Arithmetical Errors), ಅದನ್ನು ಸರಿಪಡಿಸಿಕೊಳ್ಳಲು ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗಲು ಶಾಲೆಗೆ ಅವಕಾಶ ನೀಡಿದೆ.

ಈ ತೀರ್ಪು ಬೆಂಗಳೂರಿನ ಇತರೆ ಬೃಹತ್ ಶಿಕ್ಷಣ ಸಂಸ್ಥೆಗಳು, ಅಪಾರ್ಟ್ಮೆಂಟ್ಗಳು ಮತ್ತು ವಾಣಿಜ್ಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಪ್ರೊ-ರೇಟಾ ಶುಲ್ಕವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿರುವ ಇತರೆ ಸಂಸ್ಥೆಗಳಿಗೂ ಈ ತೀರ್ಪು ಹಿನ್ನಡೆಯುಂಟುಮಾಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಎಷ್ಟೇ ದೊಡ್ಡ ಸಂಸ್ಥೆಯಾದರೂ ಜಲಮಂಡಳಿಯ ನಿಯಮಗಳಿಗೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೈಕೋರ್ಟ್ ಈ ತೀರ್ಪಿನ ಮೂಲಕ ರವಾನಿಸಿದೆ.

ShareTweetSendShare
Join us on:

Related Posts

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

by Shwetha
March 3, 2026
0

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಭಾರೀ ತಲ್ಲಣಕ್ಕೊಳಗಾಗಿದೆ. ಯುದ್ಧ ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟದ...

ದೆಹಲಿ ತಲುಪಿದ ರಾಜ್ಯ ಕಾಂಗ್ರೆಸ್ ಸಂಪುಟ ಕಸರತ್ತು: ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಅಂಗಳದಲ್ಲಿ ಜೋರಾದ ಲಾಬಿ

ದೆಹಲಿ ತಲುಪಿದ ರಾಜ್ಯ ಕಾಂಗ್ರೆಸ್ ಸಂಪುಟ ಕಸರತ್ತು: ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಅಂಗಳದಲ್ಲಿ ಜೋರಾದ ಲಾಬಿ

by Shwetha
March 3, 2026
0

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿದ್ದ ಮಂತ್ರಿಗಿರಿಯ...

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

by Shwetha
March 3, 2026
0

ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಚ್ಚು ತಣ್ಣಗಾಗುವ ಬದಲು ಮತ್ತಷ್ಟು ಉರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಸಂಧಾನದ ಪ್ರಸ್ತಾಪವನ್ನು...

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

by Shwetha
March 3, 2026
0

ರಾಣೇಬೆನ್ನೂರು: ವಿದ್ಯಾರ್ಥಿಗಳ ಪಾಲಿಗೆ ವಿದ್ಯಾದೇಗುಲವಾಗಬೇಕಿದ್ದ ಶಿಕ್ಷಣ ಸಂಸ್ಥೆಯೊಂದು ವ್ಯಾಪಾರ ಕೇಂದ್ರವಾಗಿ ಬದಲಾದ ಅಮಾನವೀಯ ಘಟನೆಗೆ ಶಿಕ್ಷಣ ಇಲಾಖೆ ಚುರುಕು ಮುಟ್ಟಿಸಿದೆ. ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram