ಕರ್ನಾಟಕದ ರಾಜಧಾನಿ ಹಾಗೂ ಅಪ್ಪಟ ಕನ್ನಡಿಗರ ಹೆಮ್ಮೆಯ ನೆಲವಾದ ಬೆಂಗಳೂರು ಕೇವಲ ಭಾರತದ ಐಟಿ ರಾಜಧಾನಿಯಲ್ಲ, ಬದಲಾಗಿ ಲಕ್ಷಾಂತರ ಜನರಿಗೆ ಅನ್ನ ನೀಡುವ ಕಾಮಧೇನು. ಬಂದವರನ್ನು ತಬ್ಬಿ ಅಪ್ಪಿಕೊಳ್ಳುವ ಕನ್ನಡಿಗರ ವಿಶಾಲ ಹೃದಯವೇ ಇಂದು ಅವರಿಗೆ ಮುಳುವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ನಗರದಲ್ಲಿ ಪರಭಾಷಿಕರ ಅತಿಯಾದ ಹಾವಳಿ, ಪುಂಡಾಟಿಕೆ ಹಾಗೂ ಸ್ಥಳೀಯ ಸಂಸ್ಕೃತಿಯ ಮೇಲಿನ ಸವಾರಿ ಮಿತಿ ಮೀರುತ್ತಿದ್ದು, ಕರುನಾಡಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರ ಮೂಲದ ಯುವತಿಯೊಬ್ಬಳು ಮಾರತ್ತಹಳ್ಳಿಯನ್ನು ಮಿನಿ ಆಂಧ್ರ ಎಂದು ಕರೆದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ಆ ವಿವಾದ ತಣ್ಣಗಾಗುವ ಮುನ್ನವೇ, ಇಬ್ಬರು ಕೇರಳ ಮೂಲದ ಯುವಕರು ಬೆಂಗಳೂರಿನ ಮಡಿವಾಳವನ್ನು ಮಲ್ಲುಗಳ ಹಬ್ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಅನ್ನ ನೀಡುವ ನಾಡಿಗೆ ಕೃತಜ್ಞತೆ ಸಲ್ಲಿಸುವುದನ್ನು ಬಿಟ್ಟು, ಭಾಷಾ ದುರಹಂಕಾರ ಪ್ರದರ್ಶಿಸುತ್ತಿರುವ ಇವರ ನಡೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದೆ.
ನೂರಕ್ಕೆ ನೂರು ಸಾಕ್ಷರತೆ ಇದೆ ಎಂದು ಬೀಗುವ ಕೇರಳ ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ನೀಡುವಂತಹ ಸರಿಯಾದ ಕೈಗಾರಿಕೆಗಳಾಗಲಿ, ಮೂಲಭೂತ ಸೌಕರ್ಯಗಳಾಗಲಿ ಇಲ್ಲ ಎಂಬುದು ಜಗಜ್ಜಾಹೀರಾಗಿರುವ ಸತ್ಯ. ಡ್ರಗ್ಸ್ ಮಾಫಿಯಾ, ಗಲ್ಫ್ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟು ಹಾಗೂ ನಿರುದ್ಯೋಗದಿಂದ ಕಂಗೆಟ್ಟು ಬದುಕು ಕಟ್ಟಿಕೊಳ್ಳಲು ಬೆಂಗಳೂರಿನತ್ತ ಮುಖ ಮಾಡುವ ಇವರು, ಇಲ್ಲಿಗೆ ಬಂದ ನಂತರ ಕನ್ನಡಿಗರ ನೆಲವನ್ನೇ ತಮ್ಮ ಹಬ್ ಎಂದು ಕರೆದುಕೊಳ್ಳುವುದು ಎಷ್ಟು ಸರಿ ಎಂದು ನೆಟ್ಟಿಗರು ಕಟುವಾಗಿ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಹೋಗುವ ರೈಲುಗಳ ಸಂಖ್ಯೆಯೇ ಅಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ನಮ್ಮ ನಾಡಿನ ಸೌಲಭ್ಯಗಳನ್ನು ಅನುಭವಿಸುತ್ತಾ, ನಮ್ಮದೇ ನೆಲದಲ್ಲಿ ಉದ್ಧಟತನ ತೋರುವುದನ್ನು ಇನ್ನೆಷ್ಟು ದಿನ ಸಹಿಸಬೇಕು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಪುಂಡಾಟಿಕೆ ಕೇವಲ ನಗರದ ಮಧ್ಯಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರು ಹೊರವಲಯದ ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕೇರಳ ಮೂಲದ ವಿದ್ಯಾರ್ಥಿಗಳ ಹಾವಳಿ ಮಿತಿ ಮೀರಿದೆ. ಅಲ್ಲಿನ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳು, ಬಾಡಿಗೆ ಮನೆ ಹಾಗೂ ಪಿಜಿಗಳನ್ನು ಮಿನಿ ಬಾರ್‌ಗಳಾಗಿ ಪರಿವರ್ತಿಸಿದ್ದಾರೆ. ರಾಶಿ ರಾಶಿ ಮದ್ಯದ ಬಾಟಲಿಗಳನ್ನು ಪೇರಿಸಿಟ್ಟಿರುವ ವಿಡಿಯೋಗಳು ವೈರಲ್ ಆಗಿವೆ. ಮಧ್ಯರಾತ್ರಿವರೆಗೂ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ಸ್ಥಳೀಯರ ನಿದ್ದೆಗೆಡಿಸುವುದು, ಗುಂಪು ಕಟ್ಟಿಕೊಂಡು ಗಲಾಟೆ ಮಾಡುವುದು ನಿತ್ಯದ ಕಿರಿಕಿರಿಯಾಗಿದೆ. ಪೊಲೀಸರು ಕೂಡ ಇವರನ್ನು ನಿಯಂತ್ರಿಸಲು ವಿಫಲರಾಗುತ್ತಿರುವುದು ಸ್ಥಳೀಯರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಬೆಂಗಳೂರು ಎಲ್ಲರನ್ನೂ ಸಲಹುವ ತಾಯಿ, ಆದರೆ ಅದು ಕನ್ನಡಿಗರ ಸ್ವಾಭಿಮಾನವನ್ನು ಬಲಿಗೊಟ್ಟು ಅಲ್ಲ. ದಿನೇ ದಿನೇ ನಮ್ಮದೇ ರಾಜಧಾನಿಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವ ಭೀತಿ ಎದುರಾಗಿದೆ. ವಲಸಿಗರ ಈ ಹಾವಳಿಯನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಪರಭಾಷಿಕರ ಪುಂಡಾಟಿಕೆಗೆ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ, ಮುಂದೊಂದು ದಿನ ಬೆಂಗಳೂರಿನಲ್ಲಿ ಕನ್ನಡಿಗರೇ ಅನಾಥರಾಗುವ ಪರಿಸ್ಥಿತಿ ಬಂದೊದಗಬಹುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.








