ADVERTISEMENT
Thursday, May 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೆಂಗಣ್ಣು ಕೇಂದ್ರವನ್ನು ಓಲೈಸುವ ಬದಲು ಬಾಯಿ ಮುಚ್ಚಿಕೊಂಡಿರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ

Shwetha by Shwetha
April 5, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾಮಾನ್ಯ ಜನತೆ ಮತ್ತು ಆಟೋ ಚಾಲಕರು ಕಂಗಾಲಾಗಿದ್ದಾರೆ. ಈ ಗಂಭೀರ ವಿಚಾರ ಇದೀಗ ಆಡಳಿತಾರೂಢ ಕಾಂಗ್ರೆಸ್ ನಾಯಕರ ಆಂತರಿಕ ಅಸಮಾಧಾನಕ್ಕೂ ಸ್ಫೋಟಕ ವೇದಿಕೆಯಾಗಿದ್ದು, ಸ್ವಪಕ್ಷೀಯ ಸಚಿವರ ವಿರುದ್ಧವೇ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ ಎಚ್ ಮುನಿಯಪ್ಪ ಅವರು ಕೇಂದ್ರ ಸರ್ಕಾರವನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿರುವ ಲಕ್ಷ್ಮಣ್, ಸತ್ಯ ಹೇಳಲು ಸಾಧ್ಯವಾಗದಿದ್ದರೆ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದು ಹಿರಿಯ ಸಚಿವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.

Related posts

ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ  ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!

ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!

May 28, 2026
ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

ಶಂಕಿತ ಎಬೋಲಾ ಪ್ರಕರಣ ನೆಗೆಟಿವ್: ರಾಜ್ಯಕ್ಕೆ ತಾತ್ಕಾಲಿಕ ನೆಮ್ಮದಿ

May 28, 2026

ಪಶ್ಚಿಮ ಏಷ್ಯಾ ಯುದ್ಧದ ಬಿಸಿ, ರಾಜ್ಯದಲ್ಲಿ ಗ್ಯಾಸ್ ಹಾಹಾಕಾರ

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನೇರ ಪರಿಣಾಮ ತೈಲ ಆಮದಿನ ಮೇಲೆ ಬಿದ್ದಿದೆ. ಇದರ ಬಿಸಿ ಇದೀಗ ಕರ್ನಾಟಕದ ಜನತೆಗೆ ತಟ್ಟಿದ್ದು, ರಾಜ್ಯಾದ್ಯಂತ ಗ್ಯಾಸ್ ಸಿಲಿಂಡರ್ ಮತ್ತು ಆಟೋ ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಗ್ಯಾಸ್ ಸಿಗದೆ ಆಟೋ ಚಾಲಕರು ಬೀದಿಗೆ ಬಿದ್ದಿದ್ದಾರೆ. ತಮ್ಮ ಆಟೋಗಳಿಗೆ ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ರಾತ್ರಿ ಇಡೀ ಗ್ಯಾಸ್ ಬಂಕ್ ಗಳಲ್ಲೇ ಮಲಗಿ ಕಾಯುವಂತಹ ಶೋಚನಿಯ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಚಾಲಕರು ಪರದಾಡುತ್ತಿದ್ದಾರೆ.

ಕೇಂದ್ರದ ವೈಫಲ್ಯ ಮುಚ್ಚಿಡುತ್ತಿರುವ ಸಚಿವ ಮುನಿಯಪ್ಪ

ರಾಜ್ಯದಲ್ಲಿನ ಈ ಭಾರಿ ಅಭಾವಕ್ಕೆ ನೇರವಾಗಿ ಕೇಂದ್ರ ಸರ್ಕಾರವೇ ಕಾರಣ, ಬೇಡಿಕೆಗೆ ತಕ್ಕಂತೆ ಕೇಂದ್ರದಿಂದ ಗ್ಯಾಸ್ ಪೂರೈಕೆಯಾಗುತ್ತಿಲ್ಲ ಎಂದು ಲಕ್ಷ್ಮಣ್ ಕಿಡಿಕಾರಿದ್ದಾರೆ. ಆದರೆ ಈ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಕೇಂದ್ರದ ಲೋಪವನ್ನು ಎತ್ತಿ ತೋರಿಸುವ ಬದಲು, ಸಚಿವರು ಪದೇ ಪದೇ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಇಮೇಜ್ ಡ್ಯಾಮೇಜ್

ಮುನಿಯಪ್ಪ ಅವರ ಈ ನಡೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವರು ಪದೇ ಪದೇ ಸಭೆಗಳನ್ನು ಮಾಡುತ್ತಿರುವುದನ್ನು ನೋಡಿದರೆ, ಜನಸಾಮಾನ್ಯರು ಗ್ಯಾಸ್ ಪೂರೈಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಭಾವಿಸುತ್ತಾರೆ. ಕೇಂದ್ರ ಸರ್ಕಾರ ಮಾಡಿರುವ ತಪ್ಪಿಗೆ ರಾಜ್ಯ ಸರ್ಕಾರದ ಮೇಲೆ ಜನರಿಗೆ ಆಕ್ರೋಶ ಮತ್ತು ವ್ಯತಿರಿಕ್ತ ಭಾವನೆ ಮೂಡಲು ಸಚಿವರ ಈ ನಡೆ ಕಾರಣವಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಹಿರಿಯ ಸಚಿವರಿಗೆ ಲಕ್ಷ್ಮಣ್ ಖಡಕ್ ತರಾಟೆ

ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮತ್ತು ಅಪಾರ ರಾಜಕೀಯ ಅನುಭವ ಹೊಂದಿರುವ ಕೆ ಎಚ್ ಮುನಿಯಪ್ಪ ಅವರಂತಹ ಹಿರಿಯ ನಾಯಕರು ಹೀಗೆ ವರ್ತಿಸುತ್ತಿರುವುದು ಬೇಸರದ ಸಂಗತಿ. ಕೇಂದ್ರ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವ ಬದಲು ಅವರನ್ನು ಓಲೈಸುವ ಕೆಲಸ ಮಾಡುತ್ತಿದ್ದೀರಾ. ಪದೇ ಪದೇ ಸಭೆಗಳನ್ನು ಮಾಡಿ ನಾಟಕ ಆಡುವುದನ್ನು ಬಿಟ್ಟು, ಸುಮ್ಮನೆ ಬಾಯಿ ಮುಚ್ಚಿಕೊಂಡು ಇದ್ದರೆ ಬಹಳ ಚಂದ ಎಂದು ಲಕ್ಷ್ಮಣ್ ತಮ್ಮದೇ ಪಕ್ಷದ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯುದ್ಧದಿಂದ ಶುರುವಾದ ಗ್ಯಾಸ್ ಅಭಾವದ ಸಮಸ್ಯೆ, ಇದೀಗ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಒಳಜಗಳ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

ShareTweetSendShare
Join us on:

Related Posts

ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ  ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!

ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!

by Shwetha
May 28, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನವಾಗಿ ದಾಖಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಕುರ್ಚಿ ಬದಲಾವಣೆಯ ಹಗ್ಗಜಗ್ಗಾಟ ಈಗ ಅಂತಿಮ...

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

ಶಂಕಿತ ಎಬೋಲಾ ಪ್ರಕರಣ ನೆಗೆಟಿವ್: ರಾಜ್ಯಕ್ಕೆ ತಾತ್ಕಾಲಿಕ ನೆಮ್ಮದಿ

by Shwetha
May 28, 2026
0

ರಾಜ್ಯದಲ್ಲಿ ಆತಂಕ ಮೂಡಿಸಿದ್ದ ಶಂಕಿತ ಎಬೋಲಾ ಪ್ರಕರಣದ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದ್ದಾರೆ. ಉಗಾಂಡದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯಲ್ಲಿ ಎಬೋಲಾ...

ಮಮತಾ ಬ್ಯಾನರ್ಜಿ ಕೋಟೆಯಲ್ಲಿ ನಡುಕ ಶುರು: 50 ಶಾಸಕರು ಮತ್ತು 20 ಸಂಸದರು ಬಿಜೆಪಿ ಸೇರ್ಪಡೆ ಸುಳಿವು? ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಹೈವೋಲ್ಟೇಜ್ ಡ್ರಾಮಾ

ಮಮತಾ ಬ್ಯಾನರ್ಜಿ ಕೋಟೆಯಲ್ಲಿ ನಡುಕ ಶುರು: 50 ಶಾಸಕರು ಮತ್ತು 20 ಸಂಸದರು ಬಿಜೆಪಿ ಸೇರ್ಪಡೆ ಸುಳಿವು? ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಹೈವೋಲ್ಟೇಜ್ ಡ್ರಾಮಾ

by Shwetha
May 28, 2026
0

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಈಗ ಭಾರಿ ಬಿರುಗಾಳಿ ಎದ್ದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (TMC) ಈ ಬಾರಿ ಅತಿ ದೊಡ್ಡ ಆಘಾತ...

ಹೈಕಮಾಂಡ್ ಅಂಗಳದಲ್ಲಿ ಡಿಕೆಶಿ ಮೌನಂ ಶಕ್ತಿ ಲಕ್ಷಣ : ಸಿಎಂ ಕುರ್ಚಿ ಚರ್ಚೆ ನಡುವೆ ಮಂದಹಾಸದ ಮರ್ಮವೇನು

ಸಿದ್ದರಾಮಯ್ಯರ ಮುಂದಿನ ನಡೆ ಏನು? ರಾಜ್ಯ ರಾಜಕೀಯದಲ್ಲಿ ಹೆಚ್ಚಿದ ಕುತೂಹಲ

by Shwetha
May 28, 2026
0

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ಭಾರೀ ಕುತೂಹಲ ಹುಟ್ಟಿಸಿದೆ. ಒಂದು...

ಸಿದ್ದರಾಮಯ್ಯ ಆಶೀರ್ವಾದವಿಲ್ಲದೆ ಡಿಕೆಶಿ ಸಿಎಂ ಆಗೋದು ಅಸಾಧ್ಯ: ಮಾಗಡಿ ಶಾಸಕ ಬಾಲಕೃಷ್ಣ

ಸಿದ್ದರಾಮಯ್ಯ ಆಶೀರ್ವಾದವಿಲ್ಲದೆ ಡಿಕೆಶಿ ಸಿಎಂ ಆಗೋದು ಅಸಾಧ್ಯ: ಮಾಗಡಿ ಶಾಸಕ ಬಾಲಕೃಷ್ಣ

by Shwetha
May 28, 2026
0

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಕುರಿತಾದ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram