ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ತುರ್ತು ಸೂಚನೆ ನೀಡಿರುವ ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಯಾವುದೇ ವಿಳಂಬ ಮಾಡದೆ ತಕ್ಷಣ ದೇಶ ತೊರೆಯುವಂತೆ ಮನವಿ ಮಾಡಿದೆ.
ರಾಯಭಾರ ಕಚೇರಿ ತಿಳಿಸಿರುವಂತೆ, ಭಾರತೀಯರು ತಮ್ಮ ಪ್ರಯಾಣವನ್ನು ಸುರಕ್ಷಿತವಾಗಿ ಯೋಜಿಸಿ, ರಾಯಭಾರ ಕಚೇರಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ, ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಸೂಚಿಸಲಾದ ಮಾರ್ಗಗಳ ಮೂಲಕವೇ ಇರಾನ್‌ನಿಂದ ಹೊರಬರಲು ವಿನಂತಿಸಲಾಗಿದೆ.
ಮುಖ್ಯವಾಗಿ, ಪೂರ್ವ ಸಮಾಲೋಚನೆ ಇಲ್ಲದೆ ಅಂತರಾಷ್ಟ್ರೀಯ ಭೂ ಗಡಿಗಳತ್ತ ಹೋಗಬಾರದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ, ಯಾವುದೇ ಅಜಾಗರೂಕತೆ ಅಪಾಯಕಾರಿಯಾಗಬಹುದು ಎಂದು ತಿಳಿಸಲಾಗಿದೆ.
ತುರ್ತು ಸಹಾಯಕ್ಕಾಗಿ ಈ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ಸೂಚಿಸಲಾಗಿದೆ:
(+989128109115; +989128109109; +989128109102; +989932179359)
ಇತ್ತೀಚಿನ ಕದನ ವಿರಾಮದ ಹಿನ್ನೆಲೆಯಲ್ಲಿಯೇ ಈ ತುರ್ತು ಪ್ರಕಟಣೆ ಹೊರಡಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಭಾರತೀಯರು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.







