ಇರಾನ್–ಅಮೆರಿಕಾ ಸೀಸ್‌ಫೈರ್ ವಿಚಾರದಲ್ಲಿ ನಿಜವಾದ ಹಿನ್ನಲೆ ಶಕ್ತಿ ಚೀನಾ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರಂಭದಲ್ಲಿ ಮಾತುಕತೆಗೆ ಸಮ್ಮತಿಸದ ಇರಾನ್ ಅನ್ನು ಬೀಜಿಂಗ್ ಮನವೊಲಿಸಿದೆ ಎನ್ನಲಾಗುತ್ತಿದೆ.
ಚೀನಾ, ಟರ್ಕಿ, ಪಾಕಿಸ್ತಾನ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಸೀಸ್‌ಫೈರ್ ಒಪ್ಪಂದದ ಯೋಜನೆಯನ್ನು ರೂಪಿಸಿದೆ ಎಂಬ ವರದಿಗಳು ಹರಿದಾಡುತ್ತಿವೆ.
ಇದನ್ನು ಡೊನಾಲ್ಡ್ ಟ್ರಂಪ್ ಕೂಡ ಪರೋಕ್ಷವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಇರಾನ್ ಮತ್ತು ಚೀನಾ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳು ಬಹಳ ಬಲವಾಗಿದ್ದು, ಟೆಹ್ರಾನ್‌ನಿಂದ ಬೀಜಿಂಗ್ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿರುವುದು ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಈ ಬೆಳವಣಿಗೆ ಜಾಗತಿಕ ರಾಜಕೀಯದಲ್ಲಿ ಚೀನಾದ ಪ್ರಭಾವವನ್ನು ಮತ್ತೊಮ್ಮೆ ಹೈಲೈಟ್ ಮಾಡುತ್ತಿದೆ.







