ADVERTISEMENT
Thursday, April 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಅಪ್ಪ-ಮಗನ ತಲೆಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Shwetha by Shwetha
April 9, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ, ನಾಲಿಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಖರ್ಗೆಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಅರಳು-ಮರಳು ಮಾತುಗಳಂತಿವೆ. ಅವರ ಮಾನಸಿಕ ಆರೋಗ್ಯ ಸರಿ ಇಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ ಎಂದು ಹರಿಹಾಯ್ದರು. ಬಿಜೆಪಿ ಮತ್ತು ಆರ್‍ಎಸ್‍ಎಸ್ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿ, ಜನರನ್ನು ಕೊಲ್ಲಲು ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ದೇಶವೇ ಖಂಡಿಸುತ್ತಿದೆ ಎಂದು ಕಿಡಿಕಾರಿದರು.

Related posts

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

April 9, 2026
ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

April 9, 2026

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಯ ಅನ್ವಯ, ಖರ್ಗೆಯವರ ಇಂತಹ ವಿಷಕಾರಿ ಭಾಷಣಗಳಿಗೆ ಪ್ರಕರಣ ದಾಖಲಿಸಲು ಅವಕಾಶವಿದೆ. ಈಗಾಗಲೇ ಈ ಸಂಬಂಧ ಬಿಜೆಪಿ ದೂರು ನೀಡಿದ್ದು, ಖರ್ಗೆಯವರ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಖರ್ಗೆಯವರ ಕುಟುಂಬದ ಮೇಲೆ ರಜಾಕರು ದಾಳಿ ಮಾಡಿದ್ದರು ಎಂಬುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ತಮ್ಮ ಮನೆತನವನ್ನು ನಾಶ ಮಾಡಿದವರ ವಿರುದ್ಧ ಮಾತನಾಡಬೇಕಾದ ಖರ್ಗೆ, ಇಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹಗೆತನ ಕಾರುತ್ತಿದ್ದಾರೆ. ಅಪ್ಪನಿಗೆ ಸಾಥ್ ನೀಡುತ್ತಿರುವ ಪ್ರಿಯಾಂಕ್ ಖರ್ಗೆ ಅವರದು ಕೂಡ ಅದೇ ಮನಸ್ಥಿತಿ. ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿ ಎಂಬಂತೆ ಅಪ್ಪ-ಮಗ ಇಬ್ಬರೂ ವಿಷಕಾರಿ ಮಾತುಗಳನ್ನೇ ಆಡುತ್ತಿದ್ದಾರೆ ಎಂದು ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ವರ್ತನೆಯನ್ನು ಸ್ವತಃ ಕಾಂಗ್ರೆಸ್ ನಾಯಕರು ಕೂಡ ಇಷ್ಟಪಡುತ್ತಿಲ್ಲ. ಇಬ್ಬರೂ ಪಕ್ಷದಲ್ಲಿ ಮೂಲೆಗುಂಪಾಗಿದ್ದು, ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳಲು ಇಂತಹ ಅಗ್ಗದ ರಾಜಕೀಯ ಮಾಡುತ್ತಿದ್ದಾರೆ. ಅಪ್ಪ ಮತ್ತು ಮಗನ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ತುಂಬಿಕೊಂಡಿದೆ ಎಂದು ಹರಿಹಾಯ್ದರು.

ಖರ್ಗೆಯವರಿಗೆ ತಕ್ಷಣವೇ ಕೇಂದ್ರ ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿಸಿ ತಿಹಾರ್ ಜೈಲಿಗೆ ಕಳಿಸಬೇಕು. ಆಗಲಾದರೂ ಅವರಿಗೆ ವಿಶ್ರಾಂತಿ ಸಿಗುತ್ತದೆ. ಮಗ ಪ್ರಿಯಾಂಕ್ ಕೂಡ ಜೊತೆಯಲ್ಲಿದ್ದರೆ ಅವರಿಗೆ ಸಹಾಯವಾಗುತ್ತದೆ. ಮಾತೆತ್ತಿದರೆ ತಾನು ದಲಿತ ಎಂದು ಹೇಳಿಕೊಳ್ಳುವ ಖರ್ಗೆ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಮೇಲೆ ಜಾತಿ ತಾರತಮ್ಯ ಬಿಟ್ಟು ಮಾತನಾಡಬೇಕು. ದಲಿತ ಎಂಬ ಕಾರ್ಡ್ ಬಳಸಿಕೊಂಡು ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡರೆ ಅದು ತಪ್ಪು. ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರಿಂದ ಬಾಗಿಲು ಹಾಕಿಸುವ ಕೆಲಸ ಮಾಡಬೇಡಿ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಛಲವಾದಿ ನಾರಾಯಣಸ್ವಾಮಿ ಈ ವೇಳೆ ಸಲಹೆ ನೀಡಿದರು.

ShareTweetSendShare
Join us on:

Related Posts

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

by Shwetha
April 9, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮಾಸ್ಟರ್ ಸ್ಟ್ರಾಟಜಿಸ್ಟ್ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ನೇರ...

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

by Shwetha
April 9, 2026
0

ಅಥಣಿ: ಲಕ್ಷ್ಮಣ ಸವದಿ ಬಿಜೆಪಿಗೆ ಮರಳಿ ಬರುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಅವರು ಪ್ರಯತ್ನಿಸಿದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್...

ರಾಜ್ಯದಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ

ರಾಜ್ಯದಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ

by Shwetha
April 9, 2026
0

ಮಲೆನಾಡು ಭಾಗದಲ್ಲಿ ಮತ್ತೆ ಮಂಗನ ಕಾಯಿಲೆಯ ಅಬ್ಬರ ಶುರುವಾಗಿದೆ. ಈ ಮಾರಕ ಕಾಯಿಲೆಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ...

ಇರಾನ್–ಅಮೆರಿಕಾ ಸೀಸ್‌ಫೈರ್: ಚೀನಾದ ತಂತ್ರಗಾರಿಕೆ ಹಿನ್ನಲೆ

ಇರಾನ್–ಅಮೆರಿಕಾ ಸೀಸ್‌ಫೈರ್: ಚೀನಾದ ತಂತ್ರಗಾರಿಕೆ ಹಿನ್ನಲೆ

by Shwetha
April 9, 2026
0

ಇರಾನ್–ಅಮೆರಿಕಾ ಸೀಸ್‌ಫೈರ್ ವಿಚಾರದಲ್ಲಿ ನಿಜವಾದ ಹಿನ್ನಲೆ ಶಕ್ತಿ ಚೀನಾ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರಂಭದಲ್ಲಿ ಮಾತುಕತೆಗೆ ಸಮ್ಮತಿಸದ ಇರಾನ್ ಅನ್ನು ಬೀಜಿಂಗ್ ಮನವೊಲಿಸಿದೆ ಎನ್ನಲಾಗುತ್ತಿದೆ. ಚೀನಾ,...

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ,  ಕಾಂಗ್ರೆಸ್ ಆಕ್ರೋಶ

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ, ಕಾಂಗ್ರೆಸ್ ಆಕ್ರೋಶ

by Shwetha
April 9, 2026
0

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಪಾಕಿಸ್ತಾನ ಮಹತ್ವದ ಪಾತ್ರ ವಹಿಸಿರುವುದು ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯು ಪ್ರಧಾನಿ ನರೇಂದ್ರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram