ADVERTISEMENT
Thursday, April 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮಗನಿಗಿದ್ದ ಹುಚ್ಚು ಅಪ್ಪನಿಗೂ ಅಂಟಿದೆ: ಅಪ್ಪ-ಮಕ್ಕಳ ಆರ್‌ಎಸ್‌ಎಸ್ ವಿರೋಧಿ ಮನಸ್ಥಿತಿಯನ್ನು ಟೀಕಿಸಿದ ಪ್ರತಾಪ್ ಸಿಂಹ

Shwetha by Shwetha
April 9, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡಿ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕುರಾನ್ ಉಲ್ಲೇಖಿಸಿ ನೀಡಿದ ಹೇಳಿಕೆಯು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ನಮಾಜ್ ಮಾಡುವಾಗ ವಿಷ ಸರ್ಪ ಕಂಡರೆ ಅದನ್ನು ಕೊಲ್ಲುವುದು ಮುಖ್ಯ ಎಂಬರ್ಥದಲ್ಲಿ ಅವರು ನೀಡಿದ ಹೇಳಿಕೆಗೆ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

Related posts

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ,  ಕಾಂಗ್ರೆಸ್ ಆಕ್ರೋಶ

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ, ಕಾಂಗ್ರೆಸ್ ಆಕ್ರೋಶ

April 9, 2026
ದ್ವಿತೀಯ PUC ಫಲಿತಾಂಶ: ಉತ್ತೀರ್ಣತೆಗೆ ಹೊಸ ನಿಯಮಗಳು ಪ್ರಕಟ

ದ್ವಿತೀಯ PUC ಫಲಿತಾಂಶ: ಉತ್ತೀರ್ಣತೆಗೆ ಹೊಸ ನಿಯಮಗಳು ಪ್ರಕಟ

April 9, 2026

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಮಗ ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ಬಗ್ಗೆ ಇರುವ ದ್ವೇಷದ ಹುಚ್ಚು ಇದೀಗ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗೂ ಅಂಟಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು ಬೈಯದಿದ್ದರೆ ಇವರಿಗೆ ಅನ್ನ ಅರಗುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರುವವರು ಇಷ್ಟೊಂದು ಕೀಳುಮಟ್ಟದ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಶೋಭೆಯಲ್ಲ ಎಂದಿದ್ದಾರೆ.

ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹತಾಶರಾಗಿ ಖರ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರಬಹುದು. ಒಂದು ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷ ಸರ್ಪಕ್ಕೆ ಹೋಲಿಸಿ, ಮುಸಲ್ಮಾನರನ್ನು ಪ್ರಚೋದನೆ ಮಾಡುವ ಕೆಲಸವನ್ನು ಖರ್ಗೆ ಮಾಡುತ್ತಿದ್ದಾರೆ. ಇದು ಅತ್ಯಂತ ಆಕ್ಷೇಪಾರ್ಹ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ ಪ್ರತಾಪ್ ಸಿಂಹ, ಮುಸ್ಲಿಂ ಮತದಾರರನ್ನು ಓಲೈಕೆ ಮಾಡಲು ಸಿದ್ದರಾಮಯ್ಯ ಅವರು ಏನೆಲ್ಲಾ ಮಾಡುತ್ತಾರೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ ಈಗ ನಿಮ್ಮ ಹೇಳಿಕೆಗಳನ್ನು ನೋಡಿದರೆ, ಸಿದ್ದರಾಮಯ್ಯ ಅವರಿಗಿಂತ ನೀವು ಎರಡು ಪಟ್ಟು ಹೆಚ್ಚಾಗಿ ಮುಸ್ಲಿಮರನ್ನು ಓಲೈಸಲು ಹೋಗಿ ಇಂತಹ ಕೆಟ್ಟ ಹೇಳಿಕೆ ನೀಡುತ್ತಿದ್ದೀರಿ. ಸತ್ಯ ಹೇಳಬೇಕೆಂದರೆ ಸಿದ್ದರಾಮಯ್ಯ ಅವರೆ ನಿಮಗೆ ಹೋಲಿಸಿದರೆ ಉತ್ತಮ ಎಂದು ಲೇವಡಿ ಮಾಡಿದ್ದಾರೆ.

ಖರ್ಗೆಯವರ ಈ ಹೇಳಿಕೆಯು ಕಾಂಗ್ರೆಸ್ ಪಕ್ಷದ ಹತಾಶೆಯನ್ನು ಎತ್ತಿ ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಮತ್ತಷ್ಟು ರಾಜಕೀಯ ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ.

ShareTweetSendShare
Join us on:

Related Posts

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ,  ಕಾಂಗ್ರೆಸ್ ಆಕ್ರೋಶ

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ, ಕಾಂಗ್ರೆಸ್ ಆಕ್ರೋಶ

by Shwetha
April 9, 2026
0

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಪಾಕಿಸ್ತಾನ ಮಹತ್ವದ ಪಾತ್ರ ವಹಿಸಿರುವುದು ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯು ಪ್ರಧಾನಿ ನರೇಂದ್ರ...

ದ್ವಿತೀಯ PUC ಫಲಿತಾಂಶ: ಉತ್ತೀರ್ಣತೆಗೆ ಹೊಸ ನಿಯಮಗಳು ಪ್ರಕಟ

ದ್ವಿತೀಯ PUC ಫಲಿತಾಂಶ: ಉತ್ತೀರ್ಣತೆಗೆ ಹೊಸ ನಿಯಮಗಳು ಪ್ರಕಟ

by Shwetha
April 9, 2026
0

ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿಯು ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಇಂದು (ಏಪ್ರಿಲ್ 9) ಬೆಳಿಗ್ಗೆ ದ್ವಿತೀಯ PUC ಫಲಿತಾಂಶ ಪ್ರಕಟವಾಗಲಿದೆ. ಈ...

ತಕ್ಷಣವೇ ಇರಾನ್ ತೊರೆಯಿರಿ: ಭಾರತೀಯ ರಾಯಭಾರ ಕಚೇರಿ ತುರ್ತು ಸೂಚನೆ

ತಕ್ಷಣವೇ ಇರಾನ್ ತೊರೆಯಿರಿ: ಭಾರತೀಯ ರಾಯಭಾರ ಕಚೇರಿ ತುರ್ತು ಸೂಚನೆ

by Shwetha
April 9, 2026
0

ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ತುರ್ತು ಸೂಚನೆ ನೀಡಿರುವ ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಯಾವುದೇ ವಿಳಂಬ ಮಾಡದೆ ತಕ್ಷಣ ದೇಶ ತೊರೆಯುವಂತೆ ಮನವಿ ಮಾಡಿದೆ. ರಾಯಭಾರ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 9, 2026
0

ದಿನ ಭವಿಷ್ಯ: 09-04-2026 ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಿ ಸಾಗಲಿವೆ. ವೃತ್ತಿ ಜೀವನ: ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಉತ್ತಮ...

ಗುಜರಾತ್ ಜನರನ್ನು ಅನಕ್ಷರಸ್ಥರೆಂದು ಜರಿದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹ, ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದ ಬಿಜೆಪಿ

ಗುಜರಾತ್ ಜನರನ್ನು ಅನಕ್ಷರಸ್ಥರೆಂದು ಜರಿದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹ, ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದ ಬಿಜೆಪಿ

by Shwetha
April 8, 2026
0

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಜನರ ಬಗ್ಗೆ ನೀಡಿರುವ ಹೇಳಿಕೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೇರಳದಲ್ಲಿ ನಡೆದ ಚುನಾವಣಾ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram