ಇಸ್ರೇಲ್ ವಿರುದ್ಧ ಪಾಕಿಸ್ತಾನದ ಸಚಿವ ಖವಾಜಾ ನೀಡಿದ ತೀಕ್ಷ್ಣ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಸ್ರೇಲ್ ಮಾನವಕುಲಕ್ಕೆ ಶಾಪ ಎಂದು ಹಾಗೂ ಲೆಬನಾನ್‌ನಲ್ಲಿ ನರಮೇಧ ನಡೆಸುತ್ತಿದೆ ಎಂದು ಖವಾಜಾ ಆರೋಪಿಸಿದ್ದರು.
ಈ ಹೇಳಿಕೆಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಗಾರನಾಗಿ ಇರುವ ಪಾಕಿಸ್ತಾನ ಇಸ್ರೇಲ್‌ನ ನಾಶಕ್ಕೆ ಕರೆ ನೀಡುವಂತಹ ಹೇಳಿಕೆ ನೀಡುವುದು ಸರಿಯೇ? ಎಂದು ಪ್ರಶ್ನಿಸಿ ಕಿಡಿಕಾರಿದೆ. ಇಂತಹ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.
ಈ ಬೆಳವಣಿಗೆಯ ನಂತರ ವಿವಾದ ಹೆಚ್ಚಾದ ಹಿನ್ನೆಲೆ, ಪಾಕ್ ಸಚಿವ ಖವಾಜಾ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ತಕ್ಷಣವೇ ಅಳಿಸಿದ್ದಾರೆ.








