ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಮಂಡ್ಯ ಡಿಸಿ ಪಾಪ ಕುದುರೆ ಮೇಲೆ ಓಡಾಡ್ತಿದ್ದಾರೆ. ಡಿಸಿಯವರು ಪಾಪ ಕುದುರೆಯಿಂದ ಕೆಳಗೆ ಇಳಿಯಬೇಕಾಗುತ್ತೆ. ಇದು ಹಿಟ್ಲರ್ ರಾಜ್ಯಭಾರ ಅಲ್ಲ, ಇದು ಡೆಮಾಕ್ರಸಿ ಇರೋವಂತ ದೇಶ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಇದು ಹಿಟ್ಲರ್ ರಾಜ್ಯಭಾರ ಅಲ್ಲ, ಇದು ಡೆಮಾಕ್ರಸಿ ಇರೋವಂತ ದೇಶ. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತಮ್ಮ ವ್ಯಾಪ್ತಿಯ ಅರಿವು ಇಟ್ಕೋಬೇಕಾಗುತ್ತೆ. ಜಿಲ್ಲಾಧಿಕಾರಿ ತಮ್ಮ ಜವಾಬ್ದಾರಿ ಮರೆತಂತೆ ಕಾಣುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ಕೊಡದೆ, ಅವ್ರ ಇಚ್ಚೆ ಬಂದಂಗೆ ಮಾಡ್ತಿದ್ದಾರೆ. ಇವತ್ತು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ಯಾಮೇಜ್ ಆಗ್ಲಿಕ್ಕೆ ಡಿಸಿ ಡಾ.ಎಂ.ವಿ.ವೆಂಕಟೇಶ್ ಅವರೇ ಕಾರಣ. ಅವರ ಬೇಜಬ್ದಾರಿತನ, ಯಾರ ಸಲಹೆಯನ್ನು ಪಡೆಯದ ಕಾರಣಕ್ಕೆ ಈ ಪರಿಸ್ಥಿತಿ ಎದುರಿಸಬೇಕಾಗಿದೆ. ಕಳೆದ ಸಭೆಯಲ್ಲಿ ಕೊರೋನಾಗೆ ಬಂದ ಅನುದಾನದ ಲೆಕ್ಕ ಕೇಳಿದ್ದೆ. ಆದರೆ ಈ ಬಗ್ಗೆ ಏನನ್ನೂ ಹೇಳಿಲ್ಲ, ಲೆಕ್ಕನೂ ಕೊಟ್ಟಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ನಮಗೆ ಹೇಳಿ ನಾವು ಜನರಿಗೆ ಹೇಳಬೇಕಾಗಿದೆ ಎಂದಿದ್ದೆ.
ಡಾ.ಎಂ.ವಿ.ವೆಂಕಟೇಶ್ ಅವರು ಡಿಸಿ ಅನ್ನೋ ಕುದ್ರೆ ಹತ್ತಿ ಬಿಟ್ಟಿದ್ದಾರೆ. ಆ ಮೂಲಕ ಇರೋವಷ್ಟು ಓಡಾಡಿಕೊಂಡಿದ್ರೆ ಸಾಕು ಅನ್ನೋ ಧಾಟಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಆಯ್ಕೆಯಾಗಿರೋ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಅವರ ಇಚ್ಚೆ ಬಂದ ಹಾಗೇ ನಡೆದುಕೊಳ್ತಿದ್ದಾರೆ ಎಂದು ರವೀಂದ್ರ ಶ್ರೀಕಂಠಯ್ಯ ಗುಡುಗಿದ್ದಾರೆ.








