ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಬೆಂಗಳೂರಿನಲ್ಲಿ ಮಟನ್ ಬದಲು ದನದ ಮಾಂಸ ನೀಡುತ್ತಿದ್ದ ಹೋಟೆಲ್ ಮಾಲೀಕರು ಅಂದರ್ : 18 ತಿಂಗಳಿಂದ ಗ್ರಾಹಕರಿಗೆ ದ್ರೋಹ ಬಗೆದ ಕಾಯಲೋರಂ ರೆಸ್ಟೋರೆಂಟ್

Shwetha by Shwetha
June 1, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರಿನ ಹೊರವಲಯದಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಎಸಗಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಟನ್ ಊಟದ ಆರ್ಡರ್ ಪಡೆದು ದನದ ಮಾಂಸ ಬಡಿಸುತ್ತಿದ್ದ ಕಾಯಲೋರಂ ರೆಸ್ಟೋರೆಂಟ್ ನ ಇಬ್ಬರು ಮಾಲೀಕರನ್ನು ಆವಲಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೂದಿಗೆರೆ ಕ್ರಾಸ್ ಬಳಿಯ ಬೊಮ್ಮೇನಹಳ್ಳಿಯಲ್ಲಿರುವ ಐಸಿರಿ ಹಬ್ ನ ಈ ರೆಸ್ಟೋರೆಂಟ್ ನಲ್ಲಿ ಕಳೆದ ಒಂದೂವರೆ ವರ್ಷದಿಂದ ಗ್ರಾಹಕರಿಗೆ ಮೋಸ ಮಾಡಲಾಗುತ್ತಿತ್ತು ಎಂಬ ಆತಂಕಕಾರಿ ವಿಷಯ ತನಿಖೆಯಿಂದ ಹೊರಬಿದ್ದಿದೆ. ಮಾಲೀಕರಾದ ಜೀಜು ಮತ್ತು ಶಿಬು ಎಂಬುವವರೇ ಈ ಕೃತ್ಯ ಎಸಗಿದ ಬಂಧಿತ ಆರೋಪಿಗಳು.

Related posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

June 1, 2026
ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

June 1, 2026

ಕೆಲವು ದಿನಗಳ ಹಿಂದೆ ಯುವಕರ ತಂಡವೊಂದು ಈ ರೆಸ್ಟೋರೆಂಟ್ ಗೆ ಭೇಟಿ ನೀಡಿ ಮಟನ್ ಊಟಕ್ಕೆ ಆರ್ಡರ್ ಮಾಡಿತ್ತು. ಆದರೆ ಊಟ ಮಾಡುವಾಗ ಮಾಂಸದ ರುಚಿ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನಗೊಂಡ ಯುವಕರು ತಕ್ಷಣವೇ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಸಿಬ್ಬಂದಿಯಿಂದ ಸರಿಯಾದ ಉತ್ತರ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಆವಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅದು ಮಟನ್ ಅಲ್ಲ ಬದಲಾಗಿ ದನದ ಮಾಂಸ ಎಂಬುದು ದೃಢಪಟ್ಟಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಡಿಮೆ ದರದಲ್ಲಿ ದನದ ಮಾಂಸ ಸಿಗುತ್ತದೆ ಎಂಬ ಕಾರಣಕ್ಕೆ ಮಟನ್ ಹೆಸರಿನಲ್ಲಿ ಇದನ್ನು ಗ್ರಾಹಕರಿಗೆ ಬಡಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ಮೊದಲು ಹಲವು ಬಾರಿ ಮಟನ್ ಎಂದು ದನದ ಮಾಂಸವನ್ನೇ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಈ ಕಾನೂನುಬಾಹಿರ ಕೃತ್ಯದ ಹಿನ್ನೆಲೆಯಲ್ಲಿ ಪೊಲೀಸರು ಕೂಡಲೇ ಕಾಯಲೋರಂ ರೆಸ್ಟೋರೆಂಟ್ ಗೆ ಬೀಗ ಜಡಿದಿದ್ದಾರೆ. ಕಳೆದ 18 ತಿಂಗಳುಗಳಿಂದ ಇಲ್ಲಿ ಊಟ ಮಾಡಿದ ನೂರಾರು ಗ್ರಾಹಕರು ಈಗ ಆತಂಕಕ್ಕೊಳಗಾಗಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ShareTweetSendShare
Join us on:

Related Posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

by Shwetha
June 1, 2026
0

ರಾಜ್ಯ ರಾಜಕಾರಣದಲ್ಲಿ ಈಗ ಮಹತ್ವದ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಚುರುಕುಗೊಂಡಿದ್ದು ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

by Shwetha
June 1, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ಮಹತ್ತರ ಬದಲಾವಣೆ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅಧಿಕಾರ ಹಂಚಿಕೆಯ ಸೂತ್ರ ಅಧಿಕೃತವಾಗಿ ಜಾರಿಗೆ ಬಂದಿದ್ದು ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಬಂಗಲೆ ಖಾಲಿ ಮಾಡಿ; ತಾಕತ್ತಿದ್ದರೆ ನನ್ನನ್ನು ಬಲವಂತವಾಗಿ ಹೊರಹಾಕಲಿ ನೋಡೋಣ : ಬಿಹಾರ ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ರಾಬ್ಡಿ ದೇವಿ ಬಹಿರಂಗ ಸವಾಲು

by Shwetha
June 1, 2026
0

ಬಿಹಾರ ರಾಜಕಾರಣದಲ್ಲಿ ಈಗ ಬಂಗಲೆ ವಾರ್ ತಾರಕಕ್ಕೇರಿದೆ. ಕಳೆದ ಎರಡು ದಶಕಗಳಿಂದ ಲಾಲು ಪ್ರಸಾದ್ ಯಾದವ್ ಕುಟುಂಬದ ರಾಜಕೀಯ ಶಕ್ತಿ ಕೇಂದ್ರವಾಗಿದ್ದ 10 ಸರ್ಕ್ಯುಲರ್ ರಸ್ತೆಯ ಬಂಗಲೆಯನ್ನು...

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

​ಜಾತಿ ಲೆಕ್ಕಾಚಾರ, ಸಂಪುಟದಲ್ಲಿ ಚದುರಂಗದಾಟ: ಡಿ.ಕೆ. ಶಿವಕುಮಾರ್ ಸಂಪುಟದ 14 ಸಂಭಾವ್ಯ ಸಚಿವರ ಯಾರು ಗೊತ್ತಾ?

by Shwetha
June 1, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಈಗ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ವಲಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗಳು ಈಗ ಒಂದು ತಾರ್ಕಿಕ ಅಂತ್ಯಕ್ಕೆ ಬಂದಂತೆ...

ದಿನ ಭವಿಷ್ಯ (25-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (01-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 1, 2026
0

ದಿನ ಭವಿಷ್ಯ : 01-06-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹದಾಯಕ ದಿನವಾಗಲಿದೆ. ಚಂದ್ರನ ಅನುಕೂಲಕರ ಸ್ಥಾನದಿಂದಾಗಿ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡಲಿವೆ. ಉದ್ಯೋಗ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram