ಟೀಮ್ ಇಂಡಿಯಾದ ಟಿ-20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಯ್ಯರ್ 15 ಆಟಗಾರರನ್ನೊಳಗೊಂಡ ಯಂಗ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ತಿಲಕ್ ವರ್ಮಾ ಉಪನಾಯಕನಾಗಿದ್ದಾರೆ.
ಈ ಮೂಲಕ ಸೂರ್ಯ ಕುಮಾರ್ ಭಾರತದ ಟಿ-20 ತಂಡದಿಂದ ಹೊರಬಿದ್ದಿದ್ದಾರೆ.ಕಳೆದ 18 ತಿಂಗಳಿಂದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಕಳಪೆ ಫಾರ್ಮ್ ಹಾಗೂ ಗಾಯದ ನೆಪವೊಡ್ಡಿ ಟಿ-20 ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅಲ್ಲದೆ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ಟಿ-20 ಏಷ್ಯಾ ಕಪ್ ಹಾಗೂ ವಿಶ್ವಕಪ್ ಗೆದ್ದ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದ ಸೂರ್ಯ ಕುಮಾರ್ ಯಾದವ್ ಕಳೆದ ಐಪಿಎಲ್‍ನಲ್ಲೂ ಮಂಕಾಗಿದ್ದಾರೆ. ಹೀಗಾಗಿ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.
31ರ ಹರೆಯದ ಶ್ರೇಯಸ್ ಅಯ್ಯರ್ ಇದೀಗ ಟೀಮ್ ಇಂಡಿಯಾದ ಟಿ-20 ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಅನುಭವಿ ಆಟಗಾರನಾಗಿರುವ ಅಯ್ಯರ್ ಐಪಿಎಲ್‍ನಲ್ಲಿ ಮೂರು ಫ್ರಾಂಚೈಸಿಗಳ ನಾಯಕನಾಗಿದ್ದರು. ಅಲ್ಲದೆ ಮೂರು ಬಾರಿ ತಂಡವನ್ನು ಫೈನಲ್‍ಗೆ ತಲುಪಿಸಿದ್ದು, ಒಂದು ಬಾರಿ ಚಾಂಪಿಯನ್‍ಪಟ್ಟಕ್ಕೇರಿಸಿದ್ದರು. ಟೀಮ್ ಇಂಡಿಯಾದ ಟಿ-20 ತಂಡದಲ್ಲಿ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಐರ್ಲೆಂಡ್ ವಿರುದ್ಧ ಜೂನ್ 26 ಮತ್ತು 28ರಂದು ಎರಡು ಟಿ-20 ಪಂದ್ಯಗಳನ್ನು ಆಡಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಸೆಪ್ಟಂಬರ್‍ನ್ಲಿ ಏಷ್ಯನ್ ಗೇಮ್ಸ್‍ನಲ್ಲೂ ಟೀಮ್ ಇಂಡಿಯಾ ಭಾಗವಹಿಸಲಿದೆ.
ಹಾಗೇ ಭಾರತದ ಎಐ ಬಾಲಕ ವೈಭವ್ ಸೂರ್ಯವಂಶಿ ಇದೇ ಮೊದಲ ಬಾರಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ಹೆಸರಿನಲ್ಲಿತ್ತು
ಟೀಮ್ ಇಂಡಿಯಾದ ಟಿ-20 ತಂಡ
ಶ್ರೇಯಸ್ ಅಯ್ಯರ್ (ನಾಯಕ) ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶಾನ್, ಸಂಜು ಸ್ಯಾಮನ್ಸ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಸ್ನೋಯಿ, ಮಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಆರ್ಶಾದೀಪ್ ಸಿಂಗ್, ಪ್ರಿನ್ಸ್ ಯಾದವ್.







