ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಕುರುಡು ಕಾಂಚಾಣದ ನಡುವೆ “ಮನರಂಜನಾ ಪ್ರಾಡಕ್ಟ್” ಆಯ್ತಾ ಐಪಿಎಲ್..!

admin by admin
June 8, 2026
in Sports, ಕ್ರಿಕೆಟ್
Kolkata Knight Riders (KKR) leads the 2026 IPL franchise valuations

Kolkata Knight Riders (KKR) leads the 2026 IPL franchise valuations

Share on FacebookShare on TwitterShare on WhatsappShare on Telegram

ನಿಜ.. ಇದು ಗೊತ್ತಿರುವ ವಿಚಾರವೇ. ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ನೋಡುವುದಕ್ಕೆ ಮಾತ್ರ ಕ್ರಿಕೆಟ್ ಆಟ. ಆದ್ರೆ ಚೆಲ್ಲಾಟವಾಡುತ್ತಿರುವುದು ಬರೀ ದುಡ್ಡು… ದುಡ್ಡು..ದುಡ್ಡು..!

ಮೈದಾನ ಕ್ಲೀನ್ ಮಾಡುವ ಕಾರ್ಮಿಕನಿಂದ ಹಿಡಿದು ಐಪಿಎಲ್ ಫ್ರಾಂಚೈಸಿ ಮಾಲೀಕರ ತನಕ ಪ್ರತಿ ಹಂತದಲ್ಲೂ ಹರಿಯುತ್ತಿರುವುದು ಕುರುಡು ಕಾಂಚಾಣ. ಬೌಲರ್‍ಗಳ ಮಾರಣ ಹೋಮ.. ಬ್ಯಾಟರ್‍ಗಳ ಸಿಡಿಲಬ್ಬರÀ, ಅಭಿಮಾನಿಗಳ ಝೆಂಕಾರದ ನಡುವೆ ನಡೆಯುತ್ತಿರುವುದು ಸಾವಿರಾರು ಕೋಟಿಗಳ ವಹಿವಾಟು.
ಆಟಗಾರರಿಗೆ ಅವಕಾಶ, ಅಭಿಮಾನಿಗಳಿಗೆ ಜಾತ್ರೆ, ಜಾಹೀರಾತು ಲೋಕದಲ್ಲಿ ಪೈಪೋಟಿ, ಫ್ರಾಂಚೈಸಿ ಮಾಲೀಕರಿಗೆ ಗೌರವ, ಬಿಸಿಸಿಐಗೆ ಪ್ರತಿಷ್ಠೆಯ ಕಣವಾಗಿದೆ ಇಂಡಿಯನ್ ಪ್ರೀಮಿಯರ್ ಲೀಗ್.

Related posts

aditya-patnaik-wins-gold-vios-championship-at-sepang-circuit

ರಾಷ್ಟ್ರೀಯ ಚಾಂಪಿಯನ್‌ ಆದಿತ್ಯನಿಗೆ ಅಂ.ರಾ. ರೇಸಿಂಗ್‌ನಲ್ಲಿ ಮೊದಲ ಜಯ!

July 27, 2026
jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

July 26, 2026

ಕಳೆದ 19 ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ ಒಟ್ಟು 1252 ಪಂದ್ಯಗಳನ್ನು ಆಡಲಾಗಿದೆ. ಒಟ್ಟು ದಾಖಲಾದ ರನ್‍ಗಳು ನಾಲ್ಕು ಲಕ್ಷಕ್ಕಿಂತಲೂ ಅಧಿಕ. ಸಿಡಿದ ಬೌಂಡರಿಗಳ ಸಂಖ್ಯೆ ಅಂದಾಜು 31,000. ಕುಣಿದು ಕುಪ್ಪಳಿಸುವಂತೆ ಮಾಡಿರುವ ಸಿಕ್ಸರ್‍ಗಳು 14,000ಕ್ಕೂ ಹೆಚ್ಚು. ಬಿದ್ದಿರುವ ವಿಕೆಟ್‍ಗಳು 13,000ಕ್ಕೂ ಜಾಸ್ತಿ. (ಇದು ಅಂದಾಜು ಲೆಕ್ಕ)

ಪ್ರತಿ ರನ್, ಪ್ರತಿ ಎಸೆತ, ಪ್ರತಿ ಬೌಂಡರಿ, ಪ್ರತಿ ಸಿಕ್ಸರ್, ಪ್ರತಿ ವಿಕೆಟ್ ಹೀಗೆ ಮೂರುವರೆ ಗಂಟೆಗಳ ಮಾಯಲೋಕದ ಕ್ರಿಕೆಟ್ ಪಂದ್ಯವನ್ನು ನೋಡುತ್ತಿದ್ದಾಗ ನಮಗೆ ಗೊತ್ತಿಲ್ಲದೆ ನಮ್ಮ ಜೇಬಿನ ಹಣ ಸೀದಾ ಹೋಗಿ ಬೀಳುವುದು ಐಪಿಎಲ್ ಎಂಬ ಹುಂಡಿಗೆ. ಆದ್ರೆ ಇದೇ ಐಪಿಎಲ್ ಟೂರ್ನಿ ಸಾವಿರಾರು ಜನರ ಬದುಕನ್ನು ಕಟ್ಟಿಕೊಡುತ್ತಿದೆ ಎಂಬುದು ಕೂಡ ಅಷ್ಟೇ ಸತ್ಯ.

ಹೌದು, ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಅನ್ನು ಉತ್ತುಂಗಕ್ಕೇರಿಸಿದೆ. ಅಲ್ಲದೆ ಕ್ರಿಕೆಟ್ ಜಗತ್ತನ್ನೇ ತನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಕೂಡ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಯುವ ಆಟಗಾರರ ಪ್ರತಿಭೆಯನ್ನು ವಿಶ್ವ ಕ್ರಿಕೆಟ್‍ಗೆ ಪರಿಚಯಿಸಿದೆ. ಬಡತನದ ಬೇಗೆಯಲ್ಲಿದ್ದ ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿಗೆ ಸಂಜೀವಿನಿಯೂ ಆಗಿದೆ. ಹಾಗೇ ಫ್ರಾಂಚೈಸಿ ಮಾಲೀಕರು ಹಾಕಿರುವ ದುಡ್ಡು ಕೂಡ ದುಪ್ಪಟ್ಟು ಆಗಿದೆ. (ಕೆಲವೊಂದು ಫ್ರಾಂಚೈಸಿ ಬಿಟ್ಟು)

ಇದೀಗ 2026ನೇ ಸಾಲಿನ ಐಪಿಎಲ್ ಫ್ರಾಂಚೈಸಿಗಳ ಮೌಲ್ಯ ಮಾಪನ ಹೊರಬಿದ್ದಿದೆ. ಫ್ಯಾನಾಟಿಕ್ ಸ್ಫೋಟ್ರ್ಸ್ ಹುರುನ್ ಇಂಡಿಯಾ ಮೋಸ್ಟ್ ವ್ಯಾಲ್ಯೂಯಬಲ್ ಸ್ಪೋಟ್ಸ್ ಟೀಮ್ಸ್‍ನ ವರದಿಯ ಪ್ರಕಾರ, ಶಾರೂಕ್ ಖಾನ್ ಒಡೆತದನ ಕೊಲ್ಕತ್ತಾ ನೈಟ್ ರೈಡರ್ಸ್ ಅಗ್ರಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಾರಣ ಜಾಗತಿಕ ಬಂಡವಾಳ ವಿಸ್ತರಣೆ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಬಲವಾದ ಉಪಸ್ಥಿತಿ. ಕೆಕೆಆರ್ ತಂಡದ ಒಟ್ಟು ಮೌಲ್ಯ 19,200 – 22,500 ಕೋಟಿ.

ಇನ್ನು 2ನೇ ಸ್ಥಾನದಲ್ಲಿದೆ ಮುಂಬೈ ಇಂಡಿಯನ್ಸ್. ಐದು ಬಾರಿ ಚಾಂಪಿಯನ್ ಎಂಬ ಹೆಮ್ಮೆಯ ಜೊತೆಗೆ ರಿಲಯನ್ಸ್ ಸಂಸ್ಥೆಯ ಬ್ರ್ಯಾಂಡ್‍ನಿಂದಾಗಿ 18,400-21,700 ಕೋಟಿ ಮೌಲ್ಯವನ್ನು ಹೊಂದಿದೆ. ಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಸ್ಥಾನ ಪಡೆದುಕೊಂಡಿದೆ. ಎಂ.ಎಸ್. ಧೋನಿ ಮತ್ತು ಬ್ರ್ಯಾಂಡ್ ನಿಷ್ಠೆಯ ಪರಿಣಾಮ ಸಿಎಸ್‍ಕೆ 18,400 – 20,700 ಕೋಟಿ ವ್ಯಾಲ್ಯೂ ಅನ್ನು ಹೊಂದಿದೆ. ಸನ್ ರೈಸರ್ಸ್ ಹೈದ್ರಬಾದ್ ತಂಡ 17,500-18,400 ಕೋಟಿಯ ಮೌಲ್ಯವನ್ನು ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ.

ಆದ್ರೆ ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಆರ್‍ಸಿಬಿ ಐದನೇ ಸ್ಥಾನದಲ್ಲಿದೆ. ಸರಿಸಾಟಿ ಇಲ್ಲದ ಜಾಗತಿಕ ಬ್ರ್ಯಾಂಡ್ ಮತ್ತು ವಿರಾಟ್ ಕೊಹ್ಲಿಯ ಪವರ್‍ನಿಂದ ಆರ್‍ಸಿಬಿ 16,700 ಕೋಟಿ ಮೌಲ್ಯವನ್ನು ಹೊಂದಿದೆ. ದೆಹಲಿ ಕ್ಯಾಪಿಟಲ್ಸ್ ತಂಡ 16,600 -17,700 ಕೋಟಿ ಮೌಲ್ಯ ಹೊಂದಿದ್ರೆ, ರಾಜಸ್ತಾನ ರಾಯಲ್ಸ್ 15,700 ಕೋಟಿ, ಗುಜರಾತ್ ಟೈಟಾನ್ಸ್ 14,00 -15,800 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ ತಂಡ 14,00-15,600 ಕೋಟಿ, ಪಂಜಾಬ್ ಕಿಂಗ್ಸ್ 12,700=15,400 ಕೋಟಿ ಮೌಲ್ಯವನ್ನು ಹೊಂದಿದೆ.
ಇನ್ನು ಆಟಗಾರನಾಗಿ ವಿರಾಟ್ ಕೊಹ್ಲಿ ಕಳೆದ 19 ಆವೃತ್ತಿಯ ಐಪಿಎಲ್‍ಗಳಿಂದ ಒಟ್ಟು 230 ಕೋಟಿ ಸಂಪಾದಿಸಿದ್ದಾರೆ. ಹಾಗೇ ರೋಹಿತ್ ಶರ್ಮಾ 227.2 ಕೋಟಿ ಹಾಗೂ ಮಹೇಂದ್ರ ಸಿಂಗ್ ಧೋನಿ 200 ಕೋಟಿ ಗಳಿಸಿದ್ದಾರೆ.
ಒಟ್ಟಾರೆ ಐಪಿಎಲ್‍ನಿಂದ ಬಿಸಿಸಿಐ ಮಾತ್ರ ಶ್ರೀಮಂತವಾಗಿಲ್ಲ. ಫ್ರಾಂಚೈಸಿ ಮಾಲೀಕರ ಜೇಬನ್ನು ತುಂಬಿಸಿದೆ. ಅದೇ ರೀತಿ ಆಟಗಾರರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸಿದೆ.

ಇದೆಲ್ಲಾ ಏನೇ ಇರಲಿ, ಒಂದಂತೂ ಸತ್ಯ. ಅತಿರೇಕದ ಕ್ರಿಕೆಟ್, ಕೇವಲ ಹಣದ ಅಬ್ಬರದಲ್ಲಿ ಅಸಲಿ ಆಟವನ್ನೇ ಕಳೆದುಕೊಳ್ಳುತ್ತಿದೆ. ಯಾಕಂದ್ರೆ ಟಿ-20 ಕ್ರಿಕೆಟ್ ಅನ್ನೋದು ಆಟದ ಬದಲು ಮನರಂಜನಾ ಪ್ರಾಡಕ್ಟ್ ಆಗಿದೆ.

ಸನತ್ ರೈ

Tags: #ipl2026#iplcricket#mubaiindianscskkkrKolkata Knight RidersRCB
ShareTweetSendShare
Join us on:

Related Posts

aditya-patnaik-wins-gold-vios-championship-at-sepang-circuit

ರಾಷ್ಟ್ರೀಯ ಚಾಂಪಿಯನ್‌ ಆದಿತ್ಯನಿಗೆ ಅಂ.ರಾ. ರೇಸಿಂಗ್‌ನಲ್ಲಿ ಮೊದಲ ಜಯ!

by admin
July 27, 2026
0

- ಮಲೇಷ್ಯಾದ ಸೆಪಾಂಗ್‌ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ ಗೆದ್ದ ಭಾರತದ ಯುವ ರೇಸರ್‌ ಆದಿತ್ಯ ಪಟ್ನಾಯಕ್‌ - ಗೋಲ್ಡ್ ವಿಯೊಸ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಮುಂಬೈ ಯುವ...

jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

by admin
July 26, 2026
0

ಎದೆತುಂಬಿ ಹೇಳಿರುವೆ...ಪ್ರೀತಿಯಿಂದ ಬರೆದಿರುವೆ... ಮನವಿಟ್ಟು ಓದಿ... ಇದು ನನ್ನ ಅಂತರಾಳದ ಮಾತು..! ಬಹುಶಃ ಅಂದು ನನಗೆ ನಾಲ್ಕೈದು ವರ್ಷ. ಎಲ್ಲ ಮಕ್ಕಳಂತೆ ಓಡಾಡಿಕೊಂಡು ನಾನು ಆಟವಾಡುತ್ತಿದ್ದೆ. ಆದ್ರೆ...

devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

by admin
July 25, 2026
0

ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..? ಸಮಚರಣ ಸರೋಜಂ ಸಾಂದ್ರನೀಲಾಂಮುದಾಭಂ ಜಘನ ನಿಹಿತಪಾಣಿಂ ಮಂಡನಂ ಮಂಡನಾನಾಂ || ತರುಣ ತುಳಸೀಮಾಲಾಕಂಧರಂ ಕಂಜನೇತ್ರಂ...

sindhushree-ganesh-pole-vault-national-record-karnataka-sports

Sindhushree- ಬಡತನದಲ್ಲಿ ಅರಳಿದ ಪ್ರತಿಭೆ….! ಬಾಣದಂತೆ ಚಿಮ್ಮುವ ಈ ತರುಣಿ ಯಾರು..?

by admin
July 25, 2026
0

ಈಕೆಯ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ,...

The King of Branding: How David Beckham Built an Empire Beyond Football!

David Beckham – ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!

by admin
July 23, 2026
0

 ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!  ಆತ ಫುಟ್‍ಬಾಲ್ ಮೈದಾನದಲ್ಲಿ ಕಾಮನಬಿಲ್ಲಿನಂತೆ ಚಿತ್ತಾರ ಬಿಡಿಸುತ್ತಿದ್ದ ಕಲೆಗಾರ. ಕಾಲಿನ ಸ್ಪರ್ಶದಿಂದಲೇ ಚೆಂಡನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram