ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

Shwetha by Shwetha
June 11, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ ಆಡಳಿತದ 12 ವರ್ಷಗಳಲ್ಲಿ ಅವರ 12 ಸಾಧನೆಗಳನ್ನು ಹೇಳಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸ್ಮಾರ್ಟ್ ಸಿಟಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಜಲ ಜೀವನ್ ಮಿಷನ್ ಸೇರಿದಂತೆ ಮೋದಿಯವರ ಎಲ್ಲ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿವೆ’ ಎಂದು ಟೀಕಿಸಿದರು.

Related posts

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

June 11, 2026
ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರು ಯೋಜನೆಯಿಂದ ಹೊರಕ್ಕೆ; ಸಾವಿರಾರು ಅನರ್ಹರ ಹೆಸರು ಕೈಬಿಟ್ಟ ಸರ್ಕಾರ

June 11, 2026

ದೇಶದ ಆರ್ಥಿಕ ಸ್ಥಿತಿ ಹೇಗಿದೆ?, ರೂಪಾಯಿ ಮೌಲ್ಯ ಎಷ್ಟು ಮೊತ್ತದ ಕುಸಿತ ಆಗಿದೆ. ಅಡುಗೆ ಅನಿಲ, ವಾಣಿಜ್ಯ ಸಿಲಿಂಡರ್‍ನ ಬೆಲೆ ಎಷ್ಟು ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಎಲ್ಲಿಗೆ ಹೋಗಿ ಮುಟ್ಟಿದೆ ಎಂಬುದನ್ನು ಹೇಳಬೇಕು. ಅದು ಬಿಟ್ಟು ಯಾವ ಪುರುಷಾರ್ಥಕ್ಕೆ ನೆಹರೂ ಅವರೊಂದಿಗೆ ಮೋದಿಯನ್ನು ಹೋಲಿಕೆ ಮಾಡಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ನೆಹರೂ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಎಲ್ಲಿತ್ತು. ಅವರ ಈ ದೇಶದಲ್ಲಿ ಎಷ್ಟು ಅಣೆಕಟ್ಟೆಗಳನ್ನು ನಿರ್ಮಿಸಿದರು. ಶೈಕ್ಷಣಿಕ ಉನ್ನತಿ ಮತ್ತು ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಎಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದರು ಎಂಬುದು ಮುಖ್ಯ. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಯಾವ ಅಣೆಕಟ್ಟನ್ನು ನಿರ್ಮಿಸಿದರು. ಮೋದಿ 12 ವರ್ಷದ ಆಡಳಿತದಲ್ಲಿ ಬರೀ ವೈಫಲ್ಯಗಳೇ ಹೆಚ್ಚಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ನೋಂದಣಿಗೆ ಭಯ ಏಕೆ?: ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸೆಸ್ಸ್)ದವರು ತಮ್ಮ ಸಂಘಟನೆ ನೋಂದಣಿ ಮಾಡಿಕೊಳ್ಳಲು ಏಕೆ ಭಯ ಪಡುತ್ತಿದ್ದಾರೆ. ‘ಯಾವುದೇ ಸರಕಾರಿ ಸಂಸ್ಥೆಗೆ ಉತ್ತರ ಕೊಡುವಂತಿಲ್ಲ, ನಮಗೆ ಯಾವುದೇ ಸಂವಿಧಾನ, ಕಾನೂನು ಅನ್ವಯವಾಗುವುದಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಪ್ರತಿನಿತ್ಯ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳು ಕೂಡ ನೋಂದಣಿ ಮಾಡಿಕೊಳ್ಳುತ್ತಾರೆ. ದೇವಸ್ಥಾನದ ದೇಣಿಗೆಯ ಲೆಕ್ಕವನ್ನೂ ಕೊಡಲಾಗುತ್ತದೆ. ಆರೆಸ್ಸೆಸ್‌ ನವರು ಆದಾಯ ತೆರಿಗೆ ಇಲಾಖೆ (ಐಟಿ)ಗೆ ಲೆಕ್ಕ ಕೊಡಬಾರದೇ?. ಪರಿಷತ್ ಸದಸ್ಯ ಸಿ.ಟಿ.ರವಿಗೆ ತಮ್ಮ ಇತಿಹಾಸ ಗೊತ್ತಿಲ್ಲ. ಮೊದಲು ಅವರು ತಮ್ಮ ಇತಿಹಾಸವನ್ನು ಅರಿತುಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.

ShareTweetSendShare
Join us on:

Related Posts

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

by Shwetha
June 11, 2026
0

ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಬೃಹತ್ ಸಂಚಲನವೊಂದು ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಶ್ಚಿಮ ಬಂಗಾಳದ ಅಧಿಪತಿ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರು ಯೋಜನೆಯಿಂದ ಹೊರಕ್ಕೆ; ಸಾವಿರಾರು ಅನರ್ಹರ ಹೆಸರು ಕೈಬಿಟ್ಟ ಸರ್ಕಾರ

by Shwetha
June 11, 2026
0

ರಾಜ್ಯದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಾವಿರಾರು ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ...

ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಬೆಂಗಳೂರಿನಲ್ಲಿ ಆಡಳಿತ ದೆಹಲಿಯಲ್ಲಿ ತೀರ್ಮಾನ: ಡಿಕೆಶಿ ಸರ್ಕಾರಕ್ಕೆ ಹೈಕಮಾಂಡ್ ಹಾಕಿದೆಯೇ ಲಗಾಮು? ಸಿದ್ದರಾಮಯ್ಯ ಅವಧಿಯಲ್ಲಿದ್ದ ಸ್ವಾತಂತ್ರ್ಯ ಈಗಿಲ್ಲವೇಕೆ?

by Shwetha
June 11, 2026
0

ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಈಗ ಹೊಸ ಶಕ್ತಿ ಸಮೀಕರಣವೊಂದು ಮುನ್ನೆಲೆಗೆ ಬಂದಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯೂ ದೆಹಲಿಯಿಂದಲೇ ನಿಯಂತ್ರಿಸಲ್ಪಡುತ್ತಿದೆಯೇ ಎಂಬ ಅನುಮಾನ ರಾಜಕೀಯ...

ಕೇಶವಕೃಪಕ್ಕೆ ಬರಲು ನಾನು ಸಿದ್ಧ, ತಾಕತ್ತಿದ್ದರೆ ನೋಂದಣಿ ದಾಖಲೆ ತೋರಿಸಿ: ಸಂಘಕ್ಕೆ ಪ್ರಿಯಾಂಕ್‌ ಖರ್ಗೆ ಓಪನ್ ಚಾಲೆಂಜ್

ಕೇಶವಕೃಪಕ್ಕೆ ಬರಲು ನಾನು ಸಿದ್ಧ, ತಾಕತ್ತಿದ್ದರೆ ನೋಂದಣಿ ದಾಖಲೆ ತೋರಿಸಿ: ಸಂಘಕ್ಕೆ ಪ್ರಿಯಾಂಕ್‌ ಖರ್ಗೆ ಓಪನ್ ಚಾಲೆಂಜ್

by Shwetha
June 11, 2026
0

ಬೆಂಗಳೂರು: ಆರ್‌ಎಸ್‌ಎಸ್‌ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಇತಿಹಾಸವನ್ನು...

ರಾಜ್ಯಸಭಾ ಟಿಕೆಟ್ ಮಿಸ್; ಹೆಚ್‌ಡಿ ದೇವೇಗೌಡರು ಹೇಳಿದ್ದೇನು?

ರಾಜ್ಯಸಭಾ ಟಿಕೆಟ್ ಮಿಸ್; ಹೆಚ್‌ಡಿ ದೇವೇಗೌಡರು ಹೇಳಿದ್ದೇನು?

by Shwetha
June 11, 2026
0

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ರಾಜ್ಯಸಭೆಗೆ ಮರುನಾಮನಿರ್ದೇಶನಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧವು ಯಾವುದೇ ಹುದ್ದೆ ಅಥವಾ ರಾಜ್ಯಸಭಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram