ADVERTISEMENT
Saturday, June 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಶ್ವಕಪ್ ಫುಟ್ಬಾಲ್ ಚೆಂಡಿನ ರೋಚಕ ಕಥೆ ಏನು ಗೊತ್ತಾ ?

admin by admin
June 13, 2026
in Newsbeat, Sports, ಕ್ರೀಡೆ
Do you know the exciting story of the World Cup football?

Do you know the exciting story of the World Cup football?

Share on FacebookShare on TwitterShare on WhatsappShare on Telegram

ವಿಶ್ವಕಪ್ ಫುಟ್‍ಬಾಲ್. ಆಟಗಾರನ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಅಳೆದು ತೂಗುವಂತಹ ಆಟ. ಕಾಲ್ಚೆಂಡಿನ ಕರಾಮತ್ತಿನ ಈ ಆಟದಲ್ಲಿ ಫುಟ್‍ಬಾಲ್ (ಚೆಂಡು) ಕೂಡ ಅμÉ್ಟೀ ಮಹತ್ವವನ್ನು ಪಡೆದುಕೊಂಡಿದೆ. ಪ್ರತಿಷ್ಠಿತ ಕಂಪೆನಿಗಳು ಬಾಲ್ ಅನ್ನು ಸಿದ್ಧಪಡಿಸಲು ಪೈಪೆÇೀಟಿ ನಡೆಸುತ್ತಿವೆ. ಅಲ್ಲದೆ ಪ್ರತಿμÉ್ಠಯನ್ನು ಹೆಚ್ಚಿಸಿಕೊಳ್ಳಲು ಸಹ ಫುಟ್‍ಬಾಲ್ ವಿಶ್ವಕಪ್ ಟೂರ್ನಿಯನ್ನು ಅವಲಂಬನೆ ಮಾಡಿಕೊಳ್ಳುತ್ತಿವೆ. ವೈಜ್ಞಾನಿಕ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶ್ವಕಪ್ ಫುಟ್‍ಬಾಲ್ ಟೂರ್ನಿಯ ಚೆಂಡನ್ನು ಸಿದ್ಧಪಡಿಸಲಾಗುತ್ತಿದೆ.
ಅಂದ ಹಾಗೇ, ವಿಶ್ವಕಪ್ ಫುಟ್‍ಬಾಲ್ ಚೆಂಡಿಗೂ ಒಂದು ಇತಿಹಾಸವಿದೆ. 1930ರಿಂದ ಇಲ್ಲಿಯವರೆಗೆ ಪ್ರತಿ ಟೂರ್ನಿಗಳಿಗೂ ವಿಭಿನ್ನವಾದ ಚೆಂಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕಾಲಕ್ಕೆ ತಕ್ಕಂತೆ ಚೆಂಡಿನ ವಿನ್ಯಾಸ, ಗುಣಮಟ್ಟ ಹಾಗೂ ತಾಂತ್ರಿಕತೆಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಅದ್ರಲ್ಲೂ ಆಡಿಡಾಸ್ ಕಂಪೆನಿಯು 1970ರಿಂದ ಆಡಿಡಾಸ್ ಕಂಪೆನಿಯೇ ವಿಶ್ವಕಪ್ ಟೂರ್ನಿಗೆ ಚೆಂಡನ್ನು ವಿನ್ಯಾಸಗೊಳಿಸುತ್ತಿದೆ.

2018ರ ರ ವಿಶ್ವಕಪ್  ಫುಟ್‍ಬಾಲ್ ಚೆಂಡು
2018ರ ರ ವಿಶ್ವಕಪ್ ಫುಟ್‍ಬಾಲ್ ಚೆಂಡು ಅನ್ನು ಆಡಿಡಾಸ್ ಕಂಪೆನಿಯು ಸಿದ್ಧಪಡಿಸಿದೆ. ಈ ಚೆಂಡಿಗೆ ಆಡಿಡಾಸ್ ಟೆಲ್‍ಸ್ಟಾರ್ 18 ಎಂದು ಹೆಸರಿಟ್ಟಿದೆ.  1970ರಲ್ಲಿ ಟೆಲ್‍ಸ್ಟರ್ ಚೆಂಡನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಅದೇ ಚೆಂಡಿನ ವಿನ್ಯಾಸದಲ್ಲಿ ಬದಲಾವಣೆ ಮಾಡಿರುವ ಆಡಿಡಾಸ್ ಕಂಪೆನಿಯು ಆಡಿಡಾಸ್ ಟೆಲ್‍ಸ್ಟರ್ -18 ಎಂದು ಮರುನಾಮಕರಣ ಮಾಡಿದೆ. ಹಾಗೇ ಫೈನಲ್ ಪಂದ್ಯಕ್ಕೆ ವಿಶೇಷವಾಗಿ ವಿನ್ಯಾಸ ಮಾಡಿರುವ ಚೆಂಡನ್ನು ಕೂಡ ಆಡಿಡಾಸ್ ಕಂಪೆನಿ ತಯಾರು ಮಾಡಿದೆ.

Related posts

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

June 13, 2026
ಇಬ್ಬರು ಲೇಡಿ ಸಿಂಗಂಗಳಿಗೆ ಸುಪ್ರೀಂ ಕೋರ್ಟ್ ಶಾಕ್: ಕೆರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್!

ಇಬ್ಬರು ಲೇಡಿ ಸಿಂಗಂಗಳಿಗೆ ಸುಪ್ರೀಂ ಕೋರ್ಟ್ ಶಾಕ್: ಕೆರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್!

June 13, 2026

2014ರ ಬ್ರೇಜಿಲ್ ವಿಶ್ವಕಪ್ ಫುಟ್‍ಬಾಲ್ ಚೆಂಡು
2014ರ ಬ್ರೇಜಿಲ್ ವಿಶ್ವಕಪ್ ಫುಟ್‍ಬಾಲ್ ಟೂರ್ನಿಗೂ ಆಡಿಡಾಸ್ ಕಂಪೆನಿಯ ಚೆಂಡನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಬ್ರೆಝುಕಾ ವಿಶ್ವಕಪ್ ಬಾಲ್ ಅಂತ ಮೊದಲು ಸಿದ್ಧಪಡಿಸಿದ್ರೂ ಬಳಿಕ ಬ್ರೇಝೂಕಾ ಫೈನಲ್ ರಿಯೋ ಅಂತ ಎರಡನೇ ಬಾರಿ ಚೆಂಡನ್ನು ಸಿದ್ದಪಡಿಸಲಾಯಿತ್ತು. ಬ್ರೇಜಿಲ್ ದೇಶದ ಬದುಕಿನ ಚಿತ್ರಣವನ್ನು ಅನಾವರಣಗೊಳಿಸುವಂತಹ ಪ್ರಯತ್ನ ಈ ಚೆಂಡಿನಲ್ಲಿ ವಿನ್ಯಾಸ ಮಾಡಲಾಗಿತ್ತು. ಗ್ರೀನ್, ಗೋಲ್ಡ್ ಮತ್ತು ಬ್ಲ್ಯಾಕ್ ಕಲರ್‍ನೊಂದಿಗೆ ಆಡಿಡಾಸ್ ಕಂಪೆನಿಯು ಚೆಂಡನ್ನು ತಯಾರು ಮಾಡಿತ್ತು. ಅಲ್ಲದೆ ಇದು ಆಡಿಡಾಸ್ ಕಂಪೆನಿಯ ಅತ್ಯದ್ಭುತ ವಿನ್ಯಾಸದ ಚೆಂಡು ಎಂಬ ಹೆಗ್ಗಳಿಕೆಗೂ ಪಡೆದುಕೊಂಡಿದೆ.

2010ರ ದಕ್ಷಿಣ ಆಫ್ರಿಕಾ ವಿಶ್ವಕಪ್ ಫುಟ್‍ಬಾಲ್ ಚೆಂಡು
2010ರ ದಕ್ಷಿಣ ಆಫ್ರಿಕಾ ವಿಶ್ವಕಪ್ ಫುಟ್‍ಬಾಲ್ ಟೂರ್ನಿಗೆ ಆಡಿಡಾಸ್ ಜಬುಲಾನಿ, ಆಡಿಡಾಸ್ ಜೊ ಬುಲಾನಿ ಅಂತ ಹೆಸರಿಡಲಾಗಿತ್ತು. ಜಬುಲಾನಿ ಅಂದ್ರೆ ಸಂಭ್ರಮ. ಸೆಲೆಬ್ರೆಷನ್. ಆದ್ರೆ ಈ ಚೆಂಡು ಸಾಕಷ್ಟು ವಿವಾದವನ್ನು ಸೃಷ್ಠಿಸಿತ್ತು. ಆಟಗಾರರು ಮತ್ತು ಕೋಚ್‍ಗಳು ಚೆಂಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಂಬರ್11ರ ಸಂಖ್ಯೆಯನ್ನಿಟ್ಟುಕೊಂಡು ಈ ಚೆಂಡಿನ ವಿನ್ಯಾಸವನ್ನು ಮಾಡಲಾಗಿದೆ. 11 ಬಣ್ಣದಲ್ಲಿ ಮೂಡಿ ಬಂದಿರಿವ ಈ ಚೆಂಡು ತಂಡದ 11 ಆಟಗಾರರನ್ನು ಪ್ರತಿನಿಧಿಸುವಂತೆ ವಿನ್ಯಾಸ ಮಾಡಲಾಗಿದೆ. ಹಾಗೇ ನಂಬರ್ 11 ದಕ್ಷಿಣ ಆಫ್ರಿಕಾದ ಅಧಿಕೃತ ಭಾμÉ ಹಾಗೂ ದಕ್ಷಿಣ ಆಫ್ರಿಕಾದ 11 ಸಮುದಾಯಗಳನ್ನು ಈ ಚೆಂಡು ಪ್ರತಿನಿಧಿಸುವಂತೆ ಡಿಸೈನ್ ಮಾಡಲಾಗಿದೆ.

2006ರ ಜರ್ಮನಿ ವಿಶ್ವಕಪ್ ಫುಟ್‍ಬಾಲ್ ಚೆಂಡು
2006ರ ಜರ್ಮನಿ ವಿಶ್ವಕಪ್ ಟೂರ್ನಿಗೂ ಆಡಿಡಾಸ್ ಕಂಪೆನಿಯೇ ಚೆಂಡನ್ನು ಸಿದ್ದಪಡಿಸಿತ್ತು. ಆಡಿಡಾಸ್ ಟೀಮೆಜಿಸ್ಟ್ ಮತ್ತು ಆಡಿಡಾಸ್ ಟೀಮೆಜಿಸ್ಟ್ ಬರ್ಲಿನ್ ಅಂತ ಚೆಂಡಿಗೆ ಹೆಸರಿಡಲಾಗಿತ್ತು. ಇದರ ಅರ್ಥ ಟೀಮ್ ಸ್ಪೀರಿಟ್. ಫುಟ್‍ಬಾಲ್ ಟೂರ್ನಿಯಲ್ಲಿ ಜರ್ಮನಿಯ ಯಶಸ್ಸಿನ ಥೀಮ್ ಅನ್ನು ಈ ಚೆಂಡಿನ ವಿನ್ಯಾಸಕ್ಕೆ ಬಳಸಿಕೊಳ್ಳಲಾಗಿತ್ತು. ಗೋಲ್ಡ್ ಮತ್ತು ಬ್ಯಾಕ್ ಹಾಗೂ ವೈಟ್ ಕಲರ್‍ನಲ್ಲಿ ಈ ಚೆಂಡನ್ನು ತಯಾರು ಮಾಡಲಾಗಿದೆ.

2002ರ ಕೊರಿಯಾ – ಜಪಾನ್ ವಿಶ್ವಕಪ್ ಫುಟ್‍ಬಾಲ್ ಚೆಂಡು
2002ರ ಕೊರಿಯಾ -ಜಪಾನ್ ವಿಶ್ವಕಪ್ ಟೂರ್ನಿಗೆ ಆಡಿಡಾಸ್ ಫಿವರ್‍ನೋವಾ ಎಂಬ ಹೆಸರಿನಲ್ಲಿ ಚೆಂಡನ್ನು ತಯಾರು ಮಾಡಿತ್ತು. ಆದ್ರೆ ಚೆಂಡು ಹಗುರವಾಗಿರುವುದರಿಂದ  ಚೆಂಡಿನ ಬಗ್ಗೆ ಆಟಗಾರರು ಮತ್ತು ಕೋಚ್‍ಗಳು ಟೀಕೆ ಮಾಡಿದ್ದರು.

1998ರ ಫ್ರಾನ್ಸ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1998ರ ಫ್ರಾನ್ಸ್ ವಿಶ್ವಕಪ್ ಫುಟ್‍ಬಾಲ್ ಚೆಂಡನ್ನು ಕೂಡ ಆಡಿಡಾಸ್ ತ್ರಿಕಲರ್ ಎಂಬ ಹೆಸರಿನಲ್ಲಿ ಅನಾವರಣಗೊಳಿಸಿತ್ತು. ಫ್ರೆಂಚ್ ಫುಟ್‍ಬಾಲ್ ಸಂಸ್ಥೆಯ ಬಣ್ಣ ಹಾಗೂ ಫ್ರಾನ್ಸ್ ಭಾವುಟದ ಬಣ್ಣದಲ್ಲಿ ಈ ಚೆಂಡನ್ನು ಸಿದ್ಧಪಡಿಸಲಾಗಿದೆ.

1994ರ ಅಮೆರಿಕಾ ವಿಶ್ವಕಪ್ ಫುಟ್‍ಬಾಲ್ ಚೆಂಡು
1994ರ ವಿಶ್ವಕಪ್ ಟೂರ್ನಿಯನ್ನು ಅಮೆರಿಕಾ ಆತಿಥ್ಯ ವಹಿಸಿತ್ತು. ಈ ಟೂರ್ನಿಯ ಚೆಂಡನ್ನು ಕೂಡ ಆಡಿಡಾಸ್ ಕಂಪೆನಿಯೇ ತಯಾರು ಮಾಡಿತ್ತು. ಆಡಿಡಾಸ್ ಕ್ವೇಸ್ಟಾ ಎಂಬ ಹೆಸರಿನ್ಲಿ ಚೆಂಡನ್ನು ಬಿಡುಗಡೆ ಮಾಡಲಾಗಿತ್ತು. ಅಮೆರಿಕಾದ ಪುರಾತನ ಇತಿಹಾಸವನ್ನು ಪ್ರತಿನಿಧಿಸುವಂತ ವಿನ್ಯಾಸದೊಂದಿಗೆ ಈ ಚೆಂಡನ್ನು ಸಿದ್ಧಪಡಿಸಲಾಗಿತ್ತು.

1990ರ ಇಟಲಿ ವಿಶ್ವಕಪ್ ಫುಟ್‍ಬಾಲ್ ಚೆಂಡು
1990ರ ಇಟಲಿ ವಿಶ್ವಕಪ್ ಫುಟ್‍ಬಾಲ್ ಟೂರ್ನಿಗೂ ಆಡಿಡಾಸ್ ಕಂಪೆನಿಯೇ ಚೆಂಡನ್ನು ವಿನ್ಯಾಸಗೊಳಿಸಿತ್ತು. ಇಟ್ರುಸ್ಕ್ಯಾನ್ ಯುನಿಕೊ ಎಂಬ ಹೆಸರಿನಲ್ಲಿ ಈ ಚೆಂಡನ್ನು ಸಿದ್ಧಪಡಿಸಿರುವ ಆಡಿಡಾಸ್ ಕಂಪೆನಿಯು, ಇಟಲಿಯ ಪುರಾತನ ಇತಿಹಾಸದ ಥೀಮ್ ಅನ್ನು ಗುರಿಯಾಗಿರಿಸಿಕೊಂಡು ಚೆಂಡನ್ನು ತಯಾರು ಮಾಡಿತ್ತು.

1986ರ ಮೆಕ್ಸಿಕೊ ವಿಶ್ವಕಪ್ ಫುಟ್‍ಬಾಲ್ ಚೆಂಡು
1986ರ ಮೆಕ್ಸಿಕೊ ವಿಶ್ವಕಪ್ ಟೂರ್ನಿಗೆ ಆಡಿಡಾಸ್ ಅಝ್ಟೇಕಾ ಎಂಬ ಹೆಸರಿನ ಚೆಂಡನ್ನು ಪರಿಚಯಿಸಿತ್ತು. ಈ ಚೆಂಡನ್ನು ಸಿಂಥೆಟಿಕ್‍ನಲ್ಲಿ ವಿನ್ಯಾಸಗೊಳಿಸಲಾಗಿತ್ತು.

1982ರ ಸ್ಪೇನ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1982ರ ಸ್ಪೇನ್ ವಿಶ್ವಕಪ್ ಟೂರ್ನಿಗೆ ಆಡಿಡಾಸ್ ಕಂಪೆನಿಯು ಆಡಿಡಾಸ್ ಟಂಗೋ ಇಸ್ಪಾನಾ ಹೆಸರಿನಲ್ಲಿ ಚೆಂಡನ್ನು ಸಿದ್ಧಪಡಿಸಿತ್ತು. ಸಿಂಥೆಟಿಕ್ ಮತ್ತು ಲೇದರ್‍ನಲ್ಲಿ ಈ ಚೆಂಡನ್ನು ತಯಾರು ಮಾಡಲಾಗಿದೆ. ಈ ಚೆಂಡಿನ ಬಗ್ಗೆ ಯಾವುದೇ ತಕಾರರು ಇಲ್ಲ. ಈ ಚೆಂಡನ್ನು ಅನೇಕ ಬಾರಿ ಮರು ವಿನ್ಯಾಸಗೊಳಿಸಲಾಯಿತ್ತು. ಆದಾದ ನಂತರ ವಿಶ್ವಕಪ್ ಟೂರ್ನಿಯ ಚೆಂಡಿನಲ್ಲಿ ಲೇದರ್ ಅನ್ನು ಬಳಕೆ ಮಾಡುತ್ತಿಲ್ಲ. ಲೆದರ್ ಅನ್ನು ಬಳಕೆ ಮಾಡಿದ ಚೆಂಡಿನಲ್ಲಿ ಆಡಿದ್ದ ಕೊನೆಯ ವಿಶ್ವಕಪ್ ಫುಟ್‍ಬಾಲ್ ಟೂರ್ನಿ ಇದಾಗಿತ್ತು.

1978ರ ಅಹೆರ್ಂಟಿನಾ ವಿಶ್ವಕಪ್ ಫುಟ್‍ಬಾಲ್ ಚೆಂಡು
1978ರ ಅಜೆರ್ಂಟಿನಾ ವಿಶ್ವಕಪ್ ಟೂರ್ನಿಗೆ ಆಡಿಡಾಸ್ ಕಂಪೆನಿಯು ಆಡಿಡಾಸ್ ಟಂಗೋ ಹೆಸರಿನಲ್ಲಿ ಚೆಂಡನ್ನು ಸಿದ್ದಪಡಿಸಿತ್ತು. ಈ ಚೆಂಡಿನಲ್ಲಿ ಅಜೆರ್ಂಟಿನಾ ಜನತೆಯ ಫುಟ್‍ಬಾಲ್ ಪ್ರೀತಿ ಮತ್ತು ಅಜೆರ್ಂಟಿನಾದ ಪುರಾತನ ಇತಿಹಾಸವನ್ನು ಸಾರುವಂತಹ ವಿನ್ಯಾಸದಿಂದ ಟಂಗೋ ಚೆಂಡನ್ನು ತಯಾರು ಮಾಡಲಾಗಿತ್ತು.

1974 ಜರ್ಮನಿ ವಿಶ್ವಕಪ್ ಟೂರ್ನಿಯ ಚೆಂಡು
1974ರ ಜರ್ಮನಿ ವಿಶ್ವಕಪ್ ಟೂನಿಗೆ ಆಡಿಡಾಸ್ ಟೆಲ್‍ಸ್ಟರ್ ಡ್ಯುರಾಲಾಸ್ಟ್ ಎಂಬ ಹೆಸರಿನ ಚೆಂಡನ್ನು ಆಡಿಡಾಸ್ ಕಂಪೆನಿಯು ಸಿದ್ಧಪಡಿಸಿತ್ತು. ಬ್ಲ್ಯಾಕ್ ಮತ್ತು ವೈಟ್ ಕಲರ್‍ನಲ್ಲಿ ಆಡಿಡಾಸ್ ಕಂಪೆನಿಯು ಈ ಚೆಂಡನ್ನು ವಿನ್ಯಾಸಗೊಳಿಸಿತ್ತು.

1970ರ ಮೆಕ್ಸಿಕೊ ವಿಶ್ವಕಪ್ ಫುಟ್‍ಬಾಲ್ ಚೆಂಡು
1970ರ ವಿಶ್ವಕಪ್ ಟೂರ್ನಿಯನ್ನು ಮೆಕ್ಸಿಕೊ ಆಯೋಜಿಸಿತ್ತು. ಟೆಲ್‍ಸ್ಟರ್ ಎಂಬ ಹೆಸರಿನ ಚೆಂಡನ್ನು ಆಡಿಡಾಸ್ ಕಂಪೆನಿಯು ಈ ಟೂರ್ನಿಗೆ ಸಿದ್ಧಪಡಿಸಿತ್ತು. ಇದು ವಿಶ್ವಕಪ್ ಟೂರ್ನಿಗೆ ಆಡಿಡಾಸ್ ಕಂಪೆನಿಯು ಸಿದ್ಧಪಡಿಸಿದ ಮೊದಲ ಚೆಂಡು. ಬ್ಲ್ಯಾಕ್ ಮತ್ತು ವೈಟ್ ಕಲರ್‍ನಲ್ಲಿ ವಿನ್ಯಾಸಗೊಳಿಸಿರುವ ಈ ಚೆಂಡು ಸ್ಟಾರ್ ಆಫ್ ಟೆಲಿವಿಷನ್ ಬಾಲ್ ಅಂತನೇ ಕರೆಯಲಾಗುತ್ತಿತ್ತು. ಯಾಕಂದ್ರೆ ಬ್ಯ್ಲಾಕ್ ವೈಟ್ ಟಿವಿಗಳಲ್ಲಿ ಚೆಂಡು ಚೆನ್ನಾಗಿಯೇ ಕಾಣುತ್ತಿತ್ತು.

1966ರ ಇಂಗ್ಲೆಂಡ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1966ರ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. ಈ ವಿಶ್ವಕಪ್ ಟೂರ್ನಿಗೆ ಸ್ಲಾಝೆಂಜರ್  ಎಂಬ ಬ್ರಿಟಿμï ಕಂಪೆನಿಯು ಸಿದ್ಧಪಡಿಸಿತ್ತು. ಸ್ಲಾಝೆಂಜರ್ ಚಾಲೆಂಜ್ -4 ಸ್ಟಾರ್ ಎಂಬ ಹೆಸರಿನ ಈ ಚೆಂಡಿನಲ್ಲಿ ಯಾವುದೇ ಬ್ರ್ಯಾಂಡಿಂಗ್ ಮಾಡಿರಲಿಲ್ಲ.

1962ರ ಚಿಲಿ ವಿಶ್ವಕಪ್ ಫುಟ್‍ಬಾಲ್ ಚೆಂಡು
1982ರ ಚಿಲಿ ವಿಶ್ವಕಪ್ ಫುಟ್‍ಬಾಲ್ ಟೂರ್ನಿಗೆ ಬಳಕೆ ಮಾಡಿದ್ದ ಚೆಂಡಿನ ಹೆಸರು ಕ್ರ್ಯಾಕ್ ಟಾಪ್ ಸ್ಟಾರ್. ಆದ್ರೆ ಈ ಚೆಂಡು ಹೆಸರಿನಂತೆ ಕ್ರ್ಯಾಕ್ ಆಗಿತ್ತು. ಚೆಂಡಿನ ವಿನ್ಯಾಸ ಸರಿ ಇರಲಿಲ್ಲ.

1958ರ ಸ್ವೀಡನ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1958ರ ಸ್ವೀಡನ್ ವಿಶ್ವಕಪ್ ಫುಟ್‍ಬಾಲ್ ಟೂರ್ನಿಯಲ್ಲಿ ಟಾಪ್ ಸ್ಟಾರ್ ಎಂಬ ಹೆಸರಿನ ಚೆಂಡನ್ನು ತಯಾರು ಮಾಡಲಾಗಿತ್ತು. ವಿಶ್ವಕಪ್ ಟೂರ್ನಿಗೆ ಸ್ಪರ್ಧೆ ನಡೆಸುವ ಮೂಲಕ ಈ ಚೆಂಡನ್ನು ಆಯ್ಕೆ ಮಾಡಲಾಗಿತ್ತು. ಚೆಂಡಿನ ಸ್ಪರ್ಧೆಯಲ್ಲಿ ಸ್ವೀಡನ್ ಕಂಪೆನಿಯು ಗೆದ್ದುಕೊಂಡಿತ್ತು. ಇದಕ್ಕೆ ತಕ್ಕಂತೆ ಚೆಂಡಿಗೂ ಟಾಪ್ ಸ್ಟಾರ್ ಎಂದು ಹೆಸರಿಡಲಾಗಿತ್ತು.

1954ರ ಸ್ವೀಜರ್‍ಲೆಂಡ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1954ರ ವಿಶ್ವಕಪ್ ಫುಟ್‍ಬಾಲ್ ಟೂರ್ನಿಯ ಚೆಂಡು ಬಹಳ ಆಕರ್ಷಣೆಯಾಗಿತ್ತು. ಝಿಗ್‍ಝಾಗ್ ಮಾದರಿಯ ಎಡ್ಕ್ ಅನ್ನು ಈ ಚೆಂಡಿನಲ್ಲಿ ಕಾಣಬಹುದು. ಈ ಚೆಂಡಿಗೆ ಸ್ವಿಸ್ ವಲ್ರ್ಡ್ ಚಾಂಪಿಯನ್ ಎಂದು ಹೆಸರಿಡಲಾಗಿತ್ತು.

1950ರ ಬ್ರೆಜಿಲ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1950ರ ಬ್ರೆಜಿಲ್ ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಬಾಲ್ ಡುಪೆÇ್ಲೀ ಟಿ ಎಂಬ ಹೆಸರಿನ ಚೆಂಡಿನಲ್ಲಿ ಬಳಕೆ ಮಾಡಲಾಗಿತ್ತು.

1938ರ ಫ್ರಾನ್ಸ್ ವಿಶ್ವಕಪ್ ಫುಟ್‍ಬಾಲ್ ಚೆಂಡು
1938ರ ವಿಶ್ವಕಪ್ ಟೂರ್ನಿಗೆ ಫ್ರಾನ್ಸ್ ಆತಿಥ್ಯ ವಹಿಸಿತ್ತು. ಈ ಟೂರ್ನಿಗೆ ಆಲೆನ್ ಎಂಬ ಹೆಸರಿನ ಚೆಂಡನ್ನು ಸಿದ್ಧಪಡಿಸಲಾಗಿತ್ತು. ಆಲೆನ್ ಚೆಂಡನ್ನು ಫ್ರಾನ್ಸ್ ಕಂಪೆನಿಯು ವಿನ್ಯಾಸಗೊಳಿಸಿತ್ತು.

1934 ಇಟಲಿ ವಿಶ್ವಕಪ್ ಫುಟ್‍ಬಾಲ್ ಚೆಂಡು
1934ರ ವಿಶ್ವಕಪ್ ಟೂರ್ನಿಯನ್ನು ಇಟಲಿ ಸಂಘಟಿಸಿತ್ತು. ಈ ಟೂರ್ನಿಗೆ ಫೆಡರಲ್ -102 ಎಂಬ ಹೆಸರಿನ ಚೆಂಡನ್ನು ತಯಾರು ಮಾಡಲಾಗಿತ್ತು.

1930ರ ಉರುಗ್ವೆ ವಿಶ್ವಕಪ್ ಫುಟ್‍ಬಾಲ್ ಚೆಂಡು
1930ರ ಮೊದಲ ವಿಶ್ವಕಪ್ ಟೂರ್ನಿಗೆ ಉರುಗ್ವೆ ಆತಿಥ್ಯ ವಹಿಸಿತ್ತು. ಮೊದಲ ವಿಶ್ವಕಪ್‍ನ ಚೆಂಡಿಗೆ ಟಿ -ಮಾಡೆಲ್ ಎಂಬ ಹೆಸರಿನಲ್ಲಿ ಕರೆಯಲಾಯಿತ್ತು. ಈ ಚೆಂಡಿನಲ್ಲಿ ಟಿ ಶೇಪ್‍ನ ಪ್ಯಾನೇಲ್‍ಗಳನ್ನು ಕಾಣಬಹುದಾಗಿತ್ತು.
ಹೀಗೆ ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಚೆಂಡಿನ ಬಗ್ಗೆ ಯಾರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ತಂತ್ರಜ್ಞಾನ ಮುಂದುವರಿದಂತೆ ಚೆಂಡಿನ ವಿನ್ಯಾಸ, ತಾಂತ್ರಿಕತೆ, ಗುಣಮಟ್ಟ ಎಲ್ಲವನ್ನೂ ವೈಜ್ಞಾನಿಕವಾಗಿ ವಿಶ್ವದ ನಾನಾ ಕಂಪೆನಿಗಳು ಚೆಂಡನ್ನು ತಯಾರು ಮಾಡುತ್ತಿವೆ.
Sanath Rai

Tags: #fifawolrdcup2026#saakshatvfifafifaworldcupFootball
ShareTweetSendShare
Join us on:

Related Posts

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

by admin
June 13, 2026
0

  2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..? ಫಿಫಾ ವಿಶ್ವಕಪ್.. ಇದು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಕಾಲ್ಚೆಂಡಿನ ಮಹಾಕುಂಭಮೇಳ. ವಿಶ್ವ ಕ್ರೀಡಾಲೋಕದಲ್ಲಿ...

ಇಬ್ಬರು ಲೇಡಿ ಸಿಂಗಂಗಳಿಗೆ ಸುಪ್ರೀಂ ಕೋರ್ಟ್ ಶಾಕ್: ಕೆರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್!

ಇಬ್ಬರು ಲೇಡಿ ಸಿಂಗಂಗಳಿಗೆ ಸುಪ್ರೀಂ ಕೋರ್ಟ್ ಶಾಕ್: ಕೆರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್!

by Shwetha
June 13, 2026
0

ರಾಜ್ಯದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ದೀರ್ಘಕಾಲದ ವಾಗ್ವಾದಕ್ಕೆ ಈಗ ಸುಪ್ರೀಂ ಕೋರ್ಟ್‌ನಿಂದ...

NEET ಮರುಪರೀಕ್ಷೆಗೆ ಮಹತ್ವದ ನಿರ್ಧಾರ; ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ

NEET ಮರುಪರೀಕ್ಷೆಗೆ ಮಹತ್ವದ ನಿರ್ಧಾರ; ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ

by Shwetha
June 13, 2026
0

ನೀಟ್ (NEET) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪರೀಕ್ಷಾ ವೇಳಾಪಟ್ಟಿ ಹಾಗೂ ಅವಧಿಗೆ ಸಂಬಂಧಿಸಿದಂತೆ...

ನಾವೇ ಅಸಲಿ TMC; ಸ್ಪೀಕರ್ ಭೇಟಿಗೆ ರೆಬೆಲ್ ಸಂಸದರ ನಿರ್ಧಾರ

ನಾವೇ ಅಸಲಿ TMC; ಸ್ಪೀಕರ್ ಭೇಟಿಗೆ ರೆಬೆಲ್ ಸಂಸದರ ನಿರ್ಧಾರ

by Shwetha
June 13, 2026
0

ತೃಣಮೂಲ ಕಾಂಗ್ರೆಸ್‌ ಪಕ್ಷದ ಬಂಡಾಯ ಸಂಸದರು ತಮ್ಮ ಬಣಕ್ಕೆ ಸಂಸತ್ತಿನಲ್ಲಿ ಅಧಿಕೃತ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಬಂಡಾಯ ಸಂಸದ ಜಗದೀಶ್...

ನನಗೆ ಯಾವುದೇ ಹಿನ್ನಡೆಯಾಗಿಲ್ಲ ದೇಶದ ಜನತೆಗೆ ಎಲ್ಲವೂ ತಿಳಿದಿದೆ: ಸುಪ್ರೀಂ ಆದೇಶದ ಬೆನ್ನಲ್ಲೇ ಮೀನಾಕ್ಷಿ ನಟರಾಜನ್ ಆಕ್ರೋಶ

ನನಗೆ ಯಾವುದೇ ಹಿನ್ನಡೆಯಾಗಿಲ್ಲ ದೇಶದ ಜನತೆಗೆ ಎಲ್ಲವೂ ತಿಳಿದಿದೆ: ಸುಪ್ರೀಂ ಆದೇಶದ ಬೆನ್ನಲ್ಲೇ ಮೀನಾಕ್ಷಿ ನಟರಾಜನ್ ಆಕ್ರೋಶ

by Shwetha
June 13, 2026
0

ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಕಣದಿಂದ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯವು ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram