ADVERTISEMENT
Monday, September 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

admin by admin
June 19, 2026
in Newsbeat, Sports, ಕ್ರಿಕೆಟ್, ಕ್ರೀಡೆ
Basketball courts became makeshift pitches in mexico jail

Basketball courts became makeshift pitches in mexico jail

Share on FacebookShare on TwitterShare on WhatsappShare on Telegram

ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್‍ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ ಕಾಲ್ಚೆಂಡಿನೊಂದಿಗೆ ಡಾನ್ಸ್ ಮಾಡುತ್ತಿರುತ್ತಾರೆ. ಭಾರತದಲ್ಲಿ ಕ್ರಿಕೆಟ್ ಆಟವನ್ನು ಹೇಗೆ ಆರಾಧಿಸ್ತಾರೋ, ಅದೇ ರೀತಿ ಆ ದೇಶದಲ್ಲೂ ಫುಟ್‍ಬಾಲ್ ಆಟವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸ್ತಾರೆ. ಆ ದೇಶವೇ ಪ್ರಾಚೀನ ನಾಗರಿಕತೆಗಳ ತವರೂರು ಆಗಿರುವ ಮೆಕ್ಸಿಕೊ.

ಸದ್ಯ ಅಮೆರಿಕಾ, ಕೆನಡಾದ ಜೊತೆ ಸೇರಿಕೊಂಡು 2026ರ ಫಿಫಾ ವಿಶ್ವಕಪ್ ಟೂರ್ನಿಯನ್ನು ಜಂಟಿಯಾಗಿ ಆಯೋಜಿಸುತ್ತಿದೆ. ಅಲ್ಲದೆ ಫಿಫಾ ವಿಶ್ವಕಪ್ ಹಾಗೂ ವಿಶ್ವ ಫುಟ್‍ಬಾಲ್‍ನ ಬಲಿಷ್ಠ ತಂಡವೂ ಹೌದು. 1970, 1986 ಮತ್ತು 2026ರಲ್ಲಿ ಫಿಫಾ ವಿಶ್ವಕಪ್ ಅನ್ನು ಮೂರು ಬಾರಿ ಆಯೋಜಿಸಿದ ಜಗತ್ತಿನ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ಫುಟ್‍ಬಾಲ್ ದಂತಕಥೆಗಳಾದ ಪೀಲೆ, ಡಿಯಾಗೊ ಮರಡೋನಾರಂತಹ ಆಟಗಾರರು ವಿಶ್ವಕಪ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದು ಕೂಡ ಇದೇ ಮೆಕ್ಸಿಕೊ ಅಂಗಣದಲ್ಲಿ ಎಂಬುದು ವಿಶೇಷ.

Related posts

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಮುಳುವಾಯಿತೇ?ಡಿಕೆಶಿ ಸರ್ಕಾರಕ್ಕೆ ಸಚಿವ ಬಾಲಕೃಷ್ಣ ಶಾಕ್: ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಸಹಾಯಕತೆ

September 28, 2026
ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

September 28, 2026

ಫುಟ್‍ಬಾಲ್ ಜೊತೆ ಬೇಸ್‍ಬಾಲ್, ಕುಸ್ತಿ ಈ ದೇಶದ ಪ್ರಮುಖ ಕ್ರೀಡೆಯಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮೆಕ್ಸಿಕೊದಲ್ಲಿ ಬ್ಯಾಟ್ – ಚೆಂಡಿನ ಕ್ರಿಕೆಟ್ ಆಟದ ಸದ್ದು ಕೇಳಿಸುತ್ತಿದೆ. 2026ರ ಫಿಫಾ ವಿಶ್ವಕಪ್ ಜಾತ್ರೆಯ ನಡುವೆಯೇ ಮೆಕ್ಸಿಕೊದ ಮೈದಾನದ ಜೊತೆಗೆ ಜೈಲಿನ ಕೋಟೆಯಲ್ಲೂ ಕ್ರಿಕೆಟ್ ಆಟ ಹೊಸ ವಿಳಾಸವನ್ನು ಪಡೆದುಕೊಂಡಿದೆ. ಹೌದು, ಸದ್ಯ ನಾಲ್ಕೈದು ಜೈಲಿನಲ್ಲಿರುವ ಕೈದಿಗಳಿಗೆ ಕ್ರಿಕೆಟ್ ಆಟದ ಗ್ರಾಮರ್‍ಗಳನ್ನು ಕಲಿಸಲಾಗುತ್ತಿದೆ. ಕಾರಾಗೃಹದಲ್ಲಿರುವ ಹಳೆಯ ಬ್ಯಾಸ್ಕೆಟ್‍ಬಾಲ್ ಅಂಗಣಗಳೇ ಈ ಕೈದಿಗಳ ಕ್ರಿಕೆಟ್ ಅಂಗಣವಾಗಿದೆ.

ಮೆಕ್ಸಿಕೊದ ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಆಯೋಗವು ಜೈಲಿನಲ್ಲಿರುವ ಕೈದಿಗಳಿಗೆ ಶಿಸ್ತು ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಳ್ಳಲು ಜಂಟಲ್ ಮ್ಯಾನ್ ಆಟವನ್ನು ಪರಿಚಯಿಸಿದೆ. ಕ್ರಿಕೆಟ್‍ನಲ್ಲಿ ಅಂಪೈರ್ ತೀರ್ಪೇ ಅಂತಿಮ. ಹೀಗಾಗಿ ಕೈದಿಗಳ ಕ್ರಿಕೆಟ್ ಆಟಕ್ಕೆ ಜೈಲರ್ ಅಂಪೈರ್ ಆಗಿದ್ದಾರೆ. ಇನ್ನು ಕ್ರಿಕೆಟ್ ಆಡಲು ಬ್ಯಾಟ್, ವಿಕೆಟ್, ಚೆಂಡುಗಳನ್ನು ತಯಾರು ಮಾಡುವುದು ಸಹ ಕೈದಿಗಳೇ. ದ್ವೇಷ ಮತ್ತು ಹಿಂಸೆಗೆ ಪ್ರಚೋದಿಸುವ ಇತರೆ ಕ್ರೀಡೆಗಳಿಗಿಂತ ಕ್ರಿಕೆಟ್ ಆಟ ಭಿನ್ನವಾಗಿದೆ. ಪರಸ್ಪರ ಸ್ನೇಹ ಮತ್ತು ಗೌರವದಿಂದ ಬಾಳುವುದರ ಜೊತೆಗೆ ಸ್ವಾವಲಂಬನೆಯ ಪಾಠದ ಮೂಲಕ ಸ್ವಂತ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂಬುದು ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಆಯೋಗದ ಉದ್ದೇಶವಾಗಿದೆ.

ಹಾಗೇ ಮಹಿಳಾ ಕೈದಿಗಳು ಸಕ್ರಿಯವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಹೈಸೆಕ್ಯುರಿಟಿ ಜೈಲುಗಳಲ್ಲೂ ಕ್ರಿಕೆಟ್ ತರಬೇತಿಯನ್ನು ನೀಡಲಾಗುತ್ತಿದೆ. ಇದಕ್ಕೆ ಮುಖ್ಯ ಪ್ರೇರಣೆ 2021ರಲ್ಲಿ ನಡೆದ ಐಸಿಸಿ ಅಮೆರಿಕನ್ ವುಮೆನ್ಸ್ ಟಿ-20 ಕ್ರಿಕೆಟ್. ಈ ಪಂದ್ಯವನ್ನು ವೀಕ್ಷಿಸಿದ ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಆಯೋಗವು ಮೆಕ್ಸಿಕೊ ಕ್ರಿಕೆಟ್ ಸಂಸ್ಥೆಯ ಜೊತೆಗೂಡಿ ಈ ಯೋಜನೆಯನ್ನು ಸಿದ್ದಪಡಿಸಿದೆ. ಈ ಮೂಲಕ ಮೆಕ್ಸಿಕೊದ ಮೂಲ ಆಟವಾಗಿರುವ ಕ್ರಿಕೆಟ್‍ಗೆ ಮರುಜನ್ಮ ನೀಡಲು ಮೆಕ್ಸಿಕೊ ಕ್ರಿಕೆಟ್ ಸಂಸ್ಥೆಯೂ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ಹಾಗೇ ನೋಡಿದ್ರೆ ಮೆಕ್ಸಿಕೊದಲ್ಲಿ 1827ರಲ್ಲೇ ಕ್ರಿಕೆಟ್ ಆಟವನ್ನು ಆಡಲಾಗುತ್ತಿತ್ತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಬ್ರಿಟಿಷರ ಅಧೀನದಲ್ಲಿದ್ದ ಮೆಕ್ಸಿಕೊದಲ್ಲಿ ಫುಟ್‍ಬಾಲ್ ಮತ್ತು ಕ್ರಿಕೆಟ್ ಏಕಕಾಲದಲ್ಲೇ ಪರಿಚಯಿಸಿದವರು ಸ್ಕಾಟ್‍ಲೆಂಡ್‍ನ ಗಣಿ ಕಾರ್ಮಿಕರು. ಕ್ರಿಕೆಟ್ ಬ್ರಿಟಿಷರ ಪ್ರತಿಷ್ಠೆಯ ಸಂಕೇತವಾದ್ರೆ, ಫುಟ್‍ಬಾಲ್ ಜನಸಾಮಾನ್ಯರ ಕ್ರೀಡೆಯಾಗಿ ಬೆಳೆಯಿತ್ತು. 1896ರಲ್ಲಿ ಮೆಕ್ಸಿಕೊ ಕ್ರಿಕೆಟ್ ಕ್ಲಬ್ ಆರಂಭಿಸಿದ ನಂತರ ಮೆಕ್ಸಿಕೊದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿ ಬೆಳೆದಿತ್ತು. ಆದ್ರೆ ಮೆಕ್ಸಿಕೊ ಕ್ರಾಂತಿ ಮತ್ತು ಮೊದಲ ಮಹಾಯುದ್ಧದ ನಂತರ ಬ್ರಿಟಿಷರು ದೇಶ ಬಿಟ್ಟು ಹೋದ್ರು. ಅಲ್ಲಿನ ಜನಸಾಮಾನ್ಯರ ಕ್ರೀಡೆಯಾಗಿದ್ದ ಫುಟ್‍ಬಾಲ್ ಆಟ ಹೆಮ್ಮರವಾಗಿ ಬೆಳೆದ್ರೆ ಕ್ರಿಕೆಟ್ ಸಂಪೂರ್ಣವಾಗಿ ಅಳಿಸಿ ಹೋಯ್ತು. ಹೀಗಾಗಿ ಇಂದಿಗೂ ಮೆಕ್ಸಿಕೊದಲ್ಲಿ ಕ್ರಿಕೆಟ್‍ನ ಪರಿಕರಗಳು ಸಿಗುತ್ತಿಲ್ಲ. ಕ್ರಿಕೆಟ್ ಕಿಟ್‍ಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಸದ್ಯ ಒಂದು ಕ್ರೀಡಾಂಗಣವಿದ್ದು, ಎರಡು ನೆಟ್ಸ್‍ಗಳು ಮಾತ್ರ ಇವೆ.

ಗತಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು, ಅಲ್ಲಿನ ರಾಜರುಗಳು ಆಡುತ್ತಿದ್ದ ಚಿತ್ರಗಳು ಇನ್ನೂ ಕೂಡ ಅಲ್ಲಿನ ಲೈಬ್ರೆರಿಯಲ್ಲಿವೆ. ಮೆಕ್ಸಿಕೊದಲ್ಲಿ ನೆಲೆಸಿರುವ ಇಂಗ್ಲೆಂಡ್, ಪಾಕಿಸ್ತಾನ, ಭಾರತ ಸೇರಿದಂತೆ ವಿದೇಶಿ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2004ರಿಂದ ಮೆಕ್ಸಿಕೊ ಐಸಿಸಿ ಮಾನ್ಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ಸಹ ಸದಸ್ಯ ರಾಷ್ಟ್ರಗಳ ನಡುವಿನ ಆಡುತ್ತಿದೆ. 2018ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನ ಆಡಿರುವ ಮೆಕ್ಸಿಕೊ ರಾಷ್ಟ್ರೀಯ ಕ್ರಿಕೆಟ್ ತಂಡ ಇಲ್ಲಿಯವರೆಗೆ 41 ಪಂದ್ಯಗಳನ್ನು ಆಡಿದೆ.

ಪ್ರಸ್ತುತ ಎಂಸಿಎ ಕ್ಲಬ್‍ನ ಕಾರ್ಯದರ್ಶಿಯಾಗಿರುವ ಇಂಗ್ಲೆಂಡ್ ಮೂಲದ ಕ್ರೇಗ್ ವೇಟ್ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುತ್ತಿದ್ದಾರೆ. ಅದರಲ್ಲೂ ಸ್ಥಳಿಯ ಒಬ್ಬ ಪ್ರತಿಭೆಯ ಹೆಸರು ಹೇಳದಿದ್ರೂ ಮುಂದೊಂದು ಈತನೇ ಮೆಕ್ಸಿಕೊ ಕ್ರಿಕೆಟ್‍ನ ಸೂಪರ್‍ಸ್ಟಾರ್ ಆಗಲಿದ್ದಾನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ತನ್ನ ಪೂರ್ವಜರು ಬಿಟ್ಟು ಹೋಗಿದ್ದ ಕ್ರಿಕೆಟ್ ಆಟಕ್ಕೆ ಮರುಜನ್ಮ ನೀಡಲು ಕ್ರೇಗ್ ವೇಟ್ ಮುಂದಾಗಿದ್ದಾರೆ. ವಿದೇಶಿ ಆಟಗಾರರ ಜೊತೆ ಸ್ಥಳಿಯ ಜನರು ಕೂಡ ಆಡಬೇಕು ಎಂಬ ಉದ್ದೇಶದಿಂದ ಮೆಕ್ಸಿಕೊದಲ್ಲಿ ಕ್ರಿಕೆಟ್ ಆಟಕ್ಕೆ ಬೇಕಾದ ಮಾಸ್ಟರ್ ಪ್ಲ್ಯಾನ್‍ಗಳನ್ನು ಮಾಡುತ್ತಿದ್ದಾರೆ.

ಎರಡು ಶತಮಾನಗಳ ಹಿಂದೆ ಆಂಗ್ಲರ ಜೊತೆ ಮೆಕ್ಸಿಕೊಗೆ ಬಂದು, ನಂತರ ದೇಶ ತೊರೆದು ಹಳೆಯ ನೆನಪಾಗಿ ಉಳಿದಿದ್ದ ಕ್ರಿಕೆಟ್ ಆಟ ಇಂದು ಕೈದಿಗಳ ಮನಪರಿವರ್ತನೆಯ ಕ್ರೀಡೆಯಾಗುತ್ತಿದೆ ಅಂದ್ರೆ ವಿಸ್ಮಯವಾಗುತ್ತದೆ. ಒಂದು ಕಾಲದಲ್ಲಿ ಸಾಮ್ರಾಜ್ಯಶಾಹಿಯ ಅಹಂಕಾರದ ಸಂಕೇತವಾಗಿದ್ದ ಕ್ರಿಕೆಟ್ ಇಂದು ಅಪರಾಧಿಗಳ ಮನಸು ಗೆದ್ದು ಮಾನೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ದಾರಿ ತೋರಿಸುತ್ತಿರುವುದು ಕ್ರೀಡಾ ಜಗತ್ತಿನ ಸುಂದರ ಅಧ್ಯಾಯವಾಗಿದೆ.

ಸನತ್ ರೈ

 

 

Tags: #Cricket #MexicoCricket #PrisonReformation #SportsJournalism #FifaWorld Cup2026 #GentlemansGame #CricketHistory #InspirationalStories #SportsNews #ಕನ್ನಡಕ್ರೀಡೆ #ಕ್ರಿಕೆಟ್ #ಮೆಕ್ಸಿಕೊ #sanathrai #saakshatv
ShareTweetSendShare
Join us on:

Related Posts

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಮುಳುವಾಯಿತೇ?ಡಿಕೆಶಿ ಸರ್ಕಾರಕ್ಕೆ ಸಚಿವ ಬಾಲಕೃಷ್ಣ ಶಾಕ್: ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಸಹಾಯಕತೆ

by Shwetha
September 28, 2026
0

ರಾಮನಗರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಈಗ ತನ್ನದೇ ಪಕ್ಷದ ಪ್ರಭಾವಿ ಸಚಿವರಿಂದ ದೊಡ್ಡ ಮುಜುಗರ ಎದುರಾಗಿದೆ. ಸರ್ಕಾರದ ಅತಿ ದೊಡ್ಡ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

by Shwetha
September 28, 2026
0

ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ವರ್ಷದ ಕೊನೆಯ ಅಂಗಾರಕ ಸಂಕಷ್ಟಿ ಚತುರ್ಥಿ:ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಗಣೇಶನಿಗೆ ಹೀಗೆ ಅರ್ಪಿಸಿ ಗರಿಕೆ

by Shwetha
September 28, 2026
0

ವಿನಾಯಕನ ಭಕ್ತರಿಗೆ ಇದು ಅತ್ಯಂತ ಪುಣ್ಯದಾಯಕ ಸಮಯ. ಭಾದ್ರಪದ ಮಾಸದ ಪವಿತ್ರ ದಿನಗಳಲ್ಲಿ ವಿಘ್ನರಾಜ ಸಂಕಷ್ಟಿ ಚತುರ್ಥಿಯು ಸನ್ನಿಹಿತವಾಗಿದ್ದು, ಈ ಬಾರಿ ಇದು ಮಂಗಳವಾರದಂದು ನಾಳೆ ಬಂದಿರುವುದು...

ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿಗೆ ಮಾಜಿ ಮತ್ತು ಹಾಲಿ ಸಿಎಂಗಳ ಸಲಾಂ ಮುಖ್ಯಮಂತ್ರಿ ನಾಟಕದ 900ನೇ ಪ್ರದರ್ಶನ ಯಶಸ್ವಿ:ಮುಖ್ಯಮಂತ್ರಿ ಚಂದ್ರು ಅಬ್ಬರಕ್ಕೆ ಸಾಕ್ಷಿಯಾದ ರಾಜಕೀಯ ಗಣ್ಯರು

ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿಗೆ ಮಾಜಿ ಮತ್ತು ಹಾಲಿ ಸಿಎಂಗಳ ಸಲಾಂ ಮುಖ್ಯಮಂತ್ರಿ ನಾಟಕದ 900ನೇ ಪ್ರದರ್ಶನ ಯಶಸ್ವಿ:ಮುಖ್ಯಮಂತ್ರಿ ಚಂದ್ರು ಅಬ್ಬರಕ್ಕೆ ಸಾಕ್ಷಿಯಾದ ರಾಜಕೀಯ ಗಣ್ಯರು

by Shwetha
September 28, 2026
0

ಬೆಂಗಳೂರು ರಂಗಭೂಮಿಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಕ್ಷರಗಳ ಪುಟ ತೆರೆದುಕೊಂಡಿತು. ದಶಕಗಳಿಂದ ಕನ್ನಡಿಗರ ಮನಗೆದ್ದಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯದ ಐತಿಹಾಸಿಕ ನಾಟಕ ಮುಖ್ಯಮಂತ್ರಿ ತನ್ನ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ನೆಗೆದುಬಿದ್ದು ಹೋಗುತ್ತೆ ಈ ಸರ್ಕಾರ: 2028ರವರೆಗೆ ಇರ್ತಾರೋ ಇಲ್ವೋ ಗೊತ್ತಿಲ್ಲ ಎಂದು ಡಿಕೆಶಿಗೆ ಕುಮಾರಸ್ವಾಮಿ ಏಕವಚನದಲ್ಲೇ ಕ್ಲಾಸ್

by Shwetha
September 28, 2026
0

ಚನ್ನಪಟ್ಟಣ: ಬಿಡದಿ ಟೌನ್ ಶಿಪ್ ವಿಚಾರವಾಗಿ ರೈತರು ನಡೆಸುತ್ತಿರುವ ಹೋರಾಟ ಈಗ ಮಹಾ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram