ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಸದ ರಾಶಿಯ ನಡುವೆ ಬೆಳೆದ ಹುಡುಗ ಇಂದು ಫುಟ್‍ಬಾಲ್ ಜಗತ್ತಿನ ಧ್ರುವತಾರೆ.. ಆದ್ರೂ ಫಿಫಾ ವಿಶ್ವಕಪ್ ಆಡುತ್ತಿಲ್ಲ ಯಾಕೆ..? ಇದೊಂದು ಸ್ಪೂರ್ತಿದಾಯಕ ಸ್ಟೋರಿ..!

admin by admin
June 20, 2026
in Newsbeat, Sports, ಕ್ರೀಡೆ
Victor Osimhen

Victor Osimhen

Share on FacebookShare on TwitterShare on WhatsappShare on Telegram

ಅಂದು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಒದ್ದಾಡಿಕೊಂಡಿದ್ದ. ವಾಸ ಮಾಡಲು ಸೂರಿಲ್ಲದೆ ಕತ್ತಲೆಯ ಕೋಣೆಯಲ್ಲಿ ಕಣ್ಣೀರು ಹಾಕುತ್ತಿದ್ದ. ಅಮ್ಮನ ನೆನಪು ಕಾಡಿದಾಗ ಜೋರಾಗಿ ಆಳುತ್ತಿದ್ದ. ಏಳು ಮಂದಿ ಮಕ್ಕಳನ್ನು ಸಾಕಲು ಅಪ್ಪ ಪಡುತ್ತಿದ್ದ ಸಂಕಟವನ್ನು ನೋಡಿ ಮರುಕಪಡುತ್ತಿದ್ದ. ಅಣ್ಣ, ಅಕ್ಕ, ತಂಗಿಯರ ಜೊತೆ ನಗುನಗುತ್ತಾ ಆಟವಾಡಬೇಕಿದ್ದ ಹುಡುಗ ಕಸದ ರಾಶಿಯಲ್ಲಿ ತನ್ನ ಬದುಕನ್ನು ಕಟ್ಟಿಕೊಂಡಿದ್ದ. ಹಸಿವು ನೀಗಿಸಲು ಟ್ರಾಫಿಕ್‍ನಲ್ಲಿ ನೀರು ಬಾಟಲ್ ಮಾರಾಟ ಮಾಡುತ್ತಿದ್ದ. ಬದುಕಿನ ಕಷ್ಟವನ್ನು ನೋಡಿ ಸಹಿಸಲು ಸಾಧ್ಯವಾಗದೇ ಇದ್ದಾಗ ದೇವರನ್ನೇ ಶಪಿಸಿದ್ದ. ಎಷ್ಟೋ ಕತ್ತಲೆಯ ರಾತ್ರಿಯಲ್ಲಿ ಚರಂಡಿ ಪಕ್ಕ ಕುಳಿತುಕೊಂಡು ಆಗಸವನ್ನು ದಿಟ್ಟಿಸಿ ನೋಡುತ್ತಿದ್ದ. ಓ ದೇವರೆ… ಈ ಮಗುವಿಗೆ ಯಾಕೆ ಈ ಶಿಕ್ಷೆ.. ? ಇದು ಒಂದು ಬದುಕೇ ಎಂದು ಆಕ್ರೋಶ ಹೊರ ಹಾಕುತ್ತಿದ್ದ..

ಈ ಪುಟ್ಟ ಬಾಲಕನ ಆಕ್ರೋಶದ ಪ್ರಾರ್ಥನೆಗೆ ದೇವರು ಕೂಡ ಅಂದು ತಥಾಸ್ತು ಅಂದಿರಬೇಕು. ಕತ್ತಲೆಯ ರಾತ್ರಿಯಲ್ಲಿ ಚಂದಿರನ ಬೆಳಂದಿಗಳ ನಡುವೆ ಹೊಳೆಯುವ ನಕ್ಷತ್ರದಂತೆ ಈ ಹುಡುಗ ಇಂದು ಫುಟ್‍ಬಾಲ್ ಜಗತ್ತಿನಲ್ಲಿ ಧ್ರುವತಾರೆಯಾಗಿ ಹೊಳೆಯುತ್ತಿದ್ದಾನೆ. ಸದ್ಯ ಆಫ್ರಿಕನ್ ಮತ್ತು ಯೂರೋಪಿಯನ್ ಫುಟ್‍ಬಾಲ್ ಕ್ಲಬ್‍ಗಳ ಬೇಡಿಕೆಯ ಆಟಗಾರÀ. ಮೈದಾನದಲ್ಲಿ ಗೂಳಿಯಂತೆ ಮುನ್ನುಗ್ಗುವ ಅಪ್ರತಿಮ ಸ್ಟ್ರೈಕರ್. ಎದುರಾಳಿ ತಂಡದ ಡಿಫೆಂಡರ್‍ಗಳು ಈತನ ಸಿಂಹ ಘರ್ಜನೆಗೆ ಭಯಪಡುತ್ತಾರೆ. ಕೋಟಿ ಕೋಟಿ ದುಡ್ಡಿನ ಜೊತೆಗೆ ಲಕ್ಷಾಂತರ ಅಭಿಮಾನಿಗಳ ಪಾಲಿನ ಪ್ರೀತಿಯ ಬ್ಲ್ಯಾಕ್ ಮಾಸ್ಕ್‍ಮೆನ್.

Related posts

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026
ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

August 7, 2026

ಆದ್ರೂ ಆತನಿಗೆ ನೆಮ್ಮದಿ ಇಲ್ಲ. ಇಷ್ಟೆಲ್ಲಾ ಸಾಧನೆ, ಗೌರವ, ದುಡ್ಡು, ಯಶಸ್ಸು ಸಿಕ್ಕಿದ್ರೂ ತನ್ನ ಒಂದು ಕನಸು ಈಡೇರಲಿಲ್ಲ ಎಂಬ ಕೊರಗು ಆತನನ್ನು ಸದಾ ಕಾಡುತ್ತಿದೆ. ಒಂದಲ್ಲ ಮೂರು ಬಾರಿ ಈ ಕನಸನ್ನು ನನಸು ಮಾಡಲು ಪ್ರಯತ್ನ ಪಟ್ಟಿದ್ದ. ಆದ್ರೆ ಒಂದು ಬಾರಿ ತಂಡದಲ್ಲಿ ಆಡುವ ಅವಕಾಶ ಸಿಗದೇ ನಿರಾಸೆಗೊಂಡಿದ್ದ. ಇನ್ನೆರೆಡು ಬಾರಿ ದಿಟ್ಟ ಹೋರಾಟ ಮಾಡಿದ್ರೂ ಆತನಿಗೆ ತಂಡವನ್ನು ದಡ ಸೇರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆತನಿಗೆ ಫಿಫಾ ವಿಶ್ವಕಪ್‍ನಲ್ಲಿ ಆಡುವ ಭಾಗ್ಯವನ್ನು ಮಾತ್ರ ಆ ದೇವರು ಕರುಣಿಸಲಿಲ್ಲ. ಅಂದು ಹಸಿವಿನಿಂದ ಹೊಟ್ಟೆ ತುಂಬಿಸಲು ಪರದಾಡುತ್ತಿದ್ದ ಈತ, ಈಗ ಫಿಫಾ ವಿಶ್ವಕಪ್‍ನಲ್ಲಿ ಆಡಲಿಲ್ಲ ಎಂದು ಪ್ರೀತಿಯನ್ನು ಕಳೆದುಕೊಂಡ ಭಗ್ನಪ್ರೇಮಿಯಂತಾಗಿದ್ದಾನೆ.

ಹೆಸರು ವಿಕ್ಟರ್ ಒಸಿಮ್ಹೆನ್. ನಿಕ್ ನೇಮ್ ಬ್ಲ್ಯಾಕ್ ಮಾಸ್ಕ್‍ಮೆನ್. ನೈಜಿರಿಯಾದ ಸೂಪರ್ ಸ್ಟಾರ್. ಯುರೋಪಿಯನ್ ಮತ್ತು ಆಫ್ರಿಕನ್ ಲೀಗ್‍ಗಳಲ್ಲಿ ಗೋಲು ದಾಖಲಿಸುವ ಮ್ಯಾಜಿಷಿಯನ್. ಫುಟ್‍ಬಾಲ್ ಜಗತ್ತಿನ ದುಬಾರಿ ಬೆಲೆಯ ಸ್ಟ್ರೈಕರ್. ನಿಜ, ವಿಕ್ಟರ್, ಕ್ಲಬ್ ಫುಟ್‍ಬಾಲ್ ಲೀಗ್‍ಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾನೆÉ. ಫಿಫಾ ವಿಶ್ವಕಪ್‍ನಲ್ಲಿ ಆಡಿಲ್ಲದಿದ್ರೂ ವಿಕ್ಟರ್ ಬೆಳೆದು ಬಂದ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಲಿದೆ. ಬಡತನವಿದೆ ಎಂದು ಸುಮ್ಮನೆ ಕೂರುವುದಲ್ಲ. ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸುವುದು ಹೇಗೆ ಎಂಬುದಕ್ಕೆ ವಿಕ್ಟರ್ ಒಸಿಮ್ಹೆನ್ ಬದುಕಿನ ಚಿತ್ರಣವೇ ಅದ್ಭುತ ಸಾಕ್ಷಿಯಾಗಿದೆ.

ಹೌದು.. ವಿಕ್ಟರ್‍ನ ಬಾಲ್ಯ ಶುರುವಾಗುವುದೇ ಗುಡಿಸಲಿನ ಮನೆಯಿಂದ. ಬಡತನದ ನೋವು ಮರೆಮಾಚಲು ಸ್ನೇಹಿತರ ಜೊತೆ ಫುಟ್‍ಬಾಲ್ ಆಡುತ್ತಿದ್ದದ್ದು ಡಂಪಿಂಗ್ ಯಾರ್ಡ್‍ನಲ್ಲಿ. ಬರಿಗಾಲಿನಲ್ಲೇ ಆಡುತ್ತಿದ್ದ ವಿಕ್ಟರ್, ಕಸದ ರಾಶಿಯಲ್ಲಿ ತನಗಾಗಿ ಬೂಟುಗಳನ್ನು ಹುಡುಕುತ್ತಿದ್ದ. ಒಂದು ದಿನ ಎಡಗಾಲಿಗೆ ಸಿಕ್ಕಿದ್ರೆ, ಇನ್ನೊಂದು ದಿನ ಬಲಗಾಲಿಗೆ ಸಿಗುತ್ತಿದ್ದ ಸ್ಟಡ್ರ್ಸ್‍ಗಳನ್ನು ಹಾಕೊಂಡು ಮೈದಾನದಲ್ಲಿ ಮುನ್ನುಗ್ಗಿ ಆಡುತ್ತಿದ್ದ. ಇವತ್ತು ದುಬಾರಿ ಬೆಲೆಯ ಸ್ಟಡ್ರ್ಸ್‍ಗಳು ಇವನ ಕಾಲ ಕೆಳಗೆ ಬೀಳುತ್ತಿವೆ. ಆದ್ರೆ ಆತನ ಬದುಕಿಗೆ ಟಾರ್ಚ್ ಲೈಟ್‍ನಂತೆ ಬೆಳಕು ನೀಡಿದ್ದು ಕಸದರಾಶಿಯಲ್ಲಿ ಸಿಗುತ್ತಿದ್ದ ಬೂಟುಗಳು. ಹರಿದುಹೋಗಿದ್ದ ಸ್ಟಡ್ರ್ಸ್‍ಗಳೇ ಇಂದು ವಿಕ್ಟರ್‍ನ ಕಾಲಿಗೆ ಹೈವೊಲ್ಟೇಜ್ ಪವರ್ ನೀಡಿರುವುದು. ವಿಕ್ಟರ್ ಹೇಳುವಂತೆ, ನನ್ನ ಆಟದ ಶೈಲಿ, ಭಯವಿಲ್ಲದೆ ಮುನ್ನುಗ್ಗುವ ಛಲ ಬಂದಿರೋದು ಪ್ರತಿಷ್ಠಿತ ಅಕಾಡೆಮಿಯ ತರಬೇತಿಯಿಂದಲ್ಲ. ಬದಲಾಗಿ ಕಸದ ರಾಶಿಯ ಮತ್ತು ಟ್ರಾಫಿಕ್ ಸಿಗ್ನಲ್‍ನಲ್ಲಿ ನಾನು ಪಟ್ಟ ಶ್ರಮವೇ ಈ ಮಟ್ಟಕ್ಕೆ ನನ್ನನ್ನು ಬೆಳೆಸಿದೆ ಅಂತಾರೆ.

ಬಡತನದ ನಡುವೆಯೂ ಶಾಲೆಗೂ ಹೋಗುತ್ತಿದ್ದ ವಿಕ್ಟರ್, ಟ್ರಾಫಿಕ್ ಸಿಗ್ನಲ್‍ನಲ್ಲಿ ನೀರಿನ ಬಾಟಲ್ ಮಾರಾಟ ಮಾಡುತ್ತಿದ್ದ. ಹಾಗೇ ಬೈಬಲ್ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ. ಅಣ್ಣ ದಿನಪ್ರತ್ರಿಕೆ ಹಂಚುತ್ತಿದ್ರೆ, ಅಕ್ಕ, ತಂಗಿಯರು ಕಿತ್ತಾಳೆ ಹಣ್ಣು ಮಾರಾಟ ಮಾಡುತ್ತಿದ್ದರು. ವಿಕ್ಟರ್ ಕುಟುಂಬ ಹೊಟ್ಟೆಪಾಡಿಗಾಗಿ ಮಾಡದ ಕೆಲಸವಿಲ್ಲ. ಪಡದ ಕಷ್ಟವಿಲ್ಲ. ಒಂದೊಂದು ದಿನ ಒಂದೊಂದು ಕೆಲಸ ಮಾಡುತ್ತಿದ್ದ ಈತನ ದಿನಚರಿಯನ್ನು ನೋಡುತ್ತಿದ್ದ ಗೆಳೆಯರು ಲೇವಡಿ ಮಾಡುತ್ತಿದ್ದರು. ಆದ್ರೆ ತಾನೊಂದು ದಿನ ಅಪ್ರತಿಮ ಫುಟ್‍ಬಾಲ್ ಆಟಗಾರನಾಗುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ.

ಶಾಲಾ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ವಿಕ್ಟರ್, ನೈಜಿರಿಯಾದ 17 ವಯೋಮಿತಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಮಾತ್ರ ಪವಾಡವೇ ಸರಿ. ಕೈಯಲ್ಲಿ ಕಾಸಿಲ್ಲದೆ ಬಸ್‍ನಲ್ಲಿ ಪ್ರಯಾಣ ಮಾಡಿ ಮೈದಾನಕ್ಕೆ ತಲುಪಿದಾಗ ತನಗೆ ಅವಕಾಶವೇ ಸಿಗಲ್ಲ ಎಂದು ಅಂದುಕೊಂಡಿದ್ದ. ಸುಮಾರು 900 ಹುಡುಗರು ಆಯ್ಕೆ ಟ್ರಯಲ್ಸ್‍ಗೆ ಬಂದಿದ್ದರು. ಕೊನೆಯದಾಗಿ 15 ನಿಮಿಷಗಳ ಕಾಲ ಆಡುವ ಅವಕಾಶ ವಿಕ್ಟರ್‍ಗೆ ಸಿಕ್ಕಿತ್ತು. ಈ 15 ನಿಮಿಷದಲ್ಲಿ 2 ಗೋಲು ದಾಖಲಿಸಿ ತಂಡಕ್ಕೆ ಆಯ್ಕೆಯಾಗಿದ್ದ. ಅಲ್ಲದೆ 17 ವಯೋಮಿತಿ ಫಿಫಾ ವಿಶ್ವಕಪ್‍ನಲ್ಲಿ ಬರೋಬ್ಬರಿ 10 ಗೋಲು ದಾಖಲಿಸಿ ನೈಜಿರಿಯಾ ತಂಡವನ್ನು ಚಾಂಪಿಯನ್‍ಪಟ್ಟಕ್ಕೇರಿಸಿದ್ದ. ನಂತರ ವಿಕ್ಟರ್ ಒಸಿಮ್ಹೆನ್ ಹಿಂತಿರುಗಿ ನೋಡಲೇ ಇಲ್ಲ. ನೋಡ ನೋಡ ನೋಡುತ್ತಲೇ ಯೂರೋಪಿಯನ್ ಮತ್ತು ಆಫ್ರಿಕನ್ ಲೀಗ್ ಟೂರ್ನಿ ಸುಲ್ತಾನಾಗಿ ಮೆರೆದಾಡುತ್ತಿದ್ದಾನೆ.

ಯೂರೋಪಿಯನ್ ಲೀಗ್‍ಗೆ ಕಾಲಿಟ್ಟ ನಂತರ ವಿಕ್ಟರ್ ಒಸಿಮ್ಹೆನ್ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದ. ಜರ್ಮನಿಯ ವೋಲ್ಟ್ಸ್ ಬರ್ಗ್, ಬೆಲ್ಜಿಯಂ ಚಾರ್ಲೆರಾಯ್, ಫ್ರಾನ್ಸ್‍ನ ಲಿಲ್ಲಿ, ಇಟಲಿಯ ನಾಪೋಲಿ ಕ್ಲಬ್ ಪರ ಆಡಿದ್ದ ಒಸಿಮ್ಹೆನ್, 2022ರಲ್ಲಿ ನಾಪೋಲಿ ತಂಡವನ್ನು 33 ವರ್ಷಗಳ ಬಳಿಕ ಚಾಂಪಿಯನ್‍ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಸದ್ಯ ಟರ್ಕಿಯ ಗಲಾಟಸರೈ ತಂಡದಲ್ಲಿ ಆಡುತ್ತಿದ್ದಾನೆ. ಈತನ ಆಟಕ್ಕೆ ಫಿದಾ ಆಗಿರುವ ಪ್ರತಿಷ್ಠಿತ ಮ್ಯಾಂಚೈಸ್ಟರ್ ಕ್ಲಬ್ ವಿಕ್ಟರ್‍ನನ್ನು ಖರೀದಿ ಮಾಡುವ ಉಮೇದಿನಲ್ಲಿದೆ.

ಅಂದ ಹಾಗೇ, ವಿಕ್ಟರ್ ಒಸಿಮ್ಹೆನ್ ಮುಖಕ್ಕೆ ಹಾಕುವ ಕಪ್ಪು ಮಾಸ್ಕ್ ಹಿಂದೆ ಭೀಕರ ದುರಂತದ ಕಥೆ ಇದೆ. ಮೈದಾನದಲ್ಲಿ ಗೂಳಿಯಂತೆ ಮುನ್ನುಗ್ಗುವ ವಿಕ್ಟರ್‍ಗೆ ಭಯವೇ ಇರಲ್ಲ. 2021ರ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಡಿಪೆಂಡರ್ ಜೊತೆ ಪರಸ್ಪರ ಡಿಕ್ಕಿ ಹೊಡೆದಾಗ ವಿಕ್ಟರ್‍ನ ಕಣ್ಣುಗುಡ್ಡೆಗಳು ಹೊರಬಂದಿದ್ದವು. ಅಲ್ಲದೆ ಮುಖದ ಮೂಳೆಗಳು ಪುಡಿ ಪುಡಿಯಾಗಿದ್ದವು. ಇದನ್ನು ಸರಿಪಡಿಸಲು ಮುಖಕ್ಕೆ 18 ಟೈಟಾನಿಯಂ ಸ್ಕ್ರೂ ಹಾಗೂ ಆರು ಪ್ಲೇಟ್‍ಗಳನ್ನು ಅಳವಡಿಸಲಾಗಿತ್ತು. ಇನ್ನೆನು ವಿಕ್ಟರ್ ಆಟ ಮುಗಿದೇ ಹೋಯ್ತು ಎಂದು ಅಂದುಕೊಳ್ಳುವಷ್ಟರಲ್ಲಿ ಕೇವಲ ಆರೇ ಆರು ತಿಂಗಳಲ್ಲಿ ಹೊಸ ಅವತಾರದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ. ಮುಖಕ್ಕೆ ರಕ್ಷಣಾ ಕವಚವಾಗಿ ಕಪ್ಪು ಬಣ್ಣದ ಮಾಸ್ಕ್ ಧರಿಸಿಕೊಂಡು ಆಟವಾಡಲು ಶುರು ಮಾಡಿದ್ದ. ಇವತ್ತು ಬ್ಲ್ಯಾಕ್ ಮಾಸ್ಕ್, ವಿಕ್ಟರ್ ಒಸಿಮ್ಹೆನ್‍ನ ಸಿಗ್ನೇಚರ್ ಸ್ಟೈಲ್ ಆಗಿದೆ. ಆತನ ಅಭಿಮಾನಿಗಳು ಕೂಡ ಈ ಮಾಸ್ಕ್ ಹಾಕೊಂಡೇ ಆತನ ಆಟವನ್ನು ನೋಡಿ ಎಂಜಾಯ್ ಮಾಡುತ್ತಾರೆ.

ಕೊನೆಯದಾಗಿ ಇವತ್ತು ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿಲ್ಲ ಎಂಬ ವೇದನೆ ವಿಕ್ಟರ್‍ಗೆ ಇರಬಹುದು. ಆದ್ರೆ ವಿಕ್ಟರ್‍ನ ಜೀವನದ ಅತೀ ದೊಡ್ಡ ಗೆಲುವು ಯಾವುದು ಗೊತ್ತಾ..? ಅದು ಗೆದ್ದ ಟ್ರೋಫಿಗಳಲ್ಲ. ಹೊಡೆದ ಗೋಲುಗಳೂ ಅಲ್ಲ. ದುಡ್ಡು, ಸಾಧನೆ, ಖ್ಯಾತಿ ಯಾವುದು ಅಲ್ಲ. ಬದಲಾಗಿ ತಾನು ಪ್ರೀತಿಸುವ ಕುಟುಂಬವನ್ನು ಬಡತನದಿಂದ ಪಾರು ಮಾಡಿರುವುದೇ ನನ್ನ ಜೀವನ ಅತೀ ದೊಡ್ಡ ಗೆಲುವು. ಬಡತದಲ್ಲಿದ್ದುಕೊಂಡು ಬದುಕಿಗಾಗಿ ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ವಿಕ್ಟರ್ ಒಸಿಮ್ಹೆನ್ ಹೇಳುವುದು ಇಷ್ಟೇ..

ಕಡುಬಡತನದಲ್ಲಿ ನಾನು ನಡೆದು ಬಂದ ಹಾದಿಯೇ ಎಲ್ಲದಕ್ಕೂ ಸಾಕ್ಷಿ.
ನೀನು ಚರಂಡಿಯ ಪಕ್ಕದಲ್ಲೆ ಹುಟ್ಟಿರಬಹುದು.. ಕಸರಾಶಿಯ ಮಧ್ಯೆಯೇ ಹೊಟ್ಟೆಪಾಡಿಗಾಗಿ ಅಲೆದಾಡಿರಬಹುದು.. ಆದ್ರೆ ಒಂದು ಮಾತು ನೆನಪಿಡು.. ಛಲ ಬಿಡದೇ ಹೋರಾಡಿದ್ರೆ ಒಂದು ದಿನ ಇಡೀ ಜಗತ್ತು ನಿನ್ನ ಹೆಸರನ್ನು ಮುಂದಿನ ನೂರಾರು ವರ್ಷಗಳ ಕಾಲ ಜಪಿಸುವಂತೆ ಮಾಡಬಹುದು – ವಿಕ್ಟರ್ ಒಸಿಮ್ಹೆನ್

ಸನತ್ ರೈ

Tags: #fifaworldcup2026#Nigeria football superstar#saakshatv#sanathrai#Victor Osimhen black mask story#Victor Osimhen life story#Victor Osimhen rags to riches#Why Victor Osimhen is not in World CupfifaworldcupFootball inspirational stories
ShareTweetSendShare
Join us on:

Related Posts

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

by Shwetha
August 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಅವರದ್ದು ಎನ್ನಲಾದ ವೈರಲ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram