ಬಿಬಿಎಂಪಿ ಆಯುಕ್ತ ಸ್ಥಾನದಿಂದ ಬಿ.ಹೆಚ್ ಅನಿಲ್ ಕುಮಾರ್ ಎತ್ತಗಂಡಿ..!
ಬೆಂಗಳೂರು : ಬಿಬಿಎಂಪಿ ಆಯುಕ್ತ ಸ್ಥಾನದಿಂದ ಬಿ.ಹೆಚ್ ಅನಿಲ್ ಕುಮಾರ್ ಅವರನ್ನು ಎತ್ತಗಂಡಿ ಮಾಡಲಾಗಿದೆ. ಇವರ ಸ್ಥಾನಕ್ಕೆ ಮಂಜುನಾಥ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಬಿ.ಹೆಚ್ ಅನಿಲ್ ಕುಮಾರ್ ಅವರಿಗೆ ಬಿಬಿಎಂ ಆಯುಕ್ತ ಸ್ಥಾನದಿಂದ ಕೊಕ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇವರ ಮೇಲೆ ಕೊರೊನಾದ ಸಮಯದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಹಾಗೂ ಕೋಟ್ಯಾಂತರ ರೂಪಾಯಿ ಹಗರಣದ ಆರೋಪ ಕೂಡ ಇದೆ.
ಇನ್ನು ಅನಿಲ್ ಕುಮಾರ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ವಹಿಸಿಕೊಂಡಿದ್ದ ವಿ. ರಶ್ಮಿ ಮಹೇಶ್ ಅವರನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.









