ADVERTISEMENT
Monday, June 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

Shwetha by Shwetha
June 29, 2026
in ರಾಜ್ಯ, Newsbeat, Politics, State
Share on FacebookShare on TwitterShare on WhatsappShare on Telegram

ಮೈಸೂರು: ಜೆಡಿಎಸ್ ಹಿರಿಯ ನಾಯಕ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗುವಲ್ಲಿ ನನ್ನ ಬೆಂಬಲ ಮತ್ತು ಪಾತ್ರ ಬಹಳ ದೊಡ್ಡದಿದೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿ

Related posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

June 29, 2026
ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

June 29, 2026

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಟಿಡಿ, ಎಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಲು ನಾನು ನೀಡಿದ ಬೆಂಬಲವೇ ಪ್ರಮುಖ ಕಾರಣ. ಅವರು ಕೂಡ ನಾನು ಸಚಿವನಾಗಲು ಸಹಾಯ ಮಾಡಿದ್ದಾರೆ ಎನ್ನುವುದನ್ನು ಮರೆಯುವುದಿಲ್ಲ. ಇನ್ನು ರಾಜ್ಯಾದ್ಯಂತ ನಡೆದ ಕುಮಾರಪರ್ವ ಸಮಾವೇಶಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನತೆ ನೀಡಿದ ಬೆಂಬಲ ಅತ್ಯಂತ ದೊಡ್ಡದು. ಇಂತಹ ಯಶಸ್ಸು ಬೇರೆಲ್ಲೂ ಸಿಕ್ಕಿರಲಿಲ್ಲ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಪಕ್ಷಕ್ಕಿಂತ ನನಗೆ ಜನರೇ ಮುಖ್ಯ

ಜಿಟಿಡಿ ಅವರು ತಮ್ಮ ಎರಡೂ ಕಾಲುಗಳನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ನನ್ನ ಬಗ್ಗೆ ಏನು ಹೇಳಿದ್ದಾರೋ ನನಗೆ ತಿಳಿಯದು. ಆದರೆ ನನಗೆ ರಾಜಕಾರಣಕ್ಕಿಂತ ನನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ ಮತ್ತು ಅವರ ಅಭಿವೃದ್ಧಿಯೇ ನನ್ನ ಗುರಿ. 2028ರ ಚುನಾವಣೆಯಲ್ಲೂ ನನ್ನನ್ನೇ ಸ್ಪರ್ಧಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಜನರ ಆಶೀರ್ವಾದ ಇರುವವರೆಗೆ ನನಗೆ ಯಾವುದರ ಭಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸೇರ್ಪಡೆ ವದಂತಿಗೆ ಸ್ಪಷ್ಟನೆ

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೆ ಜಿಟಿಡಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರ ಪರ ಮಾತನಾಡಿದ ತಕ್ಷಣ ಕಾಂಗ್ರೆಸ್ ಸೇರುತ್ತೇನೆ ಎಂದರ್ಥವಲ್ಲ. ನಾನು ಡಿ ಕೆ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿಲ್ಲ. ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಅನುದಾನ ನೀಡಿದೆ, ಅದನ್ನು ಬಳಸಿಕೊಂಡು ಅಭಿವೃದ್ಧಿ ಮಾಡುವುದು ನನ್ನ ಕೆಲಸ ಎಂದು ತಿಳಿಸಿದರು.

ತಮ್ಮ ಪುತ್ರ ಹರೀಶ್ ಗೌಡ ಅವರೊಂದಿಗಿನ ಮುನಿಸಿನ ಬಗ್ಗೆಯೂ ಮಾತನಾಡಿದ ಜಿಟಿಡಿ, ಯಾವ ಕುಟುಂಬದಲ್ಲಿ ತಾನೇ ಸಣ್ಣಪುಟ್ಟ ಜಗಳಗಳು ಇರುವುದಿಲ್ಲ? ಪ್ರತಿಯೊಂದು ಕುಟುಂಬದಲ್ಲೂ ಭಿನ್ನಾಭಿಪ್ರಾಯಗಳು ಸಹಜ. ನಾವು ಮತ್ತೆ ಒಂದಾಗುವುದಿಲ್ಲ ಎಂದು ಭಾವಿಸುವವರು ಮೂರ್ಖರು ಮಾತ್ರ. ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ShareTweetSendShare
Join us on:

Related Posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

by Shwetha
June 29, 2026
0

ಬೆಂಗಳೂರು: ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲ ಹಾಗೂ ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದ ಬೊಕ್ಕಸಕ್ಕೆ ನೂರು ಕೋಟಿ...

ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

by Shwetha
June 29, 2026
0

ಮೈಸೂರು: ಮುಖ್ಯಮಂತ್ರಿ ಸ್ಥಾನ ಎಂಬುದು ಶಾಶ್ವತವಲ್ಲ, ಅದು ಬಂದು ಹೋಗುವಂತದ್ದು. ಆದರೆ ಜನರ ಹೃದಯದಲ್ಲಿ ಪಡೆಯುವ ಸ್ಥಾನ ಎಂದಿಗೂ ಅಳಿಯದ ಶಾಶ್ವತ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ...

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
June 29, 2026
0

ಬೆಂಗಳೂರು: ರಾಷ್ಟ್ರೀಯ ಭದ್ರತೆ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ರಾಜ್ಯ ಸರ್ಕಾರವು ಯಾವಾಗಲೂ ಕೇಂದ್ರದ ಒಕ್ಕೂಟ ಸರ್ಕಾರದ ಪರವಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ದೇಶದ್ರೋಹಿಗಳ...

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

by Shwetha
June 29, 2026
0

ಮಂಗಳೂರು: ಕೆಂಪೇಗೌಡ ದಿನಾಚರಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ....

ಪೊಲೀಸ್ ಕಸ್ಟಡಿಯಲ್ಲೂ ಬಿಯರ್ ಬೇಕೆಂದು ಹಠ ಹಿಡಿದ ಹಂತಕಿ ಸಿಯಾ ಗೋಯಲ್: ಸಿಯಾ ಗೋಯಲ್ ಕುಡಿತದ ಚಟ ಮುಚ್ಚಿಟ್ಟಿದ್ದ ಪೋಷಕರು ಉದ್ಯಮಿ ಕೊಲೆಗಾರ್ತಿಯ ವಿಚಿತ್ರ ಬೇಡಿಕೆಗೆ ಪೊಲೀಸರೇ ಶಾಕ್

ಪೊಲೀಸ್ ಕಸ್ಟಡಿಯಲ್ಲೂ ಬಿಯರ್ ಬೇಕೆಂದು ಹಠ ಹಿಡಿದ ಹಂತಕಿ ಸಿಯಾ ಗೋಯಲ್: ಸಿಯಾ ಗೋಯಲ್ ಕುಡಿತದ ಚಟ ಮುಚ್ಚಿಟ್ಟಿದ್ದ ಪೋಷಕರು ಉದ್ಯಮಿ ಕೊಲೆಗಾರ್ತಿಯ ವಿಚಿತ್ರ ಬೇಡಿಕೆಗೆ ಪೊಲೀಸರೇ ಶಾಕ್

by Shwetha
June 29, 2026
0

ಪುಣೆ: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಂತೆ ಹಂತಕಿ ಹಾಗೂ ಭಾವಿ ಪತ್ನಿ ಸಿಯಾ ಗೋಯಲ್ ಕುರಿತಾದ ಅಚ್ಚರಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram